Download Our App

Follow us

Home » ಜಿಲ್ಲೆ » ಚಿನ್ನದ ನಾಡಿನ ಇತಿಹಾಸದಲ್ಲೇ RSS ಮೈಲಿಗಲ್ಲು – ಕ್ಲಾಕ್ ಟವರ್ ಮೂಲಕ ಶೋಭಾ ಯಾತ್ರೆಯ ಪಥ ಸಂಚಲನ!

ಚಿನ್ನದ ನಾಡಿನ ಇತಿಹಾಸದಲ್ಲೇ RSS ಮೈಲಿಗಲ್ಲು – ಕ್ಲಾಕ್ ಟವರ್ ಮೂಲಕ ಶೋಭಾ ಯಾತ್ರೆಯ ಪಥ ಸಂಚಲನ!

ಕೋಲಾರ : ಚಿನ್ನದ ನಾಡು ಕೋಲಾರದ ಕ್ಲಾಕ್ ಟವರ್ ಮೂಲಕ RSS ಶೋಭಾ ಯಾತ್ರೆಯ ಪಥ ಸಂಚಲನ ನಡೆಸಿದೆ. ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಕೋಲಾರದ ಕ್ಲಾಕ್ ಟವರ್ ಮೂಲಕ ಆರ್​​ಎಸ್​ಎಸ್​ ಶೋಭಾಯತ್ರೆಯ ಪಥಸಂಚಲನ ನಡೆಸಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಹಿನ್ನೆಲೆಯಲ್ಲಿ ಬರೋಬ್ಬರಿ 15 ಕಿಲೋ ಮೀಟರ್  ದೀರ್ಘ ಪಥ ಸಂಚಲನ ನಡೆಯಿತು.

ಕೋಲಾರ ತಾಲೂಕಿನ ವಕ್ಕಲೇರಿ ಗ್ರಾಮದಿಂದ ಜೂನಿಯರ್ ಕಾಲೇಜು ಆವರಣ ತನಕ ಪಥಸಂಚಲನ ನಡೆದಿದ್ದು ಕ್ಲಾಕ್ ಟವರ್ ಮೂಲಕ ಜೂನಿಯರ್ ಕಾಲೇಜು ಆವರಣ ತಲುಪಿತು. ಸೂಕ್ಷ್ಮ ಪ್ರದೇಶವಾಗಿರುವ ಕ್ಲಾಕ್ ಟವರ್ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೆಕ್ಷನ್​​ 144 ನಿಷೇಧಾಜ್ಞೆ ವಿಧಿಸಿ ಪೊಲೀಸರು ಫುಲ್​ ಅಲರ್ಟ್​ ಆಗಿದ್ದರು.

ಕ್ಲಾಕ್ ಟವರ್
    ಕ್ಲಾಕ್ ಟವರ್

ಇನ್ನು ಆರ್​​ಎಸ್​ಎಸ್​ ಪಥ ಸಂಚಲನಕ್ಕೆ ಕ್ಲಾಕ್ ಟವರ್ ಮೂಲಕ ತೆರಳಲು ಜಿಲ್ಲಾಡಳಿತ ಅನುಮತಿ ನೀಡದ ಹಿನ್ನೆಲೆ RSS ಮುಖಂಡರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್​ನಿಂದ ಅನುಮತಿ ತಂದು ಕ್ಲಾಕ್ ಟವರ್ ಮೂಲಕ ಪಥ ಸಂಚಲನ ನಡೆಸಲಾಯ್ತು.

ಕ್ಲಾಕ್ ಟವರ್ ಸಂಪರ್ಕಿಸುವ ರಸ್ತೆಗಳನ್ನು ಪೊಲೀಸರು ಬಂದ್ ಮಾಡಿದ್ದರು.  ಕೋಲಾರ ಎಸ್​ಪಿ ನಿಖಿಲ್ ನೇತೃತ್ವದಲ್ಲಿ ಹೆಜ್ಜೆ ಹೆಜ್ಜೆಗೂ1 ಸಾವಿರಕ್ಕೂ ಹೆಚ್ಚು ಪೊಲೀಸರು ಕಣ್ಗಾವಲು ಇಟ್ಟಿದ್ದರು. ಆರ್​​ಎಸ್​ಎಸ್​ ಪಥ ಸಂಚಲನಕ್ಕೆ ಅಗತ್ಯ ಸಹಕಾರ ನೀಡುವಂತೆ ಮುಸ್ಲಿಂ ಮುಖಂಡರಿಗೆ ಪೊಲೀಸರು ಮನವಿ ಮಾಡಿದರು.

ಇದನ್ನೂ ಓದಿ : ಕೆರೆಗೋಡಿನಲ್ಲಿ ನೂತನ ಪೊಲೀಸ್ ಕಚೇರಿ ಉದ್ಘಾಟಿಸಿದ ಸಚಿವ ಚಲುವರಾಯಸ್ವಾಮಿ – MLA ರವಿಕುಮಾರ್​ ಗೌಡ ಸೇರಿ ಹಲವರು ಭಾಗಿ!

Leave a Comment

DG Ad

RELATED LATEST NEWS

Top Headlines

ಸುನಾಮಿ ಕಿಟ್ಟಿ ಅಭಿನಯದ “ಕೋರ” ಚಿತ್ರದ ಟ್ರೇಲರ್ ರಿಲೀಸ್ – ಫೆಬ್ರವರಿ 7 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ!

ಬೆಂಗಳೂರು : ರತ್ನಮ್ಮ‌ ಮೂವೀಸ್ ಲಾಂಛನದಲ್ಲಿ ಪಿ.ಮೂರ್ತಿ ನಿರ್ಮಿಸಿರುವ ಒರಟ ಶ್ರೀ ನಿರ್ದೇಶನದ ಹಾಗೂ ರಿಯಾಲಿಟಿ ಶೋ ಮೂಲಕ ನಾಡಿನ ಜನರ ಗಮನ ಸೆಳೆದಿದ್ದ ಸುನಾಮಿ ಕಿಟ್ಟಿ ನಾಯಕನಾಗಿ

Live Cricket

Add Your Heading Text Here