Download Our App

Follow us

Home » ಸಿನಿಮಾ » ಸಮಂತಾ ಜೊತೆ ಶೂಟಿಂಗ್, ಶೋಭಿತಾ ಜೊತೆ ಡೇಟಿಂಗ್​ – ಬಯಲಾಯ್ತು ನಾಗ ಚೈತನ್ಯ ಡಿವೋರ್ಸ್​ಗೆ ಅಸಲಿ​ ಕಾರಣ!

ಸಮಂತಾ ಜೊತೆ ಶೂಟಿಂಗ್, ಶೋಭಿತಾ ಜೊತೆ ಡೇಟಿಂಗ್​ – ಬಯಲಾಯ್ತು ನಾಗ ಚೈತನ್ಯ ಡಿವೋರ್ಸ್​ಗೆ ಅಸಲಿ​ ಕಾರಣ!

ನಟ ನಾಗ ಚೈತನ್ಯ ಮತ್ತು ಸಮಂತಾ ಡಿವೋರ್ಸ್ ಪಡೆದು 3 ವರ್ಷ ಕಳೆದ್ರು ಇನ್ನೂ ಜನ ಈ ಜೋಡಿ ದೂರವಾಗಲೂ ಕಾರಣವೇನು ಅಂತ ಜನ ಹುಡುಕುತ್ತಿದ್ದಾರೆ. ಈ ಹೊತ್ತಲ್ಲೇ ಇದೀಗ ಇಬ್ಬರು ಸ್ಟಾರ್​ಗಳ ವಿಚ್ಛೇದನಕ್ಕೆ ಅಸಲಿ ಕಾರಣ ಏನೆಂಬುದು ಬಯಲಾಗಿದೆ.

ನಟ ನಾಗ ಚೈತನ್ಯ ಮತ್ತು ನಟಿ ಸಮಂತಾ ಇಬ್ಬರು ಪ್ರೀತಿಸಿ, ಮನೆಯವರನ್ನು ಒಪ್ಪಿಸಿ 2017ರಲ್ಲಿ ಮದುವೆಯಾಗಿದ್ದರು. ಮದುವೆಯ ನಂತರ ಇಬ್ಬರೂ ‘ಮಜಿಲಿ’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಕೂಡ ಮಾಡಿದ್ದರು. ಮಜಿಲಿ ಸಿನಿಮಾದ ಟೈಮ್​ನಲ್ಲೇ ನಟಿ ಶೋಭಿತಾ ಧೂಳಿಪಾಲ ಕೂಡ ನಾಗ ಚೈತನ್ಯ ಅವರನ್ನ ಭೇಟಿಯಾಗಿದ್ದರಂತೆ. ಹಾಗಾಗಿ ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನಕ್ಕೆ ಶೋಭಿತಾ ಜೊತೆಗಿನ ಸ್ನೇಹವೇ ಕಾರಣ ಎನ್ನುವ ಸುದ್ದಿ ಇದೀಗ ಎಲ್ಲೆಡೆ ಹಬ್ಬಿದೆ. ಈ ಬಗ್ಗೆ ವರದಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು.. ನಾಗ ಚೈತನ್ಯ ಇಂಡಸ್ಟ್ರಿಗೆ ಕಾಲಿಟ್ಟು ಸ್ಟಾರ್ ಆಗಿ ಹೆಸರು ಮಾಡ್ತಿದ್ದ ವೇಳೆಯೇ ಸಮಂತಾ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಕೆಲ ವರ್ಷಗಳ ಡೇಟಿಂಗ್ ಬಳಿ ಮದುವೆಯಾಗಿದ್ದರು. ಈ ಕಪಲ್ ಗೆ ಅಪಾರ ಅಭಿಮಾನಿಗಳು ಕೂಡ ಇದ್ದರು. ಆದ್ರೆ 2021ರಲ್ಲಿ ಸಮಂತಾ ಡಿವೋರ್ಸ್ ಅನೌನ್ಸ್ ಮಾಡಿ ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟಿದ್ದರು.

ವಿಚ್ಛೇದನದ ಕೆಲವೇ ದಿನಗಳಲ್ಲಿ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ನಡುವಿನ ಸಂಬಂಧದ ಬಗ್ಗೆ ರೂಮರ್ಸ್ ಹರಿದಾಡಲು ಶುರುವಾಯ್ತು. ಈ ವದಂತಿಗಳು ನಿಜವೇ ಆಯ್ತು. ಆಗಸ್ಟ್ 8 ರಂದು ಇಬ್ಬರೂ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಾದ ನಂತರ ಡಿಸೆಂಬರ್​ನಲ್ಲಿ ಕೆಲವು ಕುಟುಂಬಸ್ಥರು ಮತ್ತು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಇಬ್ಬರೂ ಅದ್ಧೂರಿಯಾಗಿ ವಿವಾಹವಾಗಿದ್ದರು.

ನಾಗ ಚೈತನ್ಯ ಮತ್ತು ಸಮಂತಾ ‘ಮಜಿಲಿ’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಚಿತ್ರದಲ್ಲಿ ನಾಗ ಚೈತನ್ಯ ಮೊದಲು ಪ್ರೀತಿಸಿದ್ದ ದಿವ್ಯಾಂಶ್ ಕೌಶಿಕ್ ಕೂಡ ಕಾಣಿಸಿಕೊಂಡಿದ್ದರು. ಮತ್ತೊಂದೆಡೆ, ಸಮಂತಾ, ನಾಗ ಚೈತನ್ಯನನ್ನು ಪ್ರೀತಿಸುತ್ತಾರೆ. ಆದರೆ ದಿವ್ಯಾಂಶ್ ಅವರಿಗೂ ಮೊದಲು ಈ ಪಾತ್ರಕ್ಕೆ ಶೋಭಿತಾ ಧೂಳಿಪಾಲ ಅವರನ್ನು ನಿರ್ದೇಶಕ ಶಿವ ನಿರ್ವಾಣ ಆಯ್ಕೆ ಮಾಡಿದ್ದರಂತೆ. ಅಷ್ಟೇ ಅಲ್ಲದೇ ಕೆಲವು ದೃಶ್ಯಗಳನ್ನು ಸಹ ಚಿತ್ರೀಕರಿಸಿದ್ರಂತೆ. ಆದರೆ ಕೆಲವು ಕಾರಣಗಳಿಂದ ಶೋಭಿತಾ ಅವರನ್ನು ಈ ಪಾತ್ರದಿಂದ ತೆಗೆದು ಹಾಕಲಾಯಿತು ಎನ್ನಲಾಗ್ತಿದೆ.

ಈ ಸುದ್ದಿ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಶೂಟಿಂಗ್ ಸಮಯದಲ್ಲಿ ಶೋಭಿತಾ ಮತ್ತು ನಾಗ ಚೈತನ್ಯ ಸ್ನೇಹಿತರಾದ್ರು ಎಂಬ ವಿಚಾರ ತಿಳಿಯುತ್ತಿದ್ದಂತೆ, ಇಬ್ಬರ ನಡುವೆ ಮೊದಲೇ ಆತ್ಮೀಯತೆ ಇತ್ತು. ಶೋಭಿತಾ-ನಾಗ ಚೈತನ್ಯ ಸಂಬಂಧವೇ ವಿಚ್ಛೇದನಕ್ಕೆ ಕಾರಣವಾಯಿತು ಎಂದು ನೆಟ್ಟಿಗರು ಹೇಳ್ತಿದ್ದಾರೆ.

ಸಮಂತಾ ಜೊತೆ ಸಿನಿಮಾ ಶೂಟಿಂಗ್ ಮಾಡ್ತಿದ್ದ ನಾಗ ಚೈತನ್ಯ ಅದೇ ಟೈಮ್​ನಲ್ಲಿ ನಟಿ ಶೋಭಿತಾ ಜೊತೆ ಡೇಟಿಂಗ್ ಕೂಡ ಮಾಡ್ತಿದ್ರು ಎಂದು ಜನ ನಾನಾ ರೀತಿಯಲ್ಲಿ ಕಮೆಂಟ್ ಮಾಡ್ತಿದ್ದಾರೆ. ಹರಿದಾಡ್ತಿರು ಈ ಸುದ್ದಿಯಲ್ಲಿ ಎಷ್ಟು ಸತ್ಯವಿದೆ ಅನ್ನೋದು ತಿಳಿದಿಲ್ಲ. ಇದಕ್ಕೆಲ್ಲಾ ಸಮಂತಾ, ನಾಗ ಚೈತನ್ಯ ಇಬ್ಬರೇ ಉತ್ತರ ಕೊಡಬೇಕಿದೆ.

ಇದನ್ನೂ ಓದಿ : ರಾಜ್ಯ ಕಾಂಗ್ರೆಸ್​ನಲ್ಲಿ ಮತ್ತೆ ಭಾರೀ ಬಿರುಗಾಳಿ – ಫಾರಿನ್​ನಲ್ಲಿ ಡಿಸಿಎಂ..ಆಪ್ತರ ಜೊತೆ ಸಿಎಂ..!

Leave a Comment

DG Ad

RELATED LATEST NEWS

Top Headlines

‘ಗೋಲ್ಡ್ ಬ್ಯೂಟಿ’ಯಿಂದ ಸಂಕಷ್ಟಕ್ಕೆ ಸಿಲುಕಿದ್ರಾ MLA ವಿನಯ್ ಕುಲಕರ್ಣಿ? ಯಾವುದೇ ಕ್ಷಣ ನೋಟಿಸ್ ಸಾಧ್ಯತೆ!

ಬೆಂಗಳೂರು : ಚಂದ್ರಾಲೇಔಟ್‌ ಠಾಣೆಯಲ್ಲಿ ದಾಖಲಾಗಿರುವ ಐಶ್ವರ್ಯಾ ಗೌಡ ದಂಪತಿ ವಿರುದ್ಧದ ‘ಬಂಗಾರ’ ವಂಚನೆ ಪ್ರಕರಣದಲ್ಲಿ MLA ವಿನಯ್ ಕುಲಕರ್ಣಿಗೆ ಭಾರೀ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಐಶ್ವರ್ಯಾ

Live Cricket

Add Your Heading Text Here