Download Our App

Follow us

Home » ರಾಜಕೀಯ » ವಕ್ಫ್​​ ಕೋಲಾಹಲ ಹೊತ್ತಲ್ಲೇ ಅಚ್ಚರಿ ಬೆಳವಣಿಗೆ – ಸಚಿವ ಜಮೀರ್​​ ಭೇಟಿಯಾದ ಶಾಸಕ ಯತ್ನಾಳ್..!

ವಕ್ಫ್​​ ಕೋಲಾಹಲ ಹೊತ್ತಲ್ಲೇ ಅಚ್ಚರಿ ಬೆಳವಣಿಗೆ – ಸಚಿವ ಜಮೀರ್​​ ಭೇಟಿಯಾದ ಶಾಸಕ ಯತ್ನಾಳ್..!

ಬೆಂಗಳೂರು : ವಕ್ಫ್ ಆಸ್ತಿ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ವಿಷಯ ರಾಜ್ಯ ಸರ್ಕಾರ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ. ರೈತರಿಗೆ ನೋಟಿಸ್ ನೀಡುವ ಮೂಲಕ ವಕ್ಫ್ ಮಂಡಳಿ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಇದೀಗ ವಕ್ಫ್​​ ಕೋಲಾಹಲ ಹೊತ್ತಲ್ಲೇ ಅಚ್ಚರಿ ಬೆಳವಣಿಯೊಂದು ನಡೆದಿದ್ದು, ವಕ್ಫ್​​​ ಸಚಿವ ಜಮೀರ್​​ ಶಾಸಕ ಯತ್ನಾಳ್ ಭೇಟಿಯಾಗಿದ್ದಾರೆ.

ವಕ್ಫ್‌ ಬೋರ್ಡ್‌ನಿಂದ ರೈತರಿಗೆ ನೋಟಿಸ್ ನೀಡುತ್ತಿರೋ ವಿಚಾರಕ್ಕೆ ಸಂಬಂಧಿಸಿದಂತೆ ಜಮೀರ್​​ ರಾಜೀನಾಮೆ ನೀಡಬೇಕೆಂದು ಬಿಜೆಪಿ ಆಗ್ರಹಿಸುತ್ತಿದೆ. ಅಷ್ಟೇ ಅಲ್ಲದೆ, ವಿಜಯೇಂದ್ರಗೆ ಸೆಡ್ಡು ಹೊಡೆದು ಖುದ್ದು ವಕ್ಫ್​ ನೋಟಿಸ್​​ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್​​ ಹೋರಾಟ ನಡೆಸುತ್ತಿದ್ದಾರೆ.

ಇನ್ನು ಬಿಜೆಪಿಯ ಶಾಸಕ ಯತ್ನಾಳ್ ಹಾಗೂ ಜಮೀರ್ ಇಬ್ಬರೂ ಏಕವಚನದಲ್ಲಿ ಬೈದಾಡಿಕೊಂಡಿರುವುದು ಸಹ ಇದೆ. ಸದನದ ಒಳಗೆ ಹಾಗೂ ಸದನದ ಹೊರಗೆ ಜಮೀರ್​ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದ್ದರು. ಇಂಥಾ ಹೊತ್ತಲ್ಲೇ ಸುವರ್ಣಸೌಧದಲ್ಲಿ ಜಮೀರ್​​ ಭೇಟಿಯಾಗಿ ಯತ್ನಾಳ್​​ ಮಾತುಕತೆ ನಡೆಸಿದ್ದು, ಕುತೂಹಲ ಮೂಡಿಸಿದೆ.

ಇದನ್ನೂ ಓದಿ : ಹೊಸ ಪ್ರತಿಭೆಗಳ ಜೊತೆ ಕೈ ಜೋಡಿಸಿದ ಶ್ರೀಮುರಳಿ.. ಬರ್ತಡೇಗೆ ‘ಪರಾಕ್’ ಸಿನಿಮಾ ಘೋಷಣೆ..!

Leave a Comment

DG Ad

RELATED LATEST NEWS

Top Headlines

ಇಸ್ರೋದ ನೂತನ ಮುಖ್ಯಸ್ಥರಾಗಿ ವಿ.ನಾರಾಯಣನ್​ ಆಯ್ಕೆ – ಯಾರಿವರು ಗೊತ್ತಾ?

ಕೇಂದ್ರ ಸರ್ಕಾರ ಹಿರಿಯ ಗಗನಯಾತ್ರಿ ಮತ್ತು ಕ್ರಯೋಜೆನಿಕ್ ಎಂಜಿನ್ ತಜ್ಞ ವಿ.ನಾರಾಯಣನ್ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ನೂತನ ಮುಖ್ಯಸ್ಥರಾಗಿ ಮತ್ತು ಬಾಹ್ಯಾಕಾಶ ಇಲಾಖೆಯ

Live Cricket

Add Your Heading Text Here