ಭಾರತದ ಚುನಾವಣಾ ವ್ಯವಸ್ಥೆಯ ಬಗ್ಗೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಎಲಾನ್ ಮಸ್ಕ್, ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ಅದ್ಭುತವಾಗಿ ನಡೆಯುತ್ತದೆ. ಒಂದೇ ಒಂದು ದಿನದಲ್ಲಿ ಇಡೀ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯವನ್ನು ಮುಗಿಸುತ್ತಾರೆ. ಈ ಬಾರಿ ಬರೋಬ್ಬರಿ 64 ಕೋಟಿ ಮತಗಳನ್ನು ಒಂದೇ ದಿನದಲ್ಲಿ ಎಣಿಕೆ ಮಾಡಿದೆ ಎಂದು ಬರೆದುಕೊಂಡಿದ್ದಾರೆ.
ಕ್ಯಾಲಿಫೋರ್ನಿಯಾದಲ್ಲಿ ಮತಎಣಿಕೆ ಶುರುವಾಗಿ ಇಷ್ಟು ದಿನ ಕಳೆದರು ಇನ್ನು ಮತ ಎಣಿಕೆ ಕಾರ್ಯ ಮುಗಿದಿಲ್ಲ. ಕ್ಯಾಲಿಫೋರ್ನಿಯಾದಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಅಧಿಕೃತವಾಗಿ ಪ್ರಕಟಿಸದ ಹಿನ್ನೆಲೆಯಲ್ಲಿ ಎಲಾನ್ ಮಸ್ಕ್ ಎಕ್ಸ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡು, ಅಮೆರಿಕ ಚುನಾವಣೆಯ ಮತ ಏಣಿಕೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಭಾರತವು ಒಂದೇ ದಿನ 64 ಕೋಟಿ ಮತಗಳನ್ನು ಎಣಿಕೆ ಮಾಡಿದೆ. ಆದ್ರೆ ಕ್ಯಾಲಿಫೋರ್ನಿಯಾದಲ್ಲಿ ಇನ್ನೂ ಎಣಿಕೆ ನಡೆಯುತ್ತಲೇ ಇದೆ ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ತಲೆ ಬಡಿದುಕೊಳ್ಳುತ್ತಿರುವ ಎಮೋಜಿಯೊಂದನ್ನ ಹಂಚಿಕೊಂಡಿದ್ದಾರೆ.
ಯಾಕೆ ಕ್ಯಾಲಿಫೋರ್ನಿಯಾ ಫಲಿತಾಂಶ ಇನ್ನೂ ಘೋಷಣೆ ಆಗಿಲ್ಲ : ಕ್ಯಾಲಿಫೋರ್ನಿಯಾ ಚುನಾವಣೆಯ ಮತ ಎಣಿಕೆ ಆರಂಭವಾಗಿ 18 ದಿನಗಳು ಕಳೆದಿವೆ. ಆದರೆ ಇನ್ನು 3 ಲಕ್ಷ ಮತ ಎಣಿಕೆ ಮಾಡಲು ಬಾಕಿ ಉಳಿದಿದೆ. ಕ್ಯಾಲಿಫೋರ್ನಿಯಾವೂ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಅಮೆರಿಕಾದ ರಾಜ್ಯವಾಗಿದ್ದು, 39 ಮಿಲಿಯನ್ ಜನ ಅಲ್ಲಿ ವಾಸ ಮಾಡ್ತಿದ್ದಾರೆ.
ಅದರಲ್ಲಿ ನವಂಬರ್ 5 ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ 16 ಮಿಲಿಯನ್ ಜನ ಮತ ಚಲಾಯಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕ್ಯಾಲಿಫೋರ್ನಿಯಾ ಅತ್ಯಂತ ನಿಧಾನವಾಗಿ ಮತ ಎಣಿಕೆ ಮಾಡಿ ಫಲಿತಾಂಶ ದಾಖಲಿಸುವ ರಾಜ್ಯ ಎನಿಸಿದೆ. ಪ್ರಾಥಮಿಕವಾಗಿ ಅದರ ರಾಜ್ಯದ ದೊಡ್ಡ ಗಾತ್ರ ಮತ್ತು ಇ ಮೇಲ್ ಮತ ಎಣಿಕೆಯ ಸಂಖ್ಯೆ ಹೆಚ್ಚಳವೂ ಈ ನಿಧಾನಗತಿಯ ಮತ ಎಣಿಕೆಗೆ ಕಾರಣವಾಗಿದೆ.
ಇದನ್ನೂ ಓದಿ : ನೀವು ಸೋತಿರಬಹುದು ಆದ್ರೆ ಜನರ ಮನಸ್ಸಿನಲ್ಲಿದ್ದೀರಾ – ನಿಖಿಲ್ಗೆ ರಕ್ತದಲ್ಲೇ ಪತ್ರ ಬರೆದ ಅಭಿಮಾನಿ..!