ಬೆಂಗಳೂರು : ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಕಾಪುವಿನ ಅಮ್ಮನ ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ಬೆಂಗಳೂರು ಸಮಿತಿ ವತಿಯಿಂದ ವಾಗೀಶ್ವರಿ ಪೂಜೆ ಮತ್ತು ಲೇಖನ ಸಂಕಲ್ಪವು ನ.17ರಂದು ಭಾನುವಾರ ಬೆಂಗಳೂರಿನ ಅರಮನೆ ಮೈದಾನದ ಗ್ರಾಯಿತ್ರಿ ವಿಹಾರ್ದಲ್ಲಿ ನಡೆಯಲಿದೆ.
ಇಂದು ಬೆಂಗಳೂರಿನಲ್ಲಿ ಹೊಸ ಕಾಪು ಮಾರಿಗುಡಿ ಅಭಿವೃದ್ಧಿ ಸಮಿತಿ ಸುದ್ದಿಗೋಷ್ಠಿ ನಡೆಸಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಸಮಿತಿಯ ಅಧ್ಯಕ್ಷರಾದ ಕೆ. ಪ್ರಕಾಶ್ ಶೆಟ್ಟಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ , ಉಪೇಂದ್ರ ಶೆಟ್ಟಿ ಸುದ್ದಿಗೋಷ್ಟಿಯಲ್ಲಿ ಭಾಗಿಯಾಗಿದ್ದರು.
ದೇಗುಲ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, ಬೆಳಗ್ಗೆ 9 ಗಂಟೆಗೆ ದೇವರ ಸಾನಿಧ್ಯದಲ್ಲಿ ಪಾರ್ಥನೆ ನಡೆಯಲಿದ್ದು, ಬೆಳಗ್ಗೆ 10.09ಕ್ಕೆ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ ಆರಂಭ ಆಗಲಿದೆ. ಈ ಪೂಜೆಗೆ ನಾಲ್ಕು ಸಾವಿರಕ್ಕೂ ಹೆಚ್ಚು ಜನ ನೊಂದಣಿ ಮಾಡಿಕೊಂಡಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಭಕ್ತರು ಬೆಂಗಳೂರಿನಲ್ಲಿ ಇದ್ದಾರೆ. ಅವರನ್ನ ಆಹ್ವಾನಿಸಿ ಪೂಜೆಯನ್ನು ನೆಡೆಸಲಾಗುತ್ತದೆ ಅಂತಾ ತಿಳಿಸಿದರು.
ಫೆಬ್ರವರಿ 25 ರಿಂದ ಮಾರ್ಚ್ 5ರ ತನಕ ಕಾಪು ಮಾರಿಗುಡಿಯಲ್ಲಿ ಸತತ 9 ದಿನ ಪೂಜೆ ನಡೆಯಲಿದೆ. ಕಾರ್ಯಕ್ರಮಕ್ಕೆ ಯೋಗಿ ಆದಿತ್ಯನಾತ್, ಸದ್ಗುರು, ಸಿಎಂ, ಡಿಸಿಎಂ, ಬಾಲಿವುಡ್ ನಟ ನಟಿಯರು ಭಾಗವಹಿಸಲಿದ್ದಾರೆ. ಇಲ್ಲಿ ಆಳ್ವಾಸ್ ಸಾಂಸ್ಕೃತಿಕ ಕಾರ್ಯಕ್ರಮ, ಶಿವದೂತ ಗುಳಿಗ ನಾಟಕ ಸೇರಿ ವಿವಿಧ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಇನ್ನು ವಾಗೀಶ್ವರಿ ಪೂಜೆ ಮತ್ತು ಲೇಖನ ಸಂಕಲ್ಪಕ್ಕೆ ಕುಳಿತುಕೊಳ್ಳುವ ಪುರುಷರು ಬಿಳಿ ದೋತಿ, ಶರ್ಟ್, ಶಾಲು ಮತ್ತು ಮಹಿಳೆಯರು ಅರಿಶಿಣ ಅಥವಾ ಕುಂಕುಮ ಬಣ್ಣದ ಸೀರೆ ಧರಿಸಿ ಸಾಂಪ್ರದಾಯಿಕವಾಗಿರಬೇಕು ಎಂದು ತಿಳಿಸಲಾಗಿದೆ.
ಇದನ್ನೂ ಓದಿ : ರಾಜ್ಯದಲ್ಲಿ ನಿಮ್ಮದೇ ಸರ್ಕಾರ, ತನಿಖಾ ಸಂಸ್ಥೆಗಳಿವೆ.. 50 ಕೋಟಿ ಆಮಿಷದ ಮೂಲ ತಿಳಿಸಿ – ಸಿಎಂಗೆ ವಿಜಯೇಂದ್ರ ಟಾಂಗ್..!