ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಚಿತ್ರವನ್ನು ನೋಡುವ ಧಾವಂತದಲ್ಲಿ ಮಹಿಳಾ ಅಭಿಮಾನಿಯೋರ್ವರು ಕಾಲ್ತುಳಿತಕ್ಕೆ ಸಿಲುಕಿ ಉಸಿರು ಚೆಲ್ಲಿದ್ದಾರೆ. ಇನ್ನು, ಮೃತ ಮಹಿಳೆಯ ಪುತ್ರ ಇನ್ನು ಕೋಮಾದಲ್ಲಿದ್ದಾರೆ. ಈ ಹಿನ್ನೆಲೆ ಯಾರದ್ದು ಸರಿ ಯಾರದ್ದು ತಪ್ಪು ಎನ್ನುವ ಚರ್ಚೆ ಶುರುವಾಗಿದೆ. ಇದರ ನಡುವೆ ಸೋಷಿಯಲ್ ಮೀಡಿಯಾದಲ್ಲಿಯೂ ಅಲ್ಲು ಅಭಿಮಾನಿಗಳು ಹಾಗೂ ಇತರ ನಾಯಕರ ಫಾಲೋವರ್ಸ್ ಮಧ್ಯೆ ಒಂದಷ್ಟು ಟ್ರೋಲ್, ಪೋಸ್ಟ್, ಟೀಕೆ ಮುಂದುವರಿದಿದೆ. ಹೀಗಿರುವಾಗಲೇ ಅಲ್ಲು ಅರ್ಜುನ್ ಪ್ರಮುಖವಾದ ಒಂದು ಪೋಸ್ಟ್ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಫೋಸ್ಟ್ ಮಾಡುವ ಮೂಲಕ ಫ್ಯಾನ್ಸ್ಗೆ ಕಿವಿ ಮಾತು ಹೇಳಿದ ನಟ ಅಲ್ಲು ಅರ್ಜುನ್ ಅವರು, ಅಭಿಮಾನದ ಹೆಸರಲ್ಲಿ ವೈಯಕ್ತಿಕ ನಿಂದನೆ ಮಾಡ್ಬೇಡಿ. ಫೇಕ್ ಐಡಿ ಕ್ರಿಯೇಟ್ ಮಾಡಿ ನಿಂದನೆ ಮಾಡುತ್ತಿದ್ದಾರೆ. ನನ್ನ ಫ್ಯಾನ್ಸ್ ತಮ್ಮ ಅಭಿಪ್ರಾಯಗಳನ್ನ ಜವಾಬ್ದಾರಿಯುತವಾಗಿ ಹಾಕಿ. ವೈಯಕ್ತಿಕವಾಗಿ ಯಾರನ್ನೂ ನಿಂದನೆ ಮಾಡಬೇಡಿ ಎಂದು ತಿಳಿಸಿದ್ದಾರೆ.
ಇನ್ನು ತೇಜೋವದೆ ಮಾಡೋರ ವಿರುದ್ಧ ಕಾನೂನು ಕ್ರಮ ಆಗುತ್ತೆ. ಫೇಕ್ ಐಡಿ ಕ್ರಿಯೇಟ್ ಮಾಡಿ ನಿಂದನೆ ಮಾಡರೋ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಬೇರೊಬ್ಬರಿಗೆ ನಿಂದನೆ ಮಾಡೋರು ನನ್ನ ಫ್ಯಾನ್ಸ್ ಅಲ್ಲ ಎಂದಿದ್ದಾರೆ.
ಇದನ್ನೂ ಓದಿ : ಬಿಟಿವಿ ಕನ್ನಡ ಸುದ್ದಿ ವಾಹಿನಿಯ ಜಿಲ್ಲಾ ವರದಿಗಾರ ರಾಜಶೇಖರ್ಗೆ ಹೆಮ್ಮೆಯ ಸಾಧಕ ಪ್ರಶಸ್ತಿ ಪ್ರದಾನ..!