Download Our App

Follow us

Home » ಸಿನಿಮಾ » ನಾನು ರಿಲೇಶನ್‌‌ಶಿಪ್‌‌‌ನಲ್ಲಿ ಇದ್ದೇನೆ – ಮದುವೆ ಬಗ್ಗೆ ವಿಜಯ್‌ ದೇವರಕೊಂಡ ಓಪನ್ ಟಾಕ್..!

ನಾನು ರಿಲೇಶನ್‌‌ಶಿಪ್‌‌‌ನಲ್ಲಿ ಇದ್ದೇನೆ – ಮದುವೆ ಬಗ್ಗೆ ವಿಜಯ್‌ ದೇವರಕೊಂಡ ಓಪನ್ ಟಾಕ್..!

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕೆಲವು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಲೇ ಇತ್ತು. ಆಗಾಗ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ತಮ್ಮ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಕಾಲಕಾಲಕ್ಕೆ ಸ್ಪಷ್ಟನೆ ನೀಡುತ್ತಲೇ ಇದ್ದಾರೆ. ಇದರ ಬೆನ್ನಲ್ಲೇ ವಿಜಯ್ ದೇವರಕೊಂಡ ಇತ್ತೀಚೆಗೆ ಪ್ರೀತಿ, ಸಂಬಂಧಗಳು ಮತ್ತು ಮದುವೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಜತೆಗೆ ತಾನು ರಿಲೇಶನ್‌ಶಿಪ್‌ನಲ್ಲಿ ಇದ್ದೇನೆ ಎಂದು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ವಿಜಯ್‌ ವಿಜಯ್ ದೇವರಕೊಂಡ ಸಂಬಂಧಗಳು ಮತ್ತು ಮದುವೆಯ ಬಗ್ಗೆ ಇರುವ ಅಭಿಪ್ರಾಯಗಳನ್ನು ಹೇಳಿಕೊಂಡಿದ್ದಾರೆ. ಪ್ರೀತಿಸುವುದು ಹೇಗೆ ಎಂದು ನನಗೆ ತಿಳಿದಿದೆ. ಮತ್ತು ಪ್ರೀತಿಸುವುದು ಏನು ಎಂದು ನನಗೆ ತಿಳಿದಿದೆ. ನನಗೆ ಅನ್‌ಕಂಡಿಷನಲ್‌ ಪ್ರೀತಿ ತಿಳಿದಿಲ್ಲ. ಏಕೆಂದರೆ ನನ್ನ ಪ್ರೀತಿಯು ನಿರೀಕ್ಷೆಗಳೊಂದಿಗೆ ಬರುತ್ತದೆ. ಮತ್ತು ಷರತ್ತುಗಳಿಲ್ಲದೆ ಬರುವ ಯಾವುದೇ ಪ್ರೀತಿಯ ಬಗ್ಗೆ ನನಗೆ ತಿಳಿದಿಲ್ಲ ಉಳಿದಂತೆ, ನಾನು ತುಂಬಾ ರೋಮ್ಯಾಂಟಿಸೈಸ್ಡ್ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಮದುವೆಯು ಯಾರೊಬ್ಬರ ವೃತ್ತಿಜೀವನದ ನಡುವೆ ಬರಬೇಕಾಗಿಲ್ಲ. ಹೆಣ್ಣಿಗೆ ಮದುವೆ ಸ್ವಲ್ಪ ಕಷ್ಟ ಖಂಡಿತ. ಇದು ನೀವು ಮಾಡುತ್ತಿರುವ ವೃತ್ತಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ಹೇಳಿದರು. ಬಳಿಕ “ನನಗೆ 35 ವರ್ಷ; ನಾನು ಒಬ್ಬಂಟಿಯಾಗಿದ್ದೇನೆ ಎಂದು ನೀವು ಭಾವಿಸುತ್ತೀರಾ?” ಎಂದು ಅವರೇ ಪ್ರಶ್ನೆ ಇಟ್ಟಿದ್ದಾರೆ. ಈ ಮೂಲಕ ರಿಲೇಶನ್‌ಶಿಪ್‌ನಲ್ಲಿ ಇದ್ದೇನೆ ಎಂದು ನಟ ಒಪ್ಪಿಕೊಂಡಿದ್ದಾರೆ.

ನೀವು ಎಂದಾದರೂ ಸಹ-ನಟಿಯ ಜೊತೆ ಡೇಟ್ ಮಾಡಿದ್ದೀರಾ ಎಂದು ಕೇಳಿದಾಗ, ನಟ “ಖಂಡಿತ ಡೇಟಿಂಗ್‌ ಮಾಡುತ್ತಿರುವೆ” ಎಂದು ಹೇಳಿದ್ದಾರೆ, “ನಾನು ಡೇಟ್‌ಗಳಿಗೆ ಹೆಚ್ಚಾಗಿ ಹೋಗುವುದಿಲ್ಲ. ನಾನು ಬಹಳ ಸಮಯದ ನಂತರ ಮಾತ್ರ ಕೆಲವೊಮ್ಮೆ ಹೊರಗೆ ಹೋಗುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : ಬಡವರ ಬಿಪಿಎಲ್‌ ಕಾರ್ಡ್‌ ರದ್ದಾದರೆ ಅಧಿಕಾರಿಗಳ ವಿರುದ್ಧವೇ ಕ್ರಮ : ಸಿಎಂ ಸಿದ್ದರಾಮಯ್ಯ ಎಚ್ಚರಿಕೆ..!

Leave a Comment

DG Ad

RELATED LATEST NEWS

Top Headlines

ಮತ್ತೆ ರಣರಂಗವಾಯ್ತು ಬಿಗ್ ಬಾಸ್ ಮನೆ.. ತಾಕತ್ ಇದ್ರೆ ತಡೆಯಿರಿ ಎಂದು ಶಿಶಿರ್​​ಗೆ ಚೈತ್ರಾ ಕುಂದಾಪುರ ಸವಾಲ್..!​

ಬಿಗ್​ ಬಾಸ್​ ಕನ್ನಡ ಸೀಸನ್​ 11ಕ್ಕೆ ರಜತ್​​ ​ಹಾಗೂ ಶೋಭಾ ಶೆಟ್ಟಿ ವೈಲ್ಡ್​​ ಕಾರ್ಡ್​ ಸ್ಪರ್ಧಿಗಳಾಗಿ ಆಗಮಿಸಿದ್ದು, ಮನೆಯ ಆಟ ಒಂದು ಹಂತ ಮುಂದಕ್ಕೋಗಿದೆ. ಇದೀಗ ಕಳೆದ

Live Cricket

Add Your Heading Text Here