ಗದಗ : ರೊಟ್ಟಿ ಮಾಡುವ ಮಣೆಯಿಂದ ಹೊಡೆದು ಮುಖ್ಯ ಶಿಕ್ಷಕಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ನವನಗರದಲ್ಲಿ ನಡೆದಿದೆ. ಅನ್ನಪೂರ್ಣ ರಾಠೋಡ್ (54) ಮೃತ ಮುಖ್ಯ ಶಿಕ್ಷಕಿ.
ಮನೆಯಲ್ಲಿದ್ದ ಮುಖ್ಯ ಶಿಕ್ಷಕಿ ಹತ್ಯೆ ಮಾಡಲಾಗಿದ್ದು, ಘಟನೆಯಿಂದ ಗಜೇಂದ್ರಗಡ ಪಟ್ಟಣವೇ ಬೆಚ್ಚಿ ಬಿದ್ದಿದೆ. ಒಂದು ದಿನದ ಹಿಂದೆಯೇ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕದತವಾಗಿದ್ದು, ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಮೃತ ಅನ್ನಪೂರ್ಣ ರಾಠೋಡ್ ಅವರು ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ರೋಣದ ಬಿಇಒ ಕಚೇರಿಯಲ್ಲಿ ಪ್ರಭಾರ ಹುದ್ದೆಯಲ್ಲಿಯೂ ಇದ್ದರು. ಒಂಟಿ ಮಹಿಳೆಗೆ ರಕ್ಷಣೇ ಇಲ್ವಾ ಅಂತಾ ಕುಟುಂಬಸ್ಥರ ಅಳಲು ತೋಡಿಕೊಂಡಿದ್ದು, ಕೊಲೆಗೆ ನ್ಯಾಯ ಕೊಡಿಸಿ ಅಂತಾ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಗಜೇಂದ್ರಗಡ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ನೆಲಮಂಗಲದಲ್ಲಿ ಭೀಕರ ಸರಣಿ ಅಪಘಾತ – ಕಾರ್ ಮೇಲೆ ಕಂಟೇನರ್ ಬಿದ್ದು 6 ಮಂದಿ ದುರ್ಮರಣ..!