Download Our App

Follow us

Home » ಸಿನಿಮಾ » ಹೊಸ ವರ್ಷದಲ್ಲಿ ಹೊಸ ಅತಿಥಿ, ಹೊಸ ಸಂಭ್ರಮ – ವಸಿಷ್ಠ ಸಿಂಹ..!

ಹೊಸ ವರ್ಷದಲ್ಲಿ ಹೊಸ ಅತಿಥಿ, ಹೊಸ ಸಂಭ್ರಮ – ವಸಿಷ್ಠ ಸಿಂಹ..!

ಸ್ಯಾಂಡಲ್​​ವುಡ್​​ನ ಕ್ಯೂಟ್​​ ಜೋಡಿ ಹರಿಪ್ರಿಯಾ-ವಸಿಷ್ಠ ಸಿಂಹ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಜೋಡಿ ಕನ್ನಡ ರಾಜ್ಯೋತ್ಸವದಂದು ಸೋಶಿಯಲ್ ಮೀಡಿಯಾದಲ್ಲಿ ಗುಡ್​​ನ್ಯೂಸ್​​ನ್ನು ಹಂಚಿಕೊಂಡಿದ್ದರು.

ಇದೀಗ ವಸಿಷ್ಠ ಸಿಂಹ ಅವರು ಹೊಸ ವರ್ಷದ ರೆಸೊಲ್ಯೂಶನ್‌ ಬಗ್ಗೆ ಹೇಳಿದ್ದಾರೆ. ನಮ್ಮ ಬದುಕು, ಬದುಕಿನ ಬಗೆಗಿನ ದೃಷ್ಟಿಕೋನ ಎಲ್ಲಾ ಬದಲಾಗುತ್ತದೆ. ನಾವು ಯುಗಾದಿಯನ್ನು ಹೊಸ ವರ್ಷ ಎಂದು ಆಚರಿಸುತ್ತೇವೆ. ಆದರೆ ಈ ಬಾರಿ ಕ್ಯಾಲೆಂಡರ್‌ನ ಹೊಸ ವರ್ಷವೂ ಈ ಕಾರಣಕ್ಕೆ ಬಹಳ ಸ್ಪೆಷಲ್‌ ಆಗಿದೆ. ಹೊಸ ವರ್ಷದ ಆರಂಭದಲ್ಲೇ ನಮ್ಮ ಮನೆಗೆ ನಮ್ಮ ಪ್ರೀತಿಯ ಕುಡಿಯ ಆಗಮನವಾಗಲಿದೆ. ಜನವರಿ ತಿಂಗಳ ಕೊನೆಯಲ್ಲಿ ನಮ್ಮ ಮಗುವಿನ ಆಗಮನವಾಗಲಿದೆ. ಮಗು ಬಂದಮೇಲೆ ಅದಕ್ಕಾಗಿ ನಾವು ರೆಸೊಲ್ಯೂಶನ್‌ ತೆಗೆದುಕೊಳ್ಳಲೇ ಬೇಕಾಗುತ್ತದೆ ಎಂದಿದ್ದಾರೆ.

ನಮ್ಮ ಬದುಕು, ಬದುಕಿನ ಬಗೆಗಿನ ದೃಷ್ಟಿಕೋನ ಎಲ್ಲಾ ಬದಲಾಗುತ್ತದೆ. ನಾವು ಯುಗಾದಿಯನ್ನು ಹೊಸ ವರ್ಷ ಎಂದು ಆಚರಿಸುತ್ತೇವೆ. ಆದರೆ ಈ ಬಾರಿ ಕ್ಯಾಲೆಂಡರ್‌ನ ಹೊಸ ವರ್ಷವೂ ಈ ಕಾರಣಕ್ಕೆ ಬಹಳ ಸ್ಪೆಷಲ್‌ ಆಗಿದೆ. ನನ್ನ ಸಂಗಾತಿ ಹರಿಪ್ರಿಯಾ ಹಣ ನಿರ್ವಹಣೆಯ ಜವಾಬ್ದಾರಿ ತೆಗೆದುಕೊಂಡಿದ್ದಾಳೆ. ಅವಳಿಗೆ ಇದೆಲ್ಲ ಸಲೀಸು. ನಾನು ದುಡಿದು ಅವಳ ಕೈಯಲ್ಲಿ ದುಡ್ಡಿಟ್ಟು ನಿರಾಳನಾಗಿರುತ್ತೇನೆ. ಅವಳೇ ವ್ಯವಹಾರ, ಕುಟುಂಬದ ದೇಖಾರೇಖಿ ನೋಡಿಕೊಳ್ತಾಳೆ.

ನನ್ನ ಇಷ್ಟು ವರ್ಷಗಳ ವೃತ್ತಿ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಎರಡು ತಿಂಗಳು ಬ್ರೇಕ್‌ ತೆಗೆದುಕೊಂಡಿದ್ದೇನೆ. ‘ತಲ್ವಾರ್‌ ಪೇಟೆ’ ಕನ್ನಡ ಸಿನಿಮಾ, ಇದರ ಜೊತೆಗೆ ತೆಲುಗು, ತಮಿಳು ಸಿನಿಮಾಗಳ ಒಂದಿಷ್ಟು ಕೆಲಸ ಪೆಂಡಿಂಗ್‌ ಇದೆ. ಅದನ್ನೆಲ್ಲ ಶೀಘ್ರ ಮುಗಿಸಬೇಕು. ಬ್ರೇಕ್‌ ಬಳಿಕ ಹೊಸ ಸಿನಿಮಾಗಳ ಕೆಲಸ ಶುರು ಹಚ್ಚಿಕೊಳ್ಳುತ್ತೇನೆ ಎಂದು ವಸಿಷ್ಠ ಸಿಂಹ ಹೇಳಿದ್ದಾರೆ.

ಇದನ್ನೂ ಓದಿ : ಟೈಗರ್ ವಿನೋದ್ ಪ್ರಭಾಕರ್ ನಟನೆಯ “ಬಲರಾಮನ ದಿನಗಳು” ಚಿತ್ರಕ್ಕೆ ಪ್ರಿಯಾ ಆನಂದ್ ನಾಯಕಿ..!

Leave a Comment

DG Ad

RELATED LATEST NEWS

Top Headlines

“ರಾಮರಸ” ಸಿನಿಮಾದಲ್ಲಿ “ಅಧ್ಯಕ್ಷ” ನಟಿ ಹೆಬ್ಬಾ ಪಟೇಲ್ ಮಿಂಚು – ಕವಿತೆ ಮೂಲಕ ಹುಟ್ಟು ಹಬ್ಬದ ಸಂಭ್ರಮ ಕೋರಿದ ಚಿತ್ರತಂಡ!

ಬೆಂಗಳೂರು : ನಟ ಶರಣ್ ಅಭಿನಯದ “ಅಧ್ಯಕ್ಷ” ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿ ಕನ್ನಡಿಗರ ಮನಗೆದ್ದಿದ್ದ ನಟಿ ಹೆಬ್ಬಾ ಪಟೇಲ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಹೆಬ್ಬಾ ಪಟೇಲ್

Live Cricket

Add Your Heading Text Here