Download Our App

Follow us

Home » ಜಿಲ್ಲೆ » ಕೊಡಗು : ಎಣ್ಣೆ ವಿಷಯಕ್ಕೆ ಅಣ್ಣನನ್ನೇ ಗುಂಡಿಕ್ಕಿ ಕೊಂದ ಪಾಪಿ ತಮ್ಮ..!

ಕೊಡಗು : ಎಣ್ಣೆ ವಿಷಯಕ್ಕೆ ಅಣ್ಣನನ್ನೇ ಗುಂಡಿಕ್ಕಿ ಕೊಂದ ಪಾಪಿ ತಮ್ಮ..!

ಕೊಡಗು : ಎಣ್ಣೆ ವಿಷಯಕ್ಕೆ ಅಣ್ಣನನ್ನೇ ತಮ್ಮ ಗುಂಡು ಹಾರಿಸಿ ಕೊಲೆ ಮಾಡಿದ ಘಟನೆ ಮಡಿಕೇರಿಯ ಗಾಳಿಬೀಡಿನ ವಣಚಲು ಗ್ರಾಮದಲ್ಲಿ ನಡೆದಿದೆ. ನಾಡ ಬಂದೂಕಿನಿಂದ ಅಣ್ಣಪ್ಪನಿಗೆ ಗುಂಡು ಹೊಡೆದು ಸಹೋದರ ಮಾಚಯ್ಯ ಕೊಲೆ ಮಾಡಿದ್ದಾನೆ.

ಕಳೆದ ಐದು ವರ್ಷಗಳಿಂದಲೂ ಅಣ್ಣ -ತಮ್ಮ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಡುತ್ತಲೇ ಇದ್ದರಂತೆ. ಆದರೂ ಒಂದೇ ಮನೆಯಲ್ಲಿ ಊಟ, ವಾಸ. ಹೀಗೆ ಇದ್ದವರು ಸೋಮವಾರ ಬೆಳಗ್ಗೆ ಹನ್ನೊಂದು ಗಂಟೆ ಸಮಯಕ್ಕೆ ಜಗಳವಾಡಿಕೊಂಡಿದ್ದಾರೆ. ಅದೂ ಕೂಡ ಎಣ್ಣೆಯ ವಿಷಯಕ್ಕೆ ಜಗಳವಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಜಗಳ ಒಂದಿಷ್ಟು ತೀವ್ರಗೊಂಡು ಕೊನೆಗೆ ಹೊಡೆದಾಟಕ್ಕೆ ತಿರುಗಿದೆ. ಈ ವೇಳೆ ತಮ್ಮ ಮಾಚಯ್ಯನಿಗೆ ಅಣ್ಣ ಅಪ್ಪಣ್ಣ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಮಾಚಯ್ಯ ಮನೆಯೊಳಗೆ ಇದ್ದ ನಾಡ ಬಂದೂಕಿನಿಂದ ಅಣ್ಣಪ್ಪನಿಗೆ ಶೂಟ್ ಮಾಡಿದ್ದಾನೆ. ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಗುಂಡು ಹೊಕ್ಕಿದ್ದರಿಂದ ಅಪ್ಪಣ್ಣ ಮನೆ ಮುಂಭಾಗದಲ್ಲೇ ತೀವ್ರ ರಕ್ತ ಸ್ರಾವವಾಗಿ ರಕ್ತದ ಮಡುವಿನಲ್ಲೇ ಬಿದ್ದು ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ವಕ್ಫ್​​ ಕೋಲಾಹಲ ಹೊತ್ತಲ್ಲೇ ಅಚ್ಚರಿ ಬೆಳವಣಿಗೆ – ಸಚಿವ ಜಮೀರ್​​ ಭೇಟಿಯಾದ ಶಾಸಕ ಯತ್ನಾಳ್..!

Leave a Comment

DG Ad

RELATED LATEST NEWS

Top Headlines

ಕರ್ನಾಟಕದಲ್ಲಿಂದು ಐತಿಹಾಸಿಕ ಬೆಳವಣಿಗೆ – ಮುಂಡಗಾರು ಲತಾ ಸೇರಿ 6 ನಕ್ಸಲರು ಶರಣಾಗತಿ.. ಪ್ರಕ್ರಿಯೆ ಹೇಗಿರಲಿದೆ?

ಚಿಕ್ಕಮಗಳೂರು : ಇಂದು (ಜ.08) ಕರ್ನಾಟಕದ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಲಿದೆ. ಕರ್ನಾಟಕ, ಕೇರಳ, ತಮಿಳುನಾಡು ಮೂಲದ 6 ಮೋಸ್ಟ್‌ ವಾಂಟೆಡ್‌ ನಕ್ಸಲರು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ

Live Cricket

Add Your Heading Text Here