Download Our App

Follow us

Home » ಸಿನಿಮಾ » ಬಿಗ್ ಬಾಸ್ ಮನೆಯಲ್ಲಿ ತಾರಕಕ್ಕೇರಿದ ಗಲಾಟೆ.. ಕೈಕೈ ಮಿಲಾಯಿಸಲು ಮುಂದಾದ ರಜತ್-ಉಗ್ರಂ ಮಂಜು..!

ಬಿಗ್ ಬಾಸ್ ಮನೆಯಲ್ಲಿ ತಾರಕಕ್ಕೇರಿದ ಗಲಾಟೆ.. ಕೈಕೈ ಮಿಲಾಯಿಸಲು ಮುಂದಾದ ರಜತ್-ಉಗ್ರಂ ಮಂಜು..!

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​​ ಬಾಸ್​​ ಸೀಸನ್​ 11, 12ನೇ ವಾರಕ್ಕೆ ಕಾಲಿಟ್ಟಿದೆ. ಪ್ರತಿ ಬಾರಿ ಜಿದ್ದಾಜಿದ್ದಿ, ಕೂಗಾಟ, ಮಾತಿನಲ್ಲೇ ಮುಗಿಯುತ್ತಿದ್ದ ಜಗಳ ಈ ಬಾರಿ ವಿಕೋಪಕ್ಕೆ ತಿರುಗಿದೆ. ಹದ್ದು ಮೀರಿದ ವರ್ತನೆಯಿಂದ ಇಡೀ ಮನೆಯ ಎಲ್ಲರೂ ರೊಚ್ಚಿಗೆದ್ದಿದ್ದಾರೆ.

ಹೌದು, ಕಲರ್ಸ್​ ಕನ್ನಡ ಇಂದಿನ ಸಂಚಿಕೆ ಪ್ರೋಮೋವನ್ನು ರಿಲೀಸ್​​ ಮಾಡಿದೆ. ಈ ಪ್ರೋಮೋದಲ್ಲಿ ಕರ್ನಾಟಕ ಖದರ್ ಹಾಗೂ ಕರುನಾಡ ಕಿಲಾಡಿಗಳು ತಂಡದ ಸದ್ಯಸರಿಗೆ ಬಿಗ್ ಬಾಸ್ ಟಾಸ್ಕ್​​ ಒಂದನ್ನು ನೀಡಿದ್ದಾರೆ. ಅದರ ಹೆಸರು ಚೆಂಡು ಸಾಗಲಿ ಮುಂದೆ ಹೋಗಲಿ ಅನ್ನೋ ಹೆಸರಿನ ಈ ಆಟದಲ್ಲಿ ಫೌಲ್‌ಗಳದ್ದೇ ದೊಡ್ಡ ಕಿರಿಕ್ ಆಗಿದೆ. ಚೈತ್ರಾ – ಐಶ್ವರ್ಯಾ ಅವರು ಉಸ್ತುವಾರಿಗಳಾಗಿ ಆಟ ಆಡುತ್ತಿದ್ದಾರೆ. ಆದರೆ ಚೈತ್ರಾ ಅವರು ಧನರಾಜ್‌ ಅವರಿಗೆ ಪದೇ ಪದೇ ಫೌಲ್ ಕೊಟ್ಟಿದ್ದು ಈ ಜಗಳಕ್ಕೆ ಕಾರಣವಾಗಿದೆ.

ಧನರಾಜ್ ಟಾಸ್ಕ್‌ನಲ್ಲಿ ಆಟ ಆಡುವಾಗ ಚೈತ್ರಾ ಅವರು ಮೊದಲಿಗೆ ಫೌಲ್ ಕೊಟ್ಟರು. ಅದಕ್ಕೆ ರಜತ್ ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ ಚೈತ್ರಾ ಅವರು ಒಂದಕ್ಷರ ಮಾತಾಡಿದ್ರೆ ನಾನು ಫೌಲ್ ಕೊಟ್ಟೇ ಕೊಡುತ್ತೇನೆ ಎಂದು ಸವಾಲು ಹಾಕಿದ್ದಾರೆ. ಇದ್ದರಿಂದ ರೊಚ್ಚಿಗೆದ್ದ ರಜತ್,​ ಧನರಾಜ್‌ಗೆ ಆಟ ಆಡಲೇ ಬೇಡಿ ಎಂದು ಹೇಳಿ ಕರ್ನಾಟಕ ಖದರ್ ತಂಡದ ಸದಸ್ಯರ ಮೇಲೆ ಎಗರಿ, ಎಗರಿ ಬಿದ್ದಿದ್ದಾರೆ.

ಇನ್ನು  ರಜತ್, ಮಂಜು ಮಧ್ಯೆ ಮಾತಿಗೆ ಮಾತು ಬೆಳೆದಿದ್ದು ಏನೋ ಹೊಡೆದು ಬಿಟ್ಟು ಹೋಗ್ತಿಯೇನೋ. ಮುಟ್ಟಲೇ ಮುಟ್ಟಲೇ ಎಂದ ಮಂಜು ಹಾಗೂ ರಜತ್ ಬಿಗ್ ಬಾಸ್ ಮನೆಯ ರಣಾಂಗಣಕ್ಕೆ ಆಹ್ವಾನ ಕೊಟ್ಟಿದ್ದಾರೆ.

ಇದನ್ನೂ ಓದಿ : ಕೊಡಗು : ಎಣ್ಣೆ ವಿಷಯಕ್ಕೆ ಅಣ್ಣನನ್ನೇ ಗುಂಡಿಕ್ಕಿ ಕೊಂದ ಪಾಪಿ ತಮ್ಮ..!

Leave a Comment

DG Ad

RELATED LATEST NEWS

Top Headlines

ಇಸ್ರೋದ ನೂತನ ಮುಖ್ಯಸ್ಥರಾಗಿ ವಿ.ನಾರಾಯಣನ್​ ಆಯ್ಕೆ – ಯಾರಿವರು ಗೊತ್ತಾ?

ಕೇಂದ್ರ ಸರ್ಕಾರ ಹಿರಿಯ ಗಗನಯಾತ್ರಿ ಮತ್ತು ಕ್ರಯೋಜೆನಿಕ್ ಎಂಜಿನ್ ತಜ್ಞ ವಿ.ನಾರಾಯಣನ್ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ನೂತನ ಮುಖ್ಯಸ್ಥರಾಗಿ ಮತ್ತು ಬಾಹ್ಯಾಕಾಶ ಇಲಾಖೆಯ

Live Cricket

Add Your Heading Text Here