50 ಮಂದಿ ಪ್ರಯಾಣಿಕರಿದ್ದ ಖಾಸಗಿ ಬಸ್ ಸೇತುವೆಯ ಮೇಲಿಂದ ಚರಂಡಿಗೆ ಬಿದ್ದ ಪರಿಣಾಮ 8 ಜನ ಸಾವನ್ನಪ್ಪಿರುವ ಘಟನೆ ಪಂಜಾಬ್‌ನ ಬತಿಂಡಾದಲ್ಲಿ ನಡೆದಿದೆ.
ಖಾಸಗಿ ಬಸ್ವೊಂದು ಜೀವನ್ಸಿಂಗ್ವಾಲಾ ಗ್ರಾಮದ ಬಳಿ ಹೋಗುವಾಗ ನಿಯಂತ್ರಣ ಕಳೆದುಕೊಂಡು ಸೇತುವೆಗೆ ಡಿಕ್ಕಿ ಹೊಡೆದು ಕೆಳಗಿದ್ದ ಚರಂಡಿ ನೀರಿಗೆ ಬಿದ್ದಿದೆ. ಈ ಘಟನೆ ತಿಳಿಯುತ್ತಿದ್ದಂತೆ ಎನ್ಡಿಆರ್ಎಫ್ ಹಾಗೂ ಸ್ಥಳೀಯ ಪೊಲೀಸ್ ಪಡೆ ಹಾಗೂ ಸ್ಥಳೀಯರು ಸೇರಿ ಪ್ರಯಾಣಿಕರನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಈಗಾಗಲೇ ಬಸ್ನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಆಚೆ ತೆಗೆಯಲಾಗಿದೆ. ಆದ್ರೆ ಸ್ಥಳದಲ್ಲಿಯೇ 5 ಜನರು ಸಾವನ್ನಪ್ಪಿದ್ದು, ಮೂರು ಜನ ಪ್ರಯಾಣಿಕರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನು 18ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಇದನ್ನೂ ಓದಿ : ಸಿಕಂದರ್ ಟೀಸರ್ ಬಿಡುಗಡೆ ದಿಢೀರ್ ಮುಂದೂಡಿಕೆ – ಕಾರಣವೇನು?
Post Views: 753