Download Our App

Follow us

Home » ಕ್ರೀಡೆ » 450 ಕೋಟಿ ​ಹಗರಣ – ಶುಭ್​ಮನ್ ಗಿಲ್ ಸೇರಿ ನಾಲ್ವರು ಸ್ಟಾರ್ ಕ್ರಿಕೆಟಿಗರಿಗೆ CID ಸಮನ್ಸ್!

450 ಕೋಟಿ ​ಹಗರಣ – ಶುಭ್​ಮನ್ ಗಿಲ್ ಸೇರಿ ನಾಲ್ವರು ಸ್ಟಾರ್ ಕ್ರಿಕೆಟಿಗರಿಗೆ CID ಸಮನ್ಸ್!

ಗುಜರಾತ್ : ಬರೋಬ್ಬರಿ 450 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಬೇಕೆಂದು ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್​ ಶುಭ್​ಮನ್​ ಗಿಲ್ ಹಾಗೂ ಗುಜರಾತ್ ಟೈಟಾನ್ಸ್ ತಂಡದ ಆಟಗಾರರಾದ ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ ಮತ್ತು ಮೋಹಿತ್ ಶರ್ಮಾ ಅವರಿಗೆ ಸಿಐಡಿ ಸಮನ್ಸ್ ನೀಡಿದೆ.

ಪ್ರಕರಣವೇನು? ಭೂಪೇಂದ್ರಸಿನ್ಹ್ ಝಾಲಾ ನೇತೃತ್ವದ BZ ಫೈನಾನ್ಶಿಯಲ್ ಸರ್ವಿಸಸ್ ಹೆಸರಿನ ಕಂಪನಿ, ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿದರ ನೀಡುವುದಾಗಿ ಹೂಡಿಕೆದಾರರಿಗೆ ಭರವಸೆ ನೀಡಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿಸಿದೆ. ಆದರೆ ಕೊಟ್ಟ ಮಾತಿನಂತೆ ಹೂಡಿಕೆದಾರರಿಗೆ ಹೆಚ್ಚಿನ ಬಡ್ಡಿದರ ನೀಡುವಲ್ಲಿ ಕಂಪನಿ ವಿಫಲವಾದ ಕಾರಣ ಇದೀಗ ಹೂಡಿಕೆದಾರರು ಪೊಲೀಸರಿಗೆ ದೂರು ನೀಡಿದ್ದಾರೆ.

ವರದಿಗಳ ಪ್ರಕಾರ, ಟೀಂ ಇಂಡಿಯಾ ಆಟಗಾರ ಶುಭ್​ಮನ್​ ಗಿಲ್, ಗುಜರಾತ್ ಟೈಟಾನ್ಸ್ ತಂಡದ ಪರ ಕಣಕ್ಕಿಳಿಯುವ ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ ಮತ್ತು ಮೋಹಿತ್ ಶರ್ಮಾ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಈ ಕುರಿತು ಸಿಐಡಿ ಇದೀಗ ಈ ನಾಲ್ವರು ಕ್ರಿಕೆಟಿಗರನ್ನು ವಿಚಾರಣೆ ನಡೆಸಲಿದೆ.

ಗಿಲ್ ಈ ಕಂಪೆನಿಯಲ್ಲಿ 1.95 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರೆ, ಇತರ ಆಟಗಾರರು ಸಣ್ಣ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ. ಗಿಲ್ ಪ್ರಸ್ತುತ ಆಸ್ಟ್ರೇಲಿಯಾದಲ್ಲಿರುವುದರಿಂದ, ಅವರು ಭಾರತಕ್ಕೆ ಹಿಂದಿರುಗಿದ ನಂತರ ಸಿಐಡಿ ಅವರನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ಕಳೆದ ತಿಂಗಳು BZ ಗ್ರೂಪ್​ನ ಭೂಪೇಂದ್ರಸಿನ್ಹ್ ಝಾಲಾ ಅವರನ್ನು ಬಂಧಿಸಿ ಸಿಐಡಿ ತನಿಖೆಗೊಳಪಡಿಸಿದೆ.

ಇದನ್ನೂ ಓದಿ : ಸಮಂತಾ ಜೊತೆ ಶೂಟಿಂಗ್, ಶೋಭಿತಾ ಜೊತೆ ಡೇಟಿಂಗ್​ – ಬಯಲಾಯ್ತು ನಾಗ ಚೈತನ್ಯ ಡಿವೋರ್ಸ್​ಗೆ ಅಸಲಿ​ ಕಾರಣ!

Leave a Comment

DG Ad

RELATED LATEST NEWS

Top Headlines

ಶರಣಾಗುವವರಿಗೆ ಕೊಡ್ತಿರೋ ಪರಿಹಾರ ನಮಗೂ ಕೊಡಿ – ಮೃತ ನಕ್ಸಲ್​​ ವಿಕ್ರಂ ಸಹೋದರಿ ಮನವಿ..!

ಉಡುಪಿ : ಕಳೆದ ನವೆಂಬರ್ ತಿಂಗಳು ನಡೆದಿದ್ದ ನಕ್ಸಲ್ ನಾಯಕ ವಿಕ್ರಂ ಗೌಡ ಎನ್​ಕೌಂಟರ್​ನಿಂದ ರಾಜ್ಯದಲ್ಲಿ ನಕ್ಸಲರು ಭಯಭೀತರಾಗಿದ್ದಾರೆ. ಇಂದು ಸುಮಾರು ಆರು ಜನ ನಕ್ಸಲರು ಶರಣಾಗತಿಯಾಗಲಿದ್ದಾರೆ.

Live Cricket

Add Your Heading Text Here