Download Our App

Follow us

Home » ಸಿನಿಮಾ » ಬಿಗ್​ಬಾಸ್​ ಮನೆಯಲ್ಲಿ ಈ ವಾರ ಉಳಿಯೊದ್ಯಾರು? ಎಲಿಮಿನೇಟ್ ಆಗೋದ್ಯಾರು?

ಬಿಗ್​ಬಾಸ್​ ಮನೆಯಲ್ಲಿ ಈ ವಾರ ಉಳಿಯೊದ್ಯಾರು? ಎಲಿಮಿನೇಟ್ ಆಗೋದ್ಯಾರು?

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್​ 11ರಲ್ಲಿ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎನ್ನುವ ಕುತೂಹಲ ಮೂಡಿದೆ. ‘ವಾರದ ಕತೆ ಕಿಚ್ಚನ ಜೊತೆ’ ಇವತ್ತಿನ ಎಪಿಸೋಡ್​ ವೀಕ್ಷಿಸಲು ವೀಕ್ಷಕರು ತುಂಬಾ ಎಕ್ಸೈಟ್ ಆಗಿದ್ದಾರೆ.

ಈಗಾಗಲೇ ಬಿಗ್​ಬಾಸ್​ ಶುರುವಾಗಿ 9 ವಾರ ಕಳೆದು 10ನೇ ವಾರಕ್ಕೆ ಕಾಲಿಡುತ್ತಿದ್ದು, ಈ ವಾರ ಮನೆಯಿಂದ ಹೊರ ಹೋಗಲು ಒಟ್ಟು 7 ಮಂದಿ ನಾಮಿನೇಟ್ ಆಗಿದ್ದಾರೆ. ಶೋಭಾ ಶೆಟ್ಟಿ, ಗೋಲ್ಡ್ ಸುರೇಶ್, ಶಿಶಿರ್, ಭವ್ಯ, ಚೈತ್ರಾ, ತ್ರಿವಿಕ್ರಮ್ ಹಾಗೂ ಐಶ್ವರ್ಯ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಒಬ್ಬರಿಗೆ ಬಿಗ್​ಬಾಸ್​ ಜರ್ನಿ ಅಂತ್ಯಗೊಳ್ಳಲಿದೆ.

ಇನ್ನು ಆಟದ ದೃಷ್ಟಿಯಲ್ಲಿ ನೋಡಿದರೆ ಐಶ್ವರ್ಯಾ ಅವರು ಸ್ವಲ್ಪ ವೀಕ್ ಸ್ಪರ್ಧಿ ಎನಿಸಿಕೊಂಡಿದ್ದು, ಅವರು ಈ ವಾರ ಎಲಿಮಿನೇಟ್ ಆಗೋ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಈ ವಾರ ಯಾರು ಬಿಗ್​ಬಾಸ್​ನಿಂದ ಯಾರು ಹೋಗಲಿದ್ದಾರೆ ಎಂದು ನಾಳೆ ಗೊತ್ತಾಗಲಿದೆ.

ಇನ್ನು ಕಿಚ್ಚನ ಪಂಚಾಯ್ತಿಯಲ್ಲಿ ಯಾವೆಲ್ಲ ವಿಚಾರಗಳು ಚರ್ಚೆಗೆ ಬರಲಿದೆ ಅನ್ನೋದ್ರ ಬಗ್ಗೆಯೂ ಕುತೂಹಲ ಮೂಡಿದ್ದು, ಉಗ್ರಂ ಮಂಜು ಬಿಗ್​ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದರು. ಅವರ ಕ್ಯಾಪ್ಟನ್ಸಿ ಅವಧಿಯಲ್ಲಿ ಮಹಾರಾಜರಾಗಿ ಬಡ್ತಿ ಪಡೆದಿದ್ದ ಮಂಜಣ್ಣ ರಾಜ ದರ್ಬಾರ್​ ಜೋರಾಗಿ ನಡೆಸಿದ್ದಾರೆ. ಟಾಸ್ಕ್​​ ವೇಳೆ ನಡೆದ ಮಾತಿನ ಯುದ್ಧಗಳು, ಸರಿ ತಪ್ಪುಗಳ ಕಿತ್ತಾಟ, ಭಾವನೆಗಳ ಜೊತೆಗಿನ ಕಣ್ಣೀರನ ಬಗ್ಗೆ ಸುದೀಪ್ ಚರ್ಚೆ ನಡೆಸುವ ಸಾಧ್ಯತೆಯಿದೆ.

ಇದನ್ನೂ ಓದಿ : ಮಂಡ್ಯ ಆಯ್ತು ರಾಮನಗರ ಮುಗೀತು.. ಈಗ ಹಾಸನದಲ್ಲಿ ನಿಖಿಲ್ ಹವಾ..!

Leave a Comment

DG Ad

RELATED LATEST NEWS

Top Headlines

ಮಾಜಿ ಪ್ರಧಾನ ಮಂತ್ರಿ ಡಾ.ಮನಮೋಹನ್ ಸಿಂಗ್ ವಿಧಿವಶ..!

ನವದೆಹಲಿ : ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ನಿಧನರಾಗಿದ್ದಾರೆ. 92 ವರ್ಷದ ಮನಮೋಹನ್ ಸಿಂಗ್ ಅವರು ದೆಹಲಿಯ ಏಮ್ಸ್‌ ಆಸ್ಪತ್ರೆಯ್ಲಲಿ ಇಂದು ಕೊನೆಯುಸಿರೆಳೆದಿದ್ದಾರೆ. ರಾತ್ರಿ 8

Live Cricket

Add Your Heading Text Here