ಬೀದರ್ : ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಗುತ್ತಿಗೆದಾರರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಅವರು ಟೆಂಡರ್ ವಿಚಾರಕ್ಕೆ ಕೋಟಿ ಹಣ ಡಿಮ್ಯಾಂಡ್ ಮಾಡಿದ್ದಾರೆ ಎಂದು ಆರೋಪಿಸಿ ಕಾಂಟ್ರಾಕ್ಟರ್ ಸಚಿನ್ ರೈಲ್ವೆ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
7 ಪುಟಗಳ ಸುದೀರ್ಘ ಲೆಟರ್ ಬರೆದು 26 ವರ್ಷದ ಕಾಂಟ್ರಾಕ್ಟರ್ ಸೂಸೈಡ್ ಮಾಡಿಕೊಂಡಿದ್ದು, ಪ್ರಿಯಾಂಕ್ ಖರ್ಗೆ ಆಪ್ತ ರಾಜು ಟೆಂಡರ್ ವಿಚಾರಕ್ಕೆ ಲಕ್ಷ-ಲಕ್ಷ ಹಣ ಪಡೆದಿದ್ದಾರಂತೆ. ಮತ್ತೆ 1 ಕೋಟಿ ಹಣ ನೀಡುವಂತೆಯೂ ಡಿಮ್ಯಾಂಡ್ ಇಟ್ಟಿದ್ದರಂತೆ. 1 ಕೋಟಿ ರೂಪಾಯಿ ನೀಡದಿದ್ರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದರಂತೆ. 15 ಲಕ್ಷಕ್ಕೂ ಹೆಚ್ಚು ಹಣ ಪಡೆದು ಟೆಂಡರ್ ನೀಡದೇ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಕಲಬುರಗಿ ಮಾಜಿ ಕಾರ್ಪೊರೇಟರ್ ರಾಜು ಕಪನೂರು, ಗೋರಖನಾಥ್, ನಂದಕುಮಾರ್ ನಾಗಭುಜಂಗೆ ಸೇರಿ 6 ಮಂದಿ ವಿರುದ್ಧ ಕೇಸ್ ದಾಖಲಾಗಿದೆ. ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಕಟ್ಟಿತೂಂಗಾವ್ನ ಸಚಿನ್ ಶವ ರೈಲ್ವೆ ಟ್ರಾಕ್ನಲ್ಲಿ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಂತ್ರಿ ಆಪ್ತ ಸೇರಿ ಇತರೆ ಆರೋಪಿಗಳ ಅರೆಸ್ಟ್ಗೆ ಕುಟುಂಬದವರು ಆಗ್ರಹಿಸಿದ್ದಾರೆ.
ರಾಜು ಕುಪನೂರು ಸೇರಿ ಎಲ್ಲರನ್ನೂ ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದಿದ್ದು, ಬೀದರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟುಂಬಸ್ಥರ ವಿರೋಧದ ಮಧ್ಯೆ ಬ್ರಿಮ್ಸ್ ಶವಾಗಾರಕ್ಕೆ ಶವವನ್ನು ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ : ಯಾಕಮ್ಮಾ ಬಿಗ್ಬಾಸ್ ಮನೆಯಲ್ಲಿದ್ಯಾ? ಹೊರಡಮ್ಮಾ ಮನೆಗೆ – ಚೈತ್ರಾಗೆ ಟಾಂಗ್ ಕೊಟ್ಟ ರಜತ್..!