Download Our App

Follow us

Home » ರಾಜಕೀಯ » ಲೋಕಸಭೆಯಲ್ಲಿ ‘ಒಂದು ದೇಶ-ಒಂದು ಚುನಾವಣೆ’ ಮಸೂದೆ ಮಂಡನೆ..!

ಲೋಕಸಭೆಯಲ್ಲಿ ‘ಒಂದು ದೇಶ-ಒಂದು ಚುನಾವಣೆ’ ಮಸೂದೆ ಮಂಡನೆ..!

ನವದೆಹಲಿ : ಚುನಾವಣೆಯ ವೇಳೆ ಪ್ರಣಾಳಿಕೆಯಲ್ಲಿ ಬಿಜೆಪಿ ಘೋಷಣೆ ಮಾಡಿದಂತೆ ಬಹುನಿರೀಕ್ಷೆಯ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಅನುಮತಿ ನೀಡುವ ‘ಒಂದು ದೇಶ-ಒಂದು ಚುನಾವಣೆ’ ಮಸೂದೆ ಇಂದು ಲೋಕಸಭೆಯಲ್ಲಿ ಮಂಡನೆಯಾಗಿದೆ.

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಇಂದು ಲೋಕಸಭೆಯಲ್ಲಿ ಸಂವಿಧಾನ (ನೂರ ಇಪ್ಪತ್ತೊಂದನೇಯ ತಿದ್ದುಪಡಿ) ಮಸೂದೆ, 2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆಯನ್ನು ಮಂಡಿಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಸಹಿತ ಆಡಳಿತ ಪಕ್ಷದ ಎಲ್ಲಾ ಸದಸ್ಯರು ಮೇಜು ತಟ್ಟುವ ಮೂಲಕ ಒನ್‌ ನೇಷನ್ ಒನ್ ಎಲೆಕ್ಷನ್ ಮಸೂದೆಗೆ ಬೆಂಬಲ ಸೂಚಿಸಿದರು.

ಮಸೂದೆ ಮಂಡನೆಯ ಬೆನ್ನಲ್ಲೇ INDIA ಒಕ್ಕೂಟದ ಸದಸ್ಯರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಸಂಸದ ಮನೀಶ್‌ ತಿವಾರಿ, ಕೇಂದ್ರ ಮತ್ತು ರಾಜ್ಯದ ಅವಧಿಯನ್ನು ಹೇಗೆ ಏಕ ಕಾಲದಲ್ಲಿ ಮಾಡಲು ಸಾಧ್ಯ? ಭಾರತ ಒಕ್ಕೂಟ ದೇಶ, ಕೇಂದ್ರೀಕರಣ ಮಾಡುವುದು ಸರಿಯಲ್ಲ. ಇದು ಸಂವಿಧಾನ ವಿರೋಧಿ ತಿದ್ದುಪಡಿ ಎಂದು ಕಿಡಿಕಾರಿದ್ದಾರೆ.

ಯಾವುದೇ ಕಾರಣಕ್ಕೂ ಈ ಮಸೂದೆ ಜಾರಿ ಮಾಡಕೂಡದು. ಸಂಸತ್ತಿನ ಎಲೆಕ್ಷನ್​ ಜೊತೆ ವಿಧಾನಸಭೆ ಎಲೆಕ್ಷನ್​ ನಡೆಸುವುದು ಅಸಾಧ್ಯ. ಇಂಥದ್ದೊಂದು ಪ್ರಯತ್ನ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಿದೆ. ಒಬ್ಬ ನಾಯಕನ ಇಚ್ಛೆ ಪೂರೈಸಿಕೊಳ್ಳಲು ಇಂಥಾ ವ್ಯರ್ಥ ಪ್ರಯತ್ನ ಎಂದು ಟಿಎಂಸಿ ಸಂಸದರು ಗಂಭೀರ ಆರೋಪ ಮಾಡಿದ್ದಾರೆ. ಇನ್ನು ತೆಲುಗು ದೇಶಂ ಪಾರ್ಟಿ ಮಸೂದೆ ಪರ ನಿಂತದೆ. ಜಂಟಿ ಸದನ ಸಮಿತಿ ಪರಾಮರ್ಶೆಗೆ ಕಳಿಸಲು ಅಮಿತ್​ ಶಾ ಸಲಹೆ ನೀಡಿದ್ದಾರೆ.

ಇದನ್ನೂ ಓದಿ : ವಜ್ರಮುನೇಶ್ವರ ದೇಗುಲದಲ್ಲಿ ಪವಿತ್ರಾಗೌಡ ತೀರ್ಥಸ್ನಾನ.. ದರ್ಶನ್ ಹೆಸರಲ್ಲಿ ಅರ್ಚನೆ..!

Leave a Comment

DG Ad

RELATED LATEST NEWS

Top Headlines

ಸಚಿವೆ ಹೆಬ್ಬಾಳ್ಕರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಪ್ರಕರಣ – ಸಿಐಡಿ ಪೊಲೀಸರ ಎದುರು ವಿಚಾರಣೆಗೆ ಸಿ.ಟಿ ರವಿ ಹಾಜರ್!

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗೆಗಿನ ಆಕ್ಷೇಪಾರ್ಹ ಪದ ಬಳಕೆ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಚಳಿಗಾಲದ ಅಧಿವೇಶನದ

Live Cricket

Add Your Heading Text Here