Download Our App

Follow us

Home » ರಾಜಕೀಯ » ಪ್ರಿಯಾಂಕ್​​ ಖರ್ಗೆ ಕೇಸ್​ನಲ್ಲಿ ಯಾವುದೇ ಕ್ಷಣ CBI ಎಂಟ್ರಿ?

ಪ್ರಿಯಾಂಕ್​​ ಖರ್ಗೆ ಕೇಸ್​ನಲ್ಲಿ ಯಾವುದೇ ಕ್ಷಣ CBI ಎಂಟ್ರಿ?

ಬೆಂಗಳೂರು : ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ಕರ್ನಾಟಕದಲ್ಲಿ ರಾಜಕೀಯ ಕೋಲಾಹಲ ಸೃಷ್ಟಿಸಿದೆ. ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಪ್ರತಿಪಕ್ಷ ಬಿಜೆಪಿ ಪಟ್ಟು ಹಿಡಿದಿದ್ದರೆ, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.

ಒಂದೆಡೆ, ಸಚಿನ್ ಗುತ್ತಿಗೆದಾರನೇ ಅಲ್ಲ ಎನ್ನುವ ಚರ್ಚೆ ನಡೆಯುತ್ತಿದ್ದು, ಮತ್ತೊಂದೆಡೆ ಪ್ರಕರಣ ಮುಚ್ಚಿ ಹಾಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿದೆ, ಸಿಬಿಐ ತನಿಖೆಗೆ ಆಗ್ರಹಿಸಿ ಪ್ರಧಾನಿ ಮೋದಿಗೆ ಪತ್ರ ಬರೆಯಲು ಸಚಿನ್ ಕುಟುಂಬಸ್ಥರು ತಯಾರಿ ನಡೆಸಿದ್ದಾರೆ.

ಇನ್ನು ಕಾಂಟ್ರಾಕ್ಟರ್​​​ ಸಚಿನ್​​ ಪಾಂಚಾಳ್​​​ ಸೂಸೈಡ್​ ಕೇಸ್ ತನಿಖೆ ಮಾಡಲು CBI ಟೀಂ ಯಾವುದೇ ಕ್ಷಣದಲ್ಲಿ ರಾಜ್ಯಕ್ಕೆ ಎಂಟ್ರಿ ಕೊಡುವ ಸಾಧ್ಯತೆಯಿದೆ. ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಪ್ರಿಯಾಂಕ್​ ಕೇಸ್​​ನ ಸಂಪೂರ್ಣ ಮಾಹಿತಿಯನ್ನು ಅಮಿತ್​​ ಶಾ ಮುಂದಿಟ್ಟಿದ್ದಾರೆ. ಈ ಪ್ರಕರಣವನ್ನು CBI ತನಿಖೆಗೆ ಕೊಡೋದು ಹೇಗೆ ಅನ್ನೋದರ ಬಗ್ಗೆ ಚರ್ಚೆ ನಡೆಸಿ, ಇಡೀ ಪ್ರಕರಣವನ್ನು CBIಗೆ ನೀಡಿ ಖರ್ಗೆ ಮೇಲೆ ಕಟ್ಟಿ ಹಾಕೋ ಪ್ಲಾನ್​​​ ನಡೆಸಿದ್ದಾರೆ ಎನ್ನಲಾಗಿದೆ.

AICC ಅಧ್ಯಕ್ಷ, ರಾಜ್ಯಸಭೆ ವಿಪಕ್ಷ ನಾಯಕರಾಗಿರುವ ಪ್ರಿಯಾಂಕ್ ಖರ್ಗೆ ಅವರ ಪುತ್ರನನ್ನು ಸೂಸೈಡ್ ಕೇಸ್​ನಲ್ಲಿ ಅರೆಸ್ಟ್ ಮಾಡಿಸಿದ್ರೆ ಖರ್ಗೆ ಕಂಟ್ರೋಲ್​​ಗೆ ಸಿಗ್ತಾರೆ. ಹೀಗಾಗಿ ಪ್ರಿಯಾಂಕ್​​ ಖರ್ಗೆ ಅರೆಸ್ಟ್ ಮಾಡಿಸಿ ಬಾಯಿ ಮುಚ್ಚಿಸೋ ಪ್ಲಾನ್​​ ಮಾಡಿದ್ದಾರೆ. ರಾಜ್ಯದಲ್ಲೂ ಬಿಜೆಪಿ, ಸಂಘದ ವಿರುದ್ಧ ಪ್ರಿಯಾಂಕ್​​​ ಖರ್ಗೆ ಹರಿಹಾಯ್ತಿದ್ದು, CBI ತನಿಖೆಗೊಪ್ಪಿಸಿ ಅರೆಸ್ಟ್ ಮಾಡಿಸಿದ್ರೆ ಇಬ್ಬರೂ ತಣ್ಣಗಾಗ್ತಾರೆ ಎಂದು ವಿಜಯೇಂದ್ರ ಅವರು ಅಮಿತ್​​ ಶಾ ಮುಂದೆ ಇದೆಲ್ಲಾ ಅಂಶಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗ್ತಿದೆ. ಈಗ ಕಾಂಟ್ರಾಕ್ಟರ್​​ ಸಚಿನ್​ ಪಾಂಚಾಳ್​​ ಕೇಸ್​ನಲ್ಲಿ CBI ಎಂಟ್ರಿಗೆ ಕೌಂಟ್​ಡೌನ್ ಶುರುವಾಗಿದೆ.

ಇದನ್ನೂ ಓದಿ : ಹೊಸ ಚಿತ್ರಕ್ಕಾಗಿ ಕೈ ಜೋಡಿಸಿದ KVN ಪ್ರೊಡಕ್ಷನ್ಸ್-ತೆಸ್ಪಿಯನ್ ಫಿಲ್ಮ್ಸ್..!

Leave a Comment

DG Ad

RELATED LATEST NEWS

Top Headlines

ಕೈಯಲ್ಲಿ ಮಚ್ಚು ಹಿಡಿದು ಮಾಸ್​ ಅವತಾರ ತಾಳಿದ ‘ಅಭಿನಯ ಚತುರ’ – ‘ದಿ ರೈಸ್ ಆಫ್ ಅಶೋಕ’ ಮೋಷನ್ ಪೋಸ್ಟರ್ ರಿಲೀಸ್!

ಬೆಂಗಳೂರು :  ಅಭಿನಯ ಚತುರ ನೀನಾಸಂ ಸತೀಶ್ ನಟಿಸುತ್ತಿರುವ ಅಶೋಕ ಬ್ಲೇಡ್ ಸಿನಿಮಾವೀಗ ಶೀರ್ಷಿಕೆ ಬದಲಾವಣೆಯೊಂದಿಗೆ ಮತ್ತೆ ಶೂಟಿಂಗ್ ಅಖಾಡಕ್ಕೆ ಇಳಿಯುತ್ತಿದೆ. ಅಶೋಕ್ ಬ್ಲೇಡ್ ಬದಲಿಗೆ ‘ದಿ ರೈಸ್

Live Cricket

Add Your Heading Text Here