ದೇಶದಲ್ಲಿ ಹರಿಯಾಣದ ನಂತರ ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ನಲ್ಲಿ ಚುನಾವಣೆ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಯಾರು ಅಧಿಕಾರದ ಗದ್ದುಗೆ ಹಿಡಿಯುತ್ತಾರೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ. ಇದೀಗ ಮಹಾರಾಷ್ಟ್ರದ ಮಹಾ ಅಖಾಡದಲ್ಲಿ ಕರ್ನಾಟಕ ಕಾಂಗ್ರೆಸ್ನ ಜೋಡೆತ್ತುಗಳು ಪ್ರಚಾರಕ್ಕೆ ಧುಮುಕಳಿದ್ದಾರೆ.
ಮಹರಾಷ್ಟ್ರದಲ್ಲಿ ಮಹಾ ಅಘಾಡಿ(ಕಾಂಗ್ರೆಸ್ ಮೈತ್ರಿ) ಅಭ್ಯರ್ಥಿಗಳ ಪರ ಸಿಎಂ ಸಿದ್ದು-ಡಿಸಿಎಂ ಡಿಕೆಶಿ ಮತಯಾಚಿಸಲಿದ್ದಾರೆ. ಸಿಎಂ-ಡಿಸಿಎಂ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಪ್ರಚಾರ ಮಾಡಲಿದ್ದು, ಇಂದು ಅಹ್ಮದ್ ನಗರಕ್ಕೆ ಸಿಎಂ ಸಿದ್ದು ಭೇಟಿ ನೀಡಲಿದ್ದಾರೆ. ಚೋಂಡಿಯಲ್ಲಿ ಅಹಲ್ಯಾದೇವಿ ಹೋಲ್ಕರ್ ಪುತ್ತಳಿಗೆ ನಮನ ಸಲ್ಲಿಸಿ, ಸಾಂಗ್ಲಿಯ ಸಂಕದಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ನಂತರ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ನ ಬೃಹತ್ ಸಮಾವೇಶದಲ್ಲಿ ಮತ್ತು ನಾಂದೆಡ್ ಜಿಲ್ಲೆಯ ಮುಖೇಡ್ನಲ್ಲಿ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇಂದಿನಿಂದ ಎರಡು ದಿನ ಡಿಸಿಎಂ ಡಿಕೆಶಿ ಕೂಡ ಪ್ರಚಾರ ನಡೆಸಲಿದ್ದು, ಇಂದು ಮುಂಬೈಗೆ ತೆರಳಿ ಬಿವಾಂಡಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಚಂಡಿವಾಲಿ ಕ್ಷೇತ್ರದಲ್ಲಿ ಡಿಸಿಎಂ ಇಂದು ಸಂಜೆ ಮತಬೇಟೆ ಮಾಡಲಿದ್ದಾರೆ. ನಾಳೆ ಸೊಲ್ಲಾಪುರಕ್ಕೆ ತೆರಳಿ ಅಲ್ಲಿಯೂ ಜಾಟ್, ಅಕ್ಕಲಕೋಟೆ, ಸೊಲ್ಲಾಪುರ ಕ್ಷೇತ್ರಗಳಲ್ಲಿ ಡಿಸಿಎಂ ಡಿಕೆಶಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ನಾಳೆ ಸೊಲಾಪುರದಲ್ಲೇ ವಾಸ್ತವ್ಯ ಹೂಡುವ ಡಿಸಿಎಂ ಡಿಕೆಶಿ ನವೆಂಬರ್ 17ರಂದು ಲಾತೂರ್ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ.
ಇದನ್ನೂ ಓದಿ : ಇಂದಿನಿಂದ ಬೆಳ್ಳಿತೆರೆ ಮೇಲೆ ‘ಭೈರತಿ ರಣಗಲ್’ ಅಬ್ಬರ.. ಶಿವಣ್ಣನ ಖಡಕ್ ಅವತಾರ ಕಂಡು ಹುಚ್ಚೆದ್ದು ಕುಣಿದ ಫ್ಯಾನ್ಸ್..!