Download Our App

Follow us

Home » ಅಪರಾಧ » ಬಸ್ ಸೀಟ್‌ಗಾಗಿ ಜಗಳ.. ಗಂಡ-ಹೆಂಡತಿಗೆ ಮನಸೋ ಇಚ್ಛೆ ಥಳಿಸಿದ ಯುವಕರು..!

ಬಸ್ ಸೀಟ್‌ಗಾಗಿ ಜಗಳ.. ಗಂಡ-ಹೆಂಡತಿಗೆ ಮನಸೋ ಇಚ್ಛೆ ಥಳಿಸಿದ ಯುವಕರು..!

ಬೆಳಗಾವಿ : ಬಸ್ ಸೀಟ್‌ಗಾಗಿ ಶುರುವಾದ ಜಗಳ ವಿಕೋಪಕ್ಕೆ ತಿರುಗಿ ಗಂಡ-ಹೆಂಡತಿಗೆ ಯುವಕರು ಮನಸೋ ಇಚ್ಛೆ ಥಳಿಸಿದ ಘಟನೆ ಜಿಲ್ಲೆ ಹುಕ್ಕೇರಿ ತಾಲೂಕಿನ ಮಸರಗುಪ್ಪಿ ಕ್ರಾಸ್ ಬಳಿ ನಡೆದಿದೆ. ಪರಪ್ಪ ಶಿವಪ್ಪ ನಾಸಿಪುಡಿ, ಸುನಿತಾ ಹಲ್ಲೆಗೊಳಗಾದವರು.

ಗರ್ಭಿಣಿ ಅನ್ನೋದನ್ನೂ ನೋಡದೇ ಯುವಕರು ಥಳಿಸಿದ ಆರೋಪ ಕೇಳಿಬಂದಿದೆ. ಪತಿಗೆ ಹೊಡೆಯುತ್ತಿದ್ದವರನ್ನು ಬಿಡಿಸಲು ಹೋಗಿದ್ದ ಪತ್ನಿಗೂ ಯುವಕರು ಥಳಿಸಿದ್ದಾರೆ ಎನ್ನಲಾಗಿದೆ.

ಸಂಕೇಶ್ವರದಿಂದ ಗೋಕಾಕ್​​ಗೆ ಹೊರಟಿದ್ದ ಬಸ್​ನಲ್ಲಿ ಸೀಟ್​ಗಾಗಿ ಜಗಳ ಶುರುವಾಗಿತ್ತು. ಈ ಬಗ್ಗೆ ಸಿಂಧಿಕುರಬೇಟ ಗ್ರಾಮದ ಮಹಿಳೆಯರು ಮನೆಯವರಿಗೆ ಹೇಳಿದ್ರು. ಆ ಬಳಿಕ ಫಿಲ್ಮಿ ಸ್ಟೈಲ್​​ನಲ್ಲಿ ಬಂದ 10ಕ್ಕೂ ಹೆಚ್ಚು ಯುವಕರು ಗಂಡ-ಹೆಂಡತಿ ಹಲ್ಲೆ ಮಾಡಿದ್ದಾರೆ. ಹುಕ್ಕೇರಿ ಪೊಲೀಸ್​ ಠಾಣೆಯಲ್ಲಿ ಯುವಕರ ವಿರುದ್ಧ ಕೇಸ್​ ದಾಖಲಾಗಿದೆ.

ಇದನ್ನೂ ಓದಿ : ಸೈಕ್ಲೋನ್​ ಎಫೆಕ್ಟ್ – ಚಾಮುಂಡಿ ಬೆಟ್ಟದಲ್ಲಿ ಉರುಳಿದ ಬೃಹತ್ ಬಂಡೆ.. ಬಸ್​ ಜಸ್ಟ್​ ಮಿಸ್​..!

Leave a Comment

DG Ad

RELATED LATEST NEWS

Top Headlines

ಮಾಜಿ ಪ್ರಧಾನ ಮಂತ್ರಿ ಡಾ.ಮನಮೋಹನ್ ಸಿಂಗ್ ವಿಧಿವಶ..!

ನವದೆಹಲಿ : ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ನಿಧನರಾಗಿದ್ದಾರೆ. 92 ವರ್ಷದ ಮನಮೋಹನ್ ಸಿಂಗ್ ಅವರು ದೆಹಲಿಯ ಏಮ್ಸ್‌ ಆಸ್ಪತ್ರೆಯ್ಲಲಿ ಇಂದು ಕೊನೆಯುಸಿರೆಳೆದಿದ್ದಾರೆ. ರಾತ್ರಿ 8

Live Cricket

Add Your Heading Text Here