ಮೈಸೂರು : ಮುಡಾ ಪ್ರಕರಣ ಸಂಬಂಧ ED ವಿಚಾರಣೆಗೆ ಹಾಜರಾದ ಬೆನ್ನಲ್ಲೇ ಬಿ.ಕೆ. ಕುಮಾರ್ನನ್ನು ಕೆಲಸದಿಂದ ವಜಾ ಮಾಡಲಾಗಿದೆ. ಮೈಸೂರು ಪಾಲಿಕೆ ನೌಕರನಾಗಿದ್ದ ಬಿ.ಕೆ ಕುಮಾರ್ ದ್ವಿತೀಯ ದರ್ಜೆ ಸಹಾಯಕನಾಗಿದ್ದ.
ಬಿ.ಕೆ ಕುಮಾರ್ ಮುಡಾದಿಂದ ದಾಖಲೆ ತಂದುಕೊಟ್ಟು ಸೈಟ್ ಅಕ್ರಮಕ್ಕೆ ಸಾಥ್ ನೀಡಿದ್ದಾನೆ. ಮುಡಾ ಮತ್ತು ಪಾಲಿಕೆ ಎರಡರಲ್ಲೂ ಕೆಲಸ ಮಾಡ್ತಿದ್ದ ಕುಮಾರ್ನ್ನು ED ವಿಚಾರಣೆ ಬೆನ್ನಲ್ಲೇ ಕಮಿಷನರ್ ವಜಾ ಮಾಡಿದ್ದಾರೆ. ಮೂಲತಃ ಪಾಂಡವಪುರ ತಾಲೂಕು ಬೇವಿನಕುಪ್ಪೆಯವನಾಗಿರುವ ಕುಮಾರ್ ಮುಡಾದಲ್ಲಿ 2004ರಿಂದ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ. ಸದ್ಯ ಮೈಸೂರಿನ ವಿಜಯನಗರದ 2ನೇ ಹಂತದಲ್ಲಿ ವಾಸವಾಗಿದ್ದಾನೆ.
ಅಲ್ಪಕಾಲದಲ್ಲೇ ಐಷಾರಾಮಿ ಜೀವನ ನಡೆಸುತ್ತಿದ್ದ ಕುಮಾರ್ 2020ರಿಂದೀಚೆಗೆ ಮುಡಾ ಮುಖ್ಯ ಲೆಕ್ಕಾಧಿಕಾರಿ ಕಚೇರಿಯಲ್ಲಿ ಗುಮಾಸ್ತನಾಗಿದ್ದಾನೆ. ಈ ವೇಳೆ ಇಬ್ಬರು ಕಮಿಷನರ್‌ಗಳಿಗೆ ಶೇ.50:50ರಡಿ ಸೈಟ್ಗಳ ಪಟ್ಟಿ ಒದಗಿಸಿದ್ದ. ಪ್ರಭಾವಿ ಜನಪ್ರತಿನಿಧಿಗಳು, ಮಧ್ಯವರ್ತಿಗಳಿಗೆ ಪ್ರತಿಷ್ಠಿತ ಬಡಾವಣೆಗಳಲ್ಲಿ ಸೈಟ್ ನೀಡಿದ್ದು, ಕೋಟ್ಯಾಂತರ ಬೆಲೆ ಬಾಳುವ ಸೈಟ್ ಮಂಜೂರು ಮಾಡಿಸಿದ್ದ ಆರೋಪ ಬಿ.ಕೆ. ಕುಮಾರ್ ಮೇಲಿದೆ.
ಬಿ.ಕೆ. ಕುಮಾರ್ 8000 ಖಾಲಿ ಸೈಟ್ಗಳ ಪಟ್ಟಿಯಲ್ಲಿದ್ದ ಸೈಟ್ ಕಂಡಕಂಡವರಿಗೆ ಹಂಚಲು ಸಹಕಾರ ಮಾಡಿದ್ದಾನೆ. ಮುಡಾ ಕಚೇರಿಯ ಎಲ್ಲಾ ವಿಭಾಗದಲ್ಲಿ ಬಿ.ಕೆ.ಕುಮಾರ್ನದ್ದೇ ಪಾರುಪತ್ಯವಿದ್ದು, ಬೇಕಾದ ದಾಖಲೆ ಕ್ಷಣಾರ್ಧದಲ್ಲೇ ಕುಮಾರ್ ಕೈಯಲ್ಲಿರುತ್ತಿತ್ತು. ಬಿ.ಕೆ. ಕುಮಾರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಪಾಲಿಕೆ ಕಮಿಷನರ್ ಸೂಚನೆ ನೀಡಿದ್ದು, ಐದು ದಿನದ ಹಿಂದೆಯೇ ಬಿ.ಕೆ ಕುಮಾರ್ನ್ನು ಇಡಿ ವಶಕ್ಕೆ ಪಡೆದಿದೆ.
ಇದನ್ನೂ ಓದಿ : ‘ರಿದಂ’ಗೆ ರಾಯರ ಆಶೀರ್ವಾದ – ಮಂತ್ರಾಲಯದಲ್ಲಿ ಚಿತ್ರದ ಟ್ರೈಲರ್ ರಿಲೀಸ್..!