Download Our App

Follow us

Home » ಸಿನಿಮಾ » ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್​ಬಾಸ್​ ಖ್ಯಾತಿಯ ಮಂಜು ಪಾವಗಡ.. ಫೋಟೋಸ್​ ವೈರಲ್..!

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್​ಬಾಸ್​ ಖ್ಯಾತಿಯ ಮಂಜು ಪಾವಗಡ.. ಫೋಟೋಸ್​ ವೈರಲ್..!

ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಮಂಜು ಪಾವಗಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರು ಮೂಲದ ನಂದಿನಿ ಜೊತೆ ಮಂಜು ಪಾವಗಡ ಸಪ್ತಪದಿ ತುಳಿದಿದ್ದಾರೆ. ಬಿಗ್​ಬಾಸ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ಅವರು ಇತ್ತೀಚೆಗೆ ಗುರು ಹಿರಿಯರ ಸಮ್ಮುಖದಲ್ಲಿ ನಂದಿನಿ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಇದೀಗ ಪಾವಗಡದಲ್ಲಿ ಮಂಜು ಮತ್ತು ನಂದಿನಿ ಅವರ ಆರತಕ್ಷತೆ ಮತ್ತು ಮದುವೆ ಸಮಾರಂಭ ಬಹಳ ಅದ್ದೂರಿಯಾಗಿ ನಡೆದಿದೆ. ಮಂಜು ಪಾವಗಡ ಮದುವೆ ಕ್ಷಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್ ಆಗುತ್ತಿದೆ. ಅಭಿಮಾನಿಗಳು, ಗಣ್ಯರು ನವ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಮಂಜು ಅವರ ಕೈಹಿಡಿದ ಹುಡುಗಿ ನಂದಿನಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾರೆ.

ಆರತಕ್ಷತೆಯಲ್ಲಿ ಕಪ್ಪು ಬಣ್ಣದ ಡಿಸೈನ್​ ಸೂಟ್‌ನಲ್ಲಿ ಮಂಜು ಕಾಣಿಸಿಕೊಂಡರೆ, ಕೆಂಪು ಬಣ್ಣದ ದುಬಾರಿ ಲೆಹೆಂಗಾದಲ್ಲಿ ನಂದಿನಿ ಸೂಪರ್ ಆಗಿ ಮಿಂಚಿದ್ದಾರೆ. ಮಂಜು ಮದುವೆಯಲ್ಲಿ ಹಲವಾರು ಗಣ್ಯರು ಭಾಗಿಯಾಗಿದ್ದರು. ಅದರಲ್ಲೂ ರೀಲ್ಸ್ ರೇಶ್ಮಾ ಆಂಟಿ ಮದುವೆ ಸ್ಟೇಜ್‌ ಮೇಲೂ ‘ಹಾಯ್‌ ಫ್ರೆಂಡ್ಸ್​ ಇವತ್ತು ಮಂಜು ಮದುವೆ’ ಎಂದು ಕೂಗುತ್ತಾ ಮಾಡಿರುವ ರೀಲ್ಸ್ ಸದ್ಯ ಸಖತ್ ವೈರಲ್ ಆಗುತ್ತಿದೆ.

 

ಇದನ್ನೂ ಓದಿ : ಅರಿಹಂತ್​​​​ ಜ್ಯುವೆಲ್ಲರ್ಸ್ ಮಾಲೀಕನ ಮನೆ ಲೂಟಿ ಪ್ರಕರಣ – ನೇಪಾಳಿಗಳ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ..!

Leave a Comment

DG Ad

RELATED LATEST NEWS

Top Headlines

ರೋಮ್ಯಾನ್ಸ್ ಸೀನ್​ ಶೂಟಿಂಗ್ ಮಾಡುವಾಗ ಕಂಟ್ರೋಲ್ ತಪ್ಪಿದ್ರಾ ವರುಣ್ ಧವನ್ ? – ನಟಿ ಜೊತೆಗಿನ ಹಾಟ್​ ವಿಡಿಯೋ ಲೀಕ್​!

ಮುಂಬೈ : ಬಾಲಿವುಡ್​ನಲ್ಲಿ ಯಂಗ್ ಹೀರೋ ಆಗಿ ಗುರುತಿಸಿಕೊಂಡಿರುವ ನಟ ವರುಣ್ ಧವನ್ ಸಿನಿಮಾದ ರೋಮ್ಯಾನ್ಸ್ ಸೀನ್​ ಶೂಟಿಂಗ್ ವೇಳೆ ಕಂಟ್ರೋಲ್ ತಪ್ಪಿದ್ರಾ ಎಂಬ ಚರ್ಚೆಗಳು ಶುರುವಾಗಿವೆ. ನಟ

Live Cricket

Add Your Heading Text Here