Download Our App

Follow us

Home » ಸಿನಿಮಾ » ಫಾರಿನ್​ನಲ್ಲಿ ಬೇಬಿ ಡಾಲ್​​ ಫುಲ್​ ಜಾಲಿ – ನ್ಯೂ ಇಯರ್​ಗೆ ಕಂಬದ ಜೊತೆ ‘ನಿವ್ವಿ’ ಕಸರತ್ತು!

ಫಾರಿನ್​ನಲ್ಲಿ ಬೇಬಿ ಡಾಲ್​​ ಫುಲ್​ ಜಾಲಿ – ನ್ಯೂ ಇಯರ್​ಗೆ ಕಂಬದ ಜೊತೆ ‘ನಿವ್ವಿ’ ಕಸರತ್ತು!

ಲಂಡನ್​ : 2025ರ ಹೊಸ ವರ್ಷ ಆರಂಭವಾಗಿದೆ. ಹಲವಾರು ಮಂದಿ ತಾವು ಆಚರಿಸಿಕೊಂಡಿರುವ ಹೊಸ ವರ್ಷದ ವಿಡಿಯೋ, ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ. ಸೆಲೆಬ್ರಿಟಿಗಳಂತೂ ವಿವಿಧ ರೀತಿಯಲ್ಲಿ ಆಚರಣೆ ಮಾಡಿದ್ದು, ಅವುಗಳನ್ನು ತಮ್ಮ ಅಭಿಮಾನಿಗಳಿಗಾಗಿ ಶೇರ್​ ಮಾಡಿಕೊಂಡಿದ್ದಾರೆ. ಬಿಗ್​ಬಾಸ್​ ಖ್ಯಾತಿಯ ಚೆಲುವೆ ನಿವೇದಿತಾ ಗೌಡ ಅವರು ಹೊಸ ವರ್ಷವನ್ನು ವಿದೇಶದಲ್ಲಿ ಸಂಭ್ರಮಿಸಿದ್ದಾರೆ.

ಗಾಯಕ ಹಾಗೂ ನಟ ಚಂದನ್ ಶೆಟ್ಟಿ ಅವರಿಂದ ಡಿವೋರ್ಸ್​ ಪಡೆದ ಬಳಿಕ ಒಂಟಿಯಾಗಿ ಲೈಫ್​ ಸಖತ್​ ಎಂಜಾಯ್​ ಮಾಡುತ್ತಿದ್ದಾರೆ ನಿವೇದಿತಾ. ಇದಾಗಲೇ ವಿದೇಶಗಳ ಟೂರ್​ ಮಾಡುತ್ತಿದ್ದಾರೆ. ಚಂದನ್ ಶೆಟ್ಟಿ ಅವರಿಂದ ದೂರವಾದ ನಂತರ ಟ್ರೋಲ್ ಪೇಜ್‌ಗಳಿಗೆ ಸದಾ ಸಿಗುವ ನಿವೇದಿತಾ ಗೌಡ ಕಳೆದೊಂದು ಎರಡು ವಾರಗಳಿಂದ ಹೊರ ದೇಶದಲ್ಲಿ ಬಿಡಾರ ಹೂಡಿದ್ದಾರೆ. ಅಲ್ಲಿಂದನೇ ರೀಲ್ಸ್‌ಗಳನ್ನು ಮಾಡುತ್ತಾ ಹೊಸ ಹೊಸ ಫೋಟೊಗಳನ್ನು ಹಂಚಿಕೊಳ್ಳುತ್ತಾ ಸುದ್ದಿಯಾಗುತ್ತಿದ್ದಾರೆ.

ನಿವೇದಿತಾ ಗೌಡ ಅವರದ್ದು ಡೋಂಟ್ ಕೇರ್ ವ್ಯಕ್ತಿತ್ವ. ಯಾರೇ ಕೂಗಾಡಲಿ, ಸೋಶಿಯಲ್ ಮೀಡಿಯಾನೇ ಅಲ್ಲಾಡಲಿ, ನನ್ನ ನೆಮ್ಮದಿಗೆ ಭಂಗ ಇಲ್ಲವೆಂಬಂತೆ ನಿವೇದಿತಾ ಗೌಡ ಫಾರಿನ್‌ನಲ್ಲಿ ತಮ್ಮ ಮೋಜು ಮಸ್ತಿ ಮುಂದುವರೆಸಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಮೊನ್ನೆ ಮೊನ್ನೆಯಷ್ಟೇ ಸಿಕ್ಸ್ ಪ್ಯಾಕ್ ಸುಂದರನ ಜೊತೆ ಆಕಾಶಬುಟ್ಟಿಯನ್ನು ಹಾರಿಸಿ ಸುದ್ದಿಯಾಗಿದ್ದ ನಿವೇದಿತಾ ಗೌಡ ಈಗ ಕಂಬ ಏರಿದ್ದಾರೆ. ಈ ಮೂಲಕ ಮತ್ತೊಮ್ಮೆ ಟ್ರೋಲಿಗರಿಗೆ ಆಹಾರವಾಗಿದ್ದಾರೆ.

ಕಳೆದ ಹತ್ತು ಹನ್ನೆರಡು ದಿನಗಳಿಂದ ನ್ಯೂಯಾರ್ಕ್, ಲಂಡನ್ ಎಂದೆಲ್ಲಾ ಹಲವಾರು ವಿಡಿಯೋಗಳನ್ನು ಶೇರ್ ಮಾಡುತ್ತಿರುವ ನಿವೇದಿತಾ ಗೌಡ ಹೊಸ ವರ್ಷದ ಸಂಭ್ರಮದಲ್ಲಿ ಬ್ಲ್ಯಾಕ್ ಕಾಸ್ಟೂಮ್‌ನಲ್ಲಿ ಮಿಂಚಿದ್ದಾರೆ. ಕೈ ಮೇಲೆ ವರ್ಣರಂಜಿತ ಚಿತ್ರಗಳನ್ನು ಹಾಕಿಕೊಂಡಿದ್ದಾರೆ. ನಿವೇದಿತಾ ಗೌಡ ಹೀಗೆ ಕುಣಿಯುತ್ತಾ ಕುಣಿಯುತ್ತಾ ಕಂಬವನ್ನೇರಿದ್ದಾರೆ. ಕಂಬಕ್ಕೆ ಅಂಟಿಕೊಂಡು ಸಂಭ್ರಮದಲ್ಲಿ ತೇಲಿದ್ದಾರೆ.

ನಿವೇದಿತಾ ಗೌಡ ಅವರ ಈ ಹಾವ ಭಾವ ಅನೇಕರ ಗಮನ ಸೆಳೆದಿದೆ. ಕೆಲವರು ಎಣ್ಣೆ ಏಟಲ್ಲಿ ಹಿಂಗೆಲ್ಲಾ ಆಡುತ್ತಿದ್ದಾರೆ ಅಂತಾ ಕಮೆಂಟ್ ಹಾಕ್ತಿದ್ದಾರೆ. ಸಾವಿರಾರು ನೆಟ್ಟಿಗರು ನಾನಾ ಬಗೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ನಿವೇದಿತಾ ಗೌಡ ಅವರ ಕಾಲೆಳೆಯುತ್ತಿದ್ದಾರೆ.

ಇದನ್ನೂ ಓದಿ : ಯುಗಾದಿ ಸಂಭ್ರಮಕ್ಕೆ ತೆರೆಗೆ ಅಪ್ಪಳಿಸಲಿರುವ “ಗ್ಯಾಂಗ್ಸ್ ಆಫ್ ಯುಕೆ “

Leave a Comment

DG Ad

RELATED LATEST NEWS

Top Headlines

ಕರ್ನಾಟಕದಲ್ಲಿಂದು ಐತಿಹಾಸಿಕ ಬೆಳವಣಿಗೆ – ಮುಂಡಗಾರು ಲತಾ ಸೇರಿ 6 ನಕ್ಸಲರು ಶರಣಾಗತಿ.. ಪ್ರಕ್ರಿಯೆ ಹೇಗಿರಲಿದೆ?

ಚಿಕ್ಕಮಗಳೂರು : ಇಂದು (ಜ.08) ಕರ್ನಾಟಕದ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಲಿದೆ. ಕರ್ನಾಟಕ, ಕೇರಳ, ತಮಿಳುನಾಡು ಮೂಲದ 6 ಮೋಸ್ಟ್‌ ವಾಂಟೆಡ್‌ ನಕ್ಸಲರು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ

Live Cricket

Add Your Heading Text Here