Download Our App

Follow us

Home » ರಾಜ್ಯ » ಸಿದ್ದರಾಮಯ್ಯ ಇನ್ನೂ ಪರಿಹಾರ ಕೊಟ್ಟಿಲ್ಲ.. ಭೂಸ್ವಾಧೀನ ಪ್ರಕ್ರಿಯೆಗೆ ಪ್ರಕಾಶ್ ರೈ ಕಿಡಿಕಿಡಿ!

ಸಿದ್ದರಾಮಯ್ಯ ಇನ್ನೂ ಪರಿಹಾರ ಕೊಟ್ಟಿಲ್ಲ.. ಭೂಸ್ವಾಧೀನ ಪ್ರಕ್ರಿಯೆಗೆ ಪ್ರಕಾಶ್ ರೈ ಕಿಡಿಕಿಡಿ!

ದೇವನಹಳ್ಳಿ : ಎಲ್ಲಾ ಸರಕಾರಗಳೂ ರೈತ ವಿರೋಧಿಗಳೇ ಎಂದು ಬಹುಭಾಷಾ ನಟ ಪ್ರಕಾಶ್ ರೈ ಆಕ್ರೋಶ ಹೊರಹಾಕಿದ್ದಾರೆ. ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ವಿರೋಧ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ಅವರು ಇಲ್ಲಿಗೆ ಬಂದು ರೈತರಿಗೆ ಆಶ್ವಾಸನೆ ಕೊಟ್ಟಿದ್ದರು. ನಮ್ಮ ಪಕ್ಷವನ್ನು ಗೆಲ್ಲಿಸಿದ್ರೆ ರೈತರ ಪರ ಕಾನೂನು ಮಾಡ್ತೀವಿ ಅಂದಿದ್ರು. ನಾನು ಅನ್ನದಾತರ ಪರ ಎಂದು ಹೇಳಿದ್ದರು. ರಾಜ್ಯದಲ್ಲಿ ನೀವು ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಆಯ್ತು.. ಎಲ್ಲಿದೆ ಸ್ವಾಮಿ ಪರಿಹಾರ.. ಇನ್ನೂ ಯಾಕೆ ನೀವು ಪರಿಹಾರ ಕೊಟ್ಟಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧವೂ ಅಸಮಾಧಾನ ಹೊರಹಾಕಿದ್ರು.

ಸರ್ಕಾರಗಳು ಕೈಗಾರಿಕೆಗಾಗಿ ಭೂಸ್ವಾಧೀನ ಮಾಡುವ ಕಾನೂನನ್ನುಬದಲಾಯಿಸಬೇಕು. ಬಂಡವಾಳ ಶಾಹಿಗಳಿಗೆ ರೈತನ ಮತ್ತು ಭೂಮಿಯ ಸಂಬಂಧ ಹೇಗೆ ತಿಳಿಯಬೇಕು. ಅವರೆಲ್ಲಾ ಭತ್ತ ಬೆಳೆಯದೇ ಅಕ್ಕಿ ಬೇಕು ಅಂತಾರೆ. ಆನ್ ಲೈನ್​​ನಲ್ಲಿ ನೋಡಿ ಮದುವೆ ಆಗುವವರು. ಅವರಿಗೆಲ್ಲಾ ಅನ್ನದಾತರ ನೋವು ಎಲ್ಲಿ ಅರ್ಥ ಆಗುತ್ತದೆ ಎಂದರು. ನಾನು ರೈತ ಅಲ್ಲ, ನಿಮ್ಮ ಋಣ ನನ್ನ ಮೇಲಿದೆ. ನಿಮ್ಮ ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದರು.

ಇನ್ನು ಸರ್ಕಾರಗಳು ಫಲವತ್ತಾದ ಭೂಮಿಯಲ್ಲಿ ಕೈಗಾರಿಕೆಗಳನ್ನು ನಿರ್ಮಾಣ ಮಾಡಬಾರದು. ದೇಶದಲ್ಲಿ ರೈತ ಉಳಿಯಬೇಕು ಎಂದು ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಅನ್ನದಾತರ ಪರ ಗುಡುಗಿದರು.

ಇದನ್ನೂ ಓದಿ : ನೀವು ಚೀರಾಡಿ.. ಹಾರಾಡಿ.. ಬಟ್ಟೆ ಹರ್ಕೊಂಡ್ರೂ ರಾಜೀನಾಮೆ ಕೊಡಲ್ಲ – ‘ಕೇಸರಿ’ಪಡೆಗೆ ಜ್ಯೂ.ಖರ್ಗೆ ಕೌಂಟರ್

Leave a Comment

DG Ad

RELATED LATEST NEWS

Top Headlines

ಕರ್ನಾಟಕದಲ್ಲಿಂದು ಐತಿಹಾಸಿಕ ಬೆಳವಣಿಗೆ – ಮುಂಡಗಾರು ಲತಾ ಸೇರಿ 6 ನಕ್ಸಲರು ಶರಣಾಗತಿ.. ಪ್ರಕ್ರಿಯೆ ಹೇಗಿರಲಿದೆ?

ಚಿಕ್ಕಮಗಳೂರು : ಇಂದು (ಜ.08) ಕರ್ನಾಟಕದ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಲಿದೆ. ಕರ್ನಾಟಕ, ಕೇರಳ, ತಮಿಳುನಾಡು ಮೂಲದ 6 ಮೋಸ್ಟ್‌ ವಾಂಟೆಡ್‌ ನಕ್ಸಲರು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ

Live Cricket

Add Your Heading Text Here