ಬೆಂಗಳೂರು : ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಸಂಪುಟ ಸಭೆ ನಡೆಯಲಿದ್ದು, ಸರ್ಕಾರಿ ಹುದ್ದೆಗಳಲ್ಲಿ ಕ್ರೀಡಾ ಕೋಟಾ ವಿಸ್ತರಣೆ ಸೇರಿದಂತೆ ಹಲವು ಮಹತ್ವದ ವಿಚಾರಗಳು ಚರ್ಚೆಗೆ ಬರಲಿವೆ.
ಎಲ್ಲಾ ಇಲಾಖೆಗಳಲ್ಲೂ ಕ್ರೀಡಾ ಕೋಟಾ ಹೆಚ್ಚಿಸುವ ಬಗ್ಗೆ ಸಂಪುಟ ನಿರ್ಧರಿಸುವ ಸಾಧ್ಯತೆ ಇದೆ. ರಾಜ್ಯದಲ್ಲಿ ಶೇಕಡಾ 2ರಷ್ಟು ಕ್ರೀಡಾ ಕೋಟಾ ನೀಡುವ ಸಾಧ್ಯತೆ ಇದೆ. ಹಟ್ಟಿ ಚಿನ್ನದ ಗಣಿ ಪುನರಾರಂಭದ ಬಗ್ಗೆಯೂ ಸಂಪುಟ ಅಂತಿಮ ತೀರ್ಮಾನ ಮಾಡುವ ಸಾಧ್ಯತೆಗಳಿವೆ. ಮತ್ತೊಂದು ಕಡೆ ಕನ್ನಡ ಬೋರ್ಡ್ ವಿಚಾರವಾಗಿ ರಾಜ್ಯಪಾಲರು ಸುಗ್ರೀವಾಜ್ಞೆ ಕಡತ ವಾಪಸ್ ಕಳಿಸಿದ್ದು, ಇದರ ಸಂಬಂಧ ಏನ್ ಹೆಜ್ಜೆ ಇಡಬೇಕು ಎಂದೂ ಸಂಪುಟದಲ್ಲಿ ಚರ್ಚೆ ನಡೆಸುವ ಸಾಧ್ಯತೆ ಇದೆ.
ಲೋಕಸಭೆ ಎಲೆಕ್ಷನ್ ದಿನಾಂಕ ಶೀಘ್ರವೇ ಘೋಷಣೆ ಆಗುವ ಹಿನ್ನೆಲೆಯಲ್ಲಿ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆಗಳೂ ಇವೆ.
ಇದನ್ನೂ ಓದಿ : ಕಾಶಿ ಕೇಸ್ನಲ್ಲಿ ಹಿಂದೂಗಳಿಗೆ ಭರ್ಜರಿ ಜಯ – ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ನಡೆಸಲು ಅನುಮತಿ..!