Download Our App

Follow us

Home » ಜಿಲ್ಲೆ » ಹಾಸನ ಬಳಿಕ ಮತ್ತೊಬ್ಬ ಇಂಜಿನಿಯರ್ ಸೂಸೈಡ್​​ – ಮನೆಯಲ್ಲಿ ಟೀ ಕುಡಿದು ಹೊರಟ ಅಧಿಕಾರಿಗೆ ಆಗಿದ್ದೇನು?

ಹಾಸನ ಬಳಿಕ ಮತ್ತೊಬ್ಬ ಇಂಜಿನಿಯರ್ ಸೂಸೈಡ್​​ – ಮನೆಯಲ್ಲಿ ಟೀ ಕುಡಿದು ಹೊರಟ ಅಧಿಕಾರಿಗೆ ಆಗಿದ್ದೇನು?

ಗದಗ : ರಾಜ್ಯದಲ್ಲಿ ಸದ್ಯಕ್ಕೆ ಆತ್ಮಹತ್ಯೆ ಪ್ರಕರಣಗಳು ನಿಲ್ಲುವ ಹಾಗೇ ಕಾಣ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ವಿಚಾರಕ್ಕೆ ರಾಜ್ಯದಲ್ಲಿ ಸೂಸೈಡ್ ಕೇಸ್​ಗಳು ಹೆಚ್ಚಾಗ್ತನೇ ಇವೆ. ಅದೇ ರೀತಿ ಗದಗ ಜಿಲ್ಲೆಯ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಇಂಜಿನಿಯರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗದಗ ನಗರದ ನಿವಾಸಿಯಾಗಿರುವ ಪ್ರೊಜೆಕ್ಟ್ ಇಂಜಿನಿಯರ್ 54 ವರ್ಷದ ಶಂಕರಗೌಡ ಪಾಟೀಲ್ ಮೃತ ದುರ್ದೈವಿ. ಗದಗದ ಕೇಂದ್ರ ಬಸ್ ನಿಲ್ದಾಣ ಬಳಿಯ ಪಲ್ಲವಿ ಲಾಡ್ಜ್​ನಲ್ಲಿ ಶಂಕರಗೌಡ ಪಾಟೀಲ್ ನೇಣಿಗೆ ಶರಣಾಗಿದ್ದಾರೆ.

ಇಂದು ಬೆಳಗ್ಗೆ 7.30ಕ್ಕೆ ಚಹಾ ಕುಡಿದು ಮನೆಯಿಂದ ಹೊರಬಂದಿದ್ದ ಶಂಕರಗೌಡ ಪಾಟೀಲ್, ಲಾಡ್ಜ್​ಗೆ ಆಗಮಿಸಿ ರೂಂ ನಂಬರ್‌ 513ರಲ್ಲಿ ತಂಗಿದ್ದರು. ಕೆಲ ಸಮಯದ ಬಳಿಕ ರೂಮ್​ನ ಫ್ಯಾನ್​​​ಗೆ ನೇಣು ಹಾಕಿಕೊಂಡು ಶಂಕರಗೌಡ ಪಾಟೀಲ್ ಸೂಸೈಡ್​ ಮಾಡಿಕೊಂಡಿದ್ದಾರೆ.

ಇದೊಂದು ಕೊಲೆ ಎಂದು ಕುಟುಂಬಸ್ಥರು ಆರೋಪಿಸಿದ್ದು ಇಂಜಿನಿಯರ್​ ಶಂಕರಗೌಡ ಪಾಟೀಲ್ ಆತ್ಮಹತ್ಯೆಯು ಹಲವು ಅನುಮಾನಗಳನ್ನು ಮೂಡಿಸಿದೆ. ಈ ಸಂಬಂಧ ಬೆಟಗೇರಿ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ : ಆಳ ಪ್ರಪಾತಕ್ಕೆ ಜಾರಿದ ಅಯ್ಯಪ್ಪ ಮಾಲಾಧಾರಿಗಳಿದ್ದ ಬಸ್‌ – ಚಾಲಕ ದುರ್ಮರಣ..!

Leave a Comment

DG Ad

RELATED LATEST NEWS

Top Headlines

ಪ್ರಯಾಣಿಕರಿಗೆ ಮತ್ತೊಂದು ಬಿಗ್​ ಶಾಕ್ – ಟಿಕೆಟ್​ ಬೆನ್ನಲ್ಲೇ ಬಸ್ ಪಾಸ್ ದರವೂ ದುಬಾರಿ.. ಇಲ್ಲಿದೆ ಡೀಟೇಲ್ಸ್​!

ಬೆಂಗಳೂರು : ಹೊಸ ವರ್ಷಕ್ಕೆ ಹೊರೆ ​ಎಂಬಂತೆ ಕರ್ನಾಟಕ ಸಾರಿಗೆ ಇಲಾಖೆ ಕೆಲ ದಿನಗಳ ಹಿಂದೆಷ್ಟೇ ನಾಲ್ಕೂ ನಿಗಮಗಳ ಬಸ್​ ಟಿಕೆಟ್​ ದರ ಶೇ 15 ರಷ್ಟು

Live Cricket

Add Your Heading Text Here