Download Our App

Follow us

Home » ಅಪರಾಧ » ಯಾವುದೇ ಕ್ಷಣ ಐಶ್ವರ್ಯಾ ಗೋಲ್ಡ್​ ಕೇಸ್​ಗೆ ED ಎಂಟ್ರಿ?

ಯಾವುದೇ ಕ್ಷಣ ಐಶ್ವರ್ಯಾ ಗೋಲ್ಡ್​ ಕೇಸ್​ಗೆ ED ಎಂಟ್ರಿ?

ಬೆಂಗಳೂರು : ರಾಜ್ಯ ರಾಜಕಾರಣದ ಬುಡವನ್ನೇ ಶೇಕ್​ ಮಾಡುತ್ತಾ ಐಶ್ವರ್ಯಾ ಗೌಡ ಕೋಟಿ ಕೋಟಿ ವಂಚನೆ ಕೇಸ್ ಎನ್ನುವ ಚರ್ಚೆ ಶುರುವಾಗಿದೆ. ಚಿನ್ನದ ‘ಬಂಗಾರಿ’ ಹಿಂದೆ ಬಿದ್ದ ದೊಡ್ಡದೊಡ್ಡ ಕುಳಗಳಿಗೆ  ಢವಢವ ಶುರುವಾಗಿದೆ. ಇದಕ್ಕೆ ಕಾರಣ ಯಾವುದೇ ಕ್ಷಣದಲ್ಲಿ ಐಶ್ವರ್ಯಾಗೌಡ ಬಂಗಾರದ ಪ್ರಕರಣಕ್ಕೆ ED ಎಂಟ್ರಿಯಾಗುವ ಸಾಧ್ಯತೆ ಇದೆ. ಕೋಟಿ ಕೋಟಿ ಅವ್ಯವಹಾರ ಹಿನ್ನೆಲೆ ED  ಅಧಿಕಾರಿಗಳು ಲಗ್ಗೆ ಇಡೋದಂತು ಫಿಕ್ಸ್ ಎನ್ನಲಾಗ್ತಿದೆ.

14 ಕೆಜಿ ಚಿನ್ನದ ಪ್ರಕರಣದ ಬಗ್ಗೆ ದೂರು ನೀಡಿರುವ ಗೋಲ್ಡ್ ಜ್ಯುವೆಲ್ಲರಿ ಅಂಗಡಿ ಮಾಲೀಕರಾಗಿರುವ ವನಿತಾ ಐತಾಳ್ ಅವರೇ ಜೈಲಿಗೆ ಹೋಗ್ತಾರಾ ಎನ್ನುವಂತಾಗಿದೆ. ಈ ಮೂಲಕ ದೂರುದಾರರೇ ಫಸ್ಟ್ ಟೈಂ ಜೈಲಿಗೆ ಹೋಗ್ತಾರಾ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಉದ್ಯಮಿಗಳು, ರಾಜಕಾರಣಿಗಳ ಬಳಿ 100 ಕೋಟಿಗೂ ಹೆಚ್ಚು ಹಣವನ್ನು ಬಂಗಾರಿ ಐಸೂ ಗ್ಯಾಂಗ್ ಪೀಕಿರುವ ಮಾಹಿತಿ ಇದ್ದು ಬ್ಲ್ಯಾಕ್ ಮನಿ ವೈಟ್ ಮಾಡೋ ದಂಧೆಯಲ್ಲಿ ತೊಡಗಿದ್ರಾ ಎಂಬ ಚರ್ಚೆ ಆಗ್ತಿದೆ. 

ಅರೆಸ್ಟ್ ಆಗಿರುವ ಐಶ್ವರ್ಯಾ ಗೌಡ ಪೊಲೀಸರ ತನಿಖೆಯಲ್ಲಿ ಅಂಗಡಿ ಮಾಲೀಕರಾಗಿರುವ ವನಿತಾ ಐತಾಳ್ ಕೋಟಿ ಕೋಟಿ ಡೀಲಿಂಗ್ ಬಗ್ಗೆ ಬಾಯಿಬಿಟ್ಟಿದ್ದು ರಹಸ್ಯವಾಗಿ 14 ಕೆಜಿ ಚಿನ್ನದ ಕೇಸ್​ ಬಗ್ಗೆ ED ಅಧಿಕಾರಿಗಳು ಡೀಟೇಲ್ಸ್​ ಕಲೆಕ್ಟ್ ಮಾಡ್ತಿದ್ದಾರೆ. ಓಂಕಾರ್ ಕೋ-ಆಪರೇಟಿವ್ ಸೊಸೈಟಿ ವ್ಯವಹಾರದ ಬಗ್ಗೆಯೂ ದಾಖಲೆ ಸಂಗ್ರಹ ಮಾಡಲಾಗ್ತಿದೆ. ಈ ಸೊಸೈಟಿಯಲ್ಲಿ IPS ಅಧಿಕಾರಿಗಳು, ಹಲವು ಇನ್ಸ್​ಪೆಕ್ಟರ್​ಗಳ ಹಣ ಇದೆಯಂತೆ, ಜೊತೆಗೆ ಹಲವು ಪ್ರಭಾವಿ ರಾಜಕಾರಣಿಗಳು, ಅಂಡರ್​ವರ್ಲ್ಡ್ ಕುಳಗಳು ಈ ಸೊಸೈಟಿಯಲ್ಲಿ ಇನ್ವೆಸ್ಟ್ ಮಾಡಿದ್ದಾರೆ ಎನ್ನುವ ಮಾಹಿತಿ ಹೊರ ಬಿದ್ದಿದೆ.

ಇನ್ನು ಐಶ್ವರ್ಯಾ ಗೌಡ ಪೊಲೀಸ್ ತನಿಖೆ ಮುಗಿಯುತ್ತಿದ್ದಂತೆ ED ಅಧಿಕಾರಿಗಳು FIR ದಾಖಲಿಸುವ ಸಾಧ್ಯತೆ ಇದ್ದು ವನಿತಾ ಐತಾಳ್ ಜ್ಯುವೆಲ್ಲರಿ ಬ್ಯುಸಿನೆಸ್​ ಬಗ್ಗೆಯೂ EDಯಿಂದ ತನಿಖೆ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ED ಎಂಟ್ರಿಯಾದ್ರೆ ರಾಜ್ಯದ ಪ್ರಭಾವಿ ರಾಜಕಾರಣಿಗಳು ಅರೆಸ್ಟ್ ಆಗೋದಂತು ಫಿಕ್ಸ್ ಎನ್ನಲಾಗ್ತಿದೆ. ಮನಿ ಲ್ಯಾಂಡ್ರಿಂಗ್, ಬ್ಲ್ಯಾಕ್​ ಅಂಡ್ ವೈಟ್ ದಂಧೆಯಲ್ಲಿ ಅರೆಸ್ಟ್ ಭೀತಿ ಇದೆ. ಹಾಗಾಗಿ ಐಶ್ವರ್ಯಾ ಗೌಡ ಗೋಲ್ಡ್ ವಂಚನೆ ಕೇಸ್ ಸದ್ಯ ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದೆ.

ಇದನ್ನೂ ಓದಿ : ವರಾಹಿ ಜ್ಯುವೆಲ್ಲರ್ಸ್ ಮಾಲೀಕರಿಗೆ ವಂಚನೆ – ಐಶ್ವರ್ಯಗೌಡ, ಹರೀಶ್ ಅರೆಸ್ಟ್ ಆಗ್ತಿದ್ದಂತೆ ನಟ ಧಮೇಂದ್ರ ಪರಾರಿ..!

Leave a Comment

DG Ad

RELATED LATEST NEWS

Top Headlines

ಎರಡು ಬಸ್​ಗಳ ನಡುವೆ ಸಿಲುಕಿದ್ರೂ ವ್ಯಕ್ತಿ ಗ್ರೇಟ್ ಎಸ್ಕೇಪ್ : ವಿಡಿಯೋ ವೈರಲ್..!

ಚೆನ್ನೈ : ತಮಿಳುನಾಡಿನ ಪಕ್ಕೋಟ್ನಲ್ಲಿ ನಡೆದ ನಂಬಲಾಸಾಧ್ಯವಾದ ಘಟನೆಯ ವಿಡಿಯೋವೊಂದು ಎಲ್ಲರನ್ನೂ ಬೆರಗುಗೊಳಿಸಿದೆ. ರಸ್ತೆ ದಾಟಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಎರಡು ಬಸ್‌ಗಳ ನಡುವೆ ಸಿಕ್ಕಿಹಾಕಿಕೊಂಡ ಬಳಿಕವೂ

Live Cricket

Add Your Heading Text Here