Download Our App

Follow us

Home » ಅಪರಾಧ » ರಾಜಕಾರಣಿಗಳಿಗೆ ಏಡ್ಸ್ ಇಂಜೆಕ್ಷನ್ ಚುಚ್ಚಲು ಮಾಸ್ಟರ್ ಪ್ಲಾನ್ ಕೊಟ್ಟಿದ್ದ ಕ್ರಿಮಿನಲ್ ಇನ್ಸ್​ಪೆಕ್ಟರ್ ಅಯ್ಯಣ್ಣ ರೆಡ್ಡಿಗೆ SIT ಡ್ರಿಲ್​..!

ರಾಜಕಾರಣಿಗಳಿಗೆ ಏಡ್ಸ್ ಇಂಜೆಕ್ಷನ್ ಚುಚ್ಚಲು ಮಾಸ್ಟರ್ ಪ್ಲಾನ್ ಕೊಟ್ಟಿದ್ದ ಕ್ರಿಮಿನಲ್ ಇನ್ಸ್​ಪೆಕ್ಟರ್ ಅಯ್ಯಣ್ಣ ರೆಡ್ಡಿಗೆ SIT ಡ್ರಿಲ್​..!

ಬೆಂಗಳೂರು : ರಾಜ್ಯ ರಾಜಕಾರಣದಲ್ಲೇ ಸಾಕಷ್ಟು ಸಂಚಲನ ಸೃಷ್ಟಿ ಮಾಡಿದ್ದ ಬಿಜೆಪಿ ಶಾಸಕ ಮುನಿರತ್ನ ವಿರುದ್ದದ ಅತ್ಯಾಚಾರ ಕೇಸ್ ತನಿಖೆ ಮತ್ತೆ ಚುರುಕುಗೊಂಡಿದ್ದು, ಜಾಮೀನು ಪಡೆದು ಶಾಸಕ ಮುನಿರತ್ನ ಹೊರ ಬಂದ ಬೆನ್ನಲ್ಲೇ ಇದೀಗ ಹನಿಟ್ರ್ಯಾಪ್​ ಪ್ರಕರಣದಲ್ಲಿ ಮುನಿರತ್ನಗೆ ಸಾಥ್​ ನೀಡುತ್ತಿದ್ದ ಆರೋಪದ ಮೇಲೆ ಹೆಬ್ಬಗೋಡಿಯ ಕ್ರಿಮಿನಲ್ ಇನ್ಸ್​ಪೆಕ್ಟರ್ ಅಯ್ಯಣ್ಣ ರೆಡ್ಡಿಯನ್ನ SIT ಬಂಧಿಸಿದೆ.

ಕೋರ್ಟ್ ನಾಲ್ಕು ದಿನಗಳ ಕಾಲ ಇನ್ಸ್​ಪೆಕ್ಟರ್​ ಅಯ್ಯಣ್ಣ ರೆಡ್ಡಿಯವರನ್ನು SIT ವಶಕ್ಕೆ ನೀಡಿದ್ದು, ಸದ್ಯ SIT ​ಅಯ್ಯಣ್ಣ ರೆಡ್ಡಿ ವಿಚಾರಣೆಯನ್ನ ಚುರುಕುಗೊಳಿಸಿದೆ. ವಿಚಾರಣೆ ವೇಳೆ ಹಲವು ಅಂಶಗಳು ಬಯಲಾಗಿದ್ದು, ಇನ್ಸ್​ಪೆಕ್ಟರ್​​​​ ಅಯ್ಯಣ್ಣ ರೆಡ್ಡಿಯವರೇ ರಾಜಕಾರಣಿಗಳಿಗೆ ಏಡ್ಸ್ ಇಂಜೆಕ್ಷನ್ ಚುಚ್ಚಲು ಮಾಸ್ಟರ್ ಪ್ಲಾನ್​​​​​ ಕೊಟ್ಟಿದ್ದರು ಎಂಬ ವಿಚಾರ ತನಿಖೆ ವೇಳೆ ಬಹಿರಂಗವಾಗಿದೆ.

ಶಾಸಕ ಮುನಿರತ್ನ ಪ್ರತಿನಿಧಿಸುತ್ತಿದ್ದ RRನಗರದಲ್ಲಿ ಅಯ್ಯಣ್ಣ ರೆಡ್ಡಿ ಹೆಚ್ಚು ಕೆಲಸ ಮಾಡಿದ್ದರು. ​ಮುನಿರತ್ನ ಹನಿಟ್ರ್ಯಾಪ್ ದಂಧೆಗೆ ಅಯ್ಯಣ್ಣ ರೆಡ್ಡಿ ಸಾಥ್​​ ನೀಡುತ್ತಿದ್ದರು. ಕೆಲವು ರಾಜಕಾರಣಿಗಳಿಗೆ ಏಡ್ಸ್ ಚುಚ್ಚುಮದ್ದು ಪ್ರಯೋಗಿಸಲು ಸಂಚು ಕೂಡ ರೂಪಿಸಲಾಗಿತ್ತು. ಸಂಚು ರೂಪಿಸಿದ್ದು ಗೊತ್ತಿದ್ದರೂ ಮಾಹಿತಿ ಬಚ್ಚಿಟ್ಟಿದ್ದರೆಂಬ ಆರೋಪ ಕೂಡ ಕೇಳಿ ಬಂದಿದ್ದು, ಸಂತ್ರಸ್ಥೆ ಹಾಗೂ ಮಾಜಿ ಕಾರ್ಪೊರೇಟರ್​​​ ವೇಲುನಾಯ್ಕರ್ ವಿಚಾರಣೆ ವೇಳೆ ಈ ಎಲ್ಲಾ ಮಾಹಿತಿಯನ್ನು SIT ಮುಂದೆ ಬಹಿರಂಗಪಡಿಸಿದ್ದಾರೆ.

ಸದ್ಯ ರಾಜಕಾರಣಿಗಳ ಟ್ರ್ಯಾಪ್‌ ಮಾಡಲು ಸಹಕರಿಸ್ತಿದ್ದ ಒಳಸಂಚಿನಲ್ಲಿ ಇನ್ಸ್​ಪೆಕ್ಟರ್ ಅಯ್ಯಣ್ಣ ರೆಡ್ಡಿ ಅವರನ್ನು ಬಂಧಿಸಲಾಗಿದ್ದು, ವಿಚಾರಣೆ ಮಾಡಲಾಗ್ತಿದೆ. SIT ಪೂರ್ಣ ತನಿಖೆ ಬಳಿಕವಷ್ಟೇ ಇನ್ಸ್​ಪೆಕ್ಟರ್ ಅಯ್ಯಣ್ಣ ಪಾತ್ರದ ಬಗ್ಗೆ ಹೆಚ್ಚಿನ ಸತ್ಯಾಸತ್ಯತೆ ಗೊತ್ತಾಗಲಿದೆ.

ಇದನ್ನೂ ಓದಿ : ಕೋವಿಡ್ ಹಗರಣದ ತನಿಖೆಗೆ SIT ರಚನೆ – ಅರೆಸ್ಟ್ ಆಗ್ತಾರಾ ಹಾರ್ಟ್ ಡಾಕ್ಟರ್ ಸಿಎನ್​ ಮಂಜುನಾಥ್?

Leave a Comment

DG Ad

RELATED LATEST NEWS

Top Headlines

ಬಿ.ವೈ.ವಿಜಯೇಂದ್ರಗೆ ಸಡ್ಡುಹೊಡೆದ ಭಿನ್ನರು – ಪ್ರತ್ಯೇಕ ವಕ್ಫ್​​ ಹೋರಾಟಕ್ಕೆ ಸಜ್ಜಾದ ಯತ್ನಾಳ್​​ ಟೀಂ..!

ಬೆಂಗಳೂರು : ಕರ್ನಾಟಕದ ವಿವಿಧ ಜಿಲ್ಲೆಗಳ ರೈತರಿಗೆ ವಕ್ಫ್​​ ಬೋರ್ಡ್ ​ನೋಟಿಸ್​ ನೀಡಿದೆ. ರೈತರ ಜಮೀನಿಗೆ ನೋಟಿಸ್ ನೀಡುತ್ತಿರುವ ಸರ್ಕಾರದ ವಿರುದ್ದ ನ.​​ 25 ರಿಂದ ಡಿ.​ 25ರವರೆಗೆ

Live Cricket

Add Your Heading Text Here