ಮೈಸೂರು : ಚನ್ನಪಟ್ಟಣ ಬೈ ಎಲೆಕ್ಷನ್ ಪ್ರಚಾರದ ಸಂದರ್ಭದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರನ್ನು ಕರಿಯ ಎಂದು ಕರೆಯುವ ಮೂಲಕ ಕಪ್ಪು ವರ್ಣದ ಜನಾಂಗೀಯ ನಿಂದನೆ ಮಾಡಿದ್ದರು. ಇದು ರಾಜ್ಯದಲ್ಲಿ ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಸದ್ಯ ಈ ಒಂದು ಹೇಳಿಕೆಯಿಂದ ಕಾಂಗ್ರೆಸ್ ಅಭ್ಯರ್ಥಿ ಸೋಲುವ ಸಾಧ್ಯತೆ ಇದೆ ಎನ್ನುವ ವಿಶ್ಲೇಷನೆಗಳು ನಡೆಯುತ್ತಿವೆ. ಈ ಹೇಳಿಕೆ ಕುರಿತು ಇಲ್ಲಿಯವರೆಗೂ ಒಂದೇ ಒಂದು ಹೇಳಿಕೆ ನೀಡದ ಕುಮಾರಸ್ವಾಮಿಯವರು ಇದೀಗ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
ಇಂದು ಚಾಮುಂಡಿಬೆಟ್ಟದಲ್ಲಿ ಸಚಿವ ಜಮೀರ್ ಹೇಳಿಕೆಗೆ ಹೆಚ್ಡಿಕೆ ಪ್ರತಿಕ್ರಿಯಿಸಿದ್ದು, ‘ಜಮೀರ್ ಅಹ್ಮದ್ರನ್ನು ನಾನು ಯಾವತ್ತೂ ಕುಳ್ಳ ಎಂದು ಕರೆದಿಲ್ಲ.ಜಮೀರ್ ಮಾತು ಅವರ ಸಂಸ್ಕೃತಿಯನ್ನು ತೋರಿಸುತ್ತೆ, ನಾನು ಕುಳ್ಳ ಎಂದು ಇಡೀ ಜೀವಮಾನದಲ್ಲಿ ಕರೆದಿಲ್ಲ ಎಂದು ಹೇಳಿದ್ದಾರೆ.
ಜಮೀರ್ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಬೇಕಿತ್ತು. ಸಿಎಂ, ಡಿಸಿಎಂ ಗೃಹ ಸಚಿವರು ಈ ವಿಚಾರಕ್ಕೆ ಏನು ಹೇಳಿದ್ದಾರೆ ಎನ್ನುವುದು ಗೊತ್ತಿದೆ. ಈ ವಿಚಾರವನ್ನು ಅವರು ಡಿಫೆಂಡ್ ಮಾಡಿಕೊಂಡಿದ್ದಾರೆ. ಎಂಥ ಎಂತಹದ್ದೋ ಪೋಸ್ಟ್ ಮಾಡಿದವರ ಮೇಲೆಲ್ಲಾ ಕೇಸ್ ಹಾಕ್ತಾರೆ. ಇಂಥಾ ಹೇಳಿಕೆ ಕೊಟ್ಟ ಜಮೀರ್ ಮೇಲೆ ಕ್ರಮ ಏಕಿಲ್ಲ? ಇವರಿಗೆ ಮಾನ ಮರ್ಯಾದೆ ಇದ್ದರೆ ಈ ಪ್ರಕರಣಕ್ಕೂ ಎಸ್ಐಟಿ ರಚನೆ ಮಾಡಿ ತನಿಖೆ ಮಾಡಲಿ. ಈ ರೀತಿಯ ಸರ್ಕಾರವನ್ನು ನಾಗರಿಕ ಸರ್ಕಾರ ಅಂತ ನಾವು ಕರಿಬೇಕಾ? ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ಗೆಲ್ಲುತ್ತೇವೆ : ಚನ್ನಪಟ್ಟಣದಲ್ಲಿ ಜನತೆಯ ಆಶೀರ್ವಾದ ಆಗಿದೆ. ಉತ್ತಮವಾದ ರೀತಿಯಲ್ಲಿ ಗೆಲ್ಲುತ್ತೇವೆ. ರಾಜಕೀಯವಾಗಿ ಏನು ನಡೆದಿದೆ ಎಂಬುದನ್ನು ಯೋಗೇಶ್ವರ್ ವಿಮರ್ಶೆ ಮಾಡಿದ್ದಾರೆ. ಜಮೀರ್ ಹೇಳಿಕೆಯಿಂದ ಏನು ವ್ಯತ್ಯಾಸ ಆಗಿಲ್ಲ. ನಾವು ಚನ್ನಪಟ್ಟಣ ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ : ಸೀರಿಯಲ್ಗೆ ಗುಡ್ ಬೈ, ಮನಾಲಿಯಲ್ಲಿ ಪ್ರತ್ಯಕ್ಷ.. ನಟಿ ಸಂಜನಾ ಬುರ್ಲಿ ಪೋಟೋಸ್ ವೈರಲ್..!