Download Our App

Follow us

Home » ಸಿನಿಮಾ » ಎಲಿಮಿನೇಷನ್‌ನಲ್ಲಿ ಬಿಗ್​ ಟ್ವಿಸ್ಟ್ – ಈ ವಾರ ಬಿಗ್​ಬಾಸ್‌ ಮನೆಯಿಂದ ಆಚೆ ಬರೋದ್ಯಾರು?

ಎಲಿಮಿನೇಷನ್‌ನಲ್ಲಿ ಬಿಗ್​ ಟ್ವಿಸ್ಟ್ – ಈ ವಾರ ಬಿಗ್​ಬಾಸ್‌ ಮನೆಯಿಂದ ಆಚೆ ಬರೋದ್ಯಾರು?

ಕನ್ನಡದ ಜನಪ್ರಿಯ​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11, 96ನೇ ದಿನಕ್ಕೆ ಕಾಲಿಟ್ಟಿದೆ. ಸದ್ಯ ಬಿಗ್​ಬಾಸ್ ಮನೆಯಲ್ಲಿ ಒಟ್ಟು 9 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ 9 ಸ್ಪರ್ಧಿಗಳಲ್ಲಿ ಯಾರು ಈ ವಾರ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲಿದ್ದಾರೆ ಅಂತ ಕುತೂಹಲ ಮೂಡಿದೆ.

ಕಳೆದ ವಾರ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು ಒಟ್ಟು 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಅವರ ಪೈಕಿ ಐಶ್ವರ್ಯಾ ಸಿಂಧೋಗಿ ಬಿಗ್​ಬಾಸ್​ ಮನೆಯಿಂದ ಆಚೆ ಬಂದಿದ್ದರು. ಆದ್ರೆ ಈ ವಾರ ಬಿಗ್​ಬಾಸ್​ ಮನೆಯಿಂದ ಯಾವ ಸ್ಪರ್ಧಿಯೂ ಆಚೆ ಹೋಗುವುದಿಲ್ಲ. ಏಕೆಂದರೆ ಈ ವಾರ ಫ್ಯಾಮಿಲಿ ರೌಂಡ್​ ಆಗಿದ್ದ ಕಾರಣ ನಾಮಿನೇಷನ್​ ಪ್ರಕ್ರಿಯೆ ನಡೆದಿಲ್ಲ.

ಹೀಗಾಗಿ ಈ ವಾರ ಯಾವೊಬ್ಬ ಸ್ಪರ್ಧಿಯೂ ಬಿಗ್​ಬಾಸ್​ ಮನೆಯಿಂದ ಆಚೆ ಹೋಗುವುದಿಲ್ಲ. 9 ಸ್ಪರ್ಧಿಗಳು ಈ ವಾರ ಸೇಫ್​ ಆಗಿದ್ದಾರೆ. ಮುಂದಿನ ವಾರಕ್ಕೆ ಈ 9 ಜನರಲ್ಲಿ ಯಾರು ಬಿಗ್​ ಮನೆಯಿಂದ ಆಚೆ ಹೋಗಲಿದ್ದಾರೆ ಎಂದು ಕಾದು ನೋಡಬೇಕಿದೆ.​

ಇನ್ನೂ ಬಿಗ್​ಬಾಸ್​ ಮನೆಗೆ ಒಟ್ಟು 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ವಾರ ಕಳೆದಂತೆ ಬಿಗ್​ಬಾಸ್​ ಮನೆಯಿಂದ ಒಬ್ಬೊಬ್ಬರಾಗಿ ಆಚೆ ಬಂದಿದ್ದರು. ಸದ್ಯ ಬಿಗ್​ಬಾಸ್​ ಮನೆಗೆ ಉಳಿದ 9 ಸ್ಪರ್ಧಿಗಳ ಕುಟುಂಬಸ್ಥರು ಎಂಟ್ರಿ ಕೊಟ್ಟಿದ್ದಾರೆ. ‘ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ ಚೆನ್ನಾಗಿ ಆಡು ಅಂತ  ಕುಟುಂಬಸ್ಥರು 9 ಸ್ಪರ್ಧಿಗಳಿಗೂ ಕಿವಿ ಮಾತನ್ನು ಹೇಳಿದ್ದಾರೆ. ಇನ್ಮುಂದೆ ಬಿಗ್​ಬಾಸ್​ ಮನೆಯಲ್ಲಿರೋ ಸ್ಪರ್ಧಿಗಳು ಯಾವ ರೀತಿ ಟೇಕ್ ಆಫ್ ಆಗಲಿದ್ದಾರೆ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ : ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಫಸ್ಟ್ ಲುಕ್ ರಿಲೀಸ್.. ಸಿನಿಮಾ ತಂಡಕ್ಕೆ ಧ್ರುವ ಸರ್ಜಾ ಸಾಥ್..!

Leave a Comment

DG Ad

RELATED LATEST NEWS

Top Headlines

ಬೆಳ್ಳಂಬೆಳಗ್ಗೆ ನೇಪಾಳದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ – ಬಿಹಾರ, ದೆಹಲಿ, ಪಂಜಾಬ್​ನಲ್ಲೂ ನಡುಗಿದ ಭೂಮಿ..!

ದೆಹಲಿ : ಇಂದು ಮುಂಜಾನೆ ನೇಪಾಳದಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 7.1ರಷ್ಟು ದಾಖಲಾಗಿದೆ. ಭಾರತದ ಹಲವು ರಾಜ್ಯಗಳಲ್ಲೂ ಭೂಕಂಪನದ ಅನುಭವವಾಗಿದ್ದು, ಬಿಹಾರ,

Live Cricket

Add Your Heading Text Here