Download Our App

Follow us

Home » ಅಪರಾಧ » ಅರಣ್ಯ ಇಲಾಖೆಯಲ್ಲಿ ಲಂಚದ ರೇಟ್ ​ಕಾರ್ಡ್.. ಅಪ್ರೈಸಲ್ ಕಮಿಟಿಯಲ್ಲಿ ಲಕ್ಷ ಲಕ್ಷ ಲೂಟಿ..!

ಅರಣ್ಯ ಇಲಾಖೆಯಲ್ಲಿ ಲಂಚದ ರೇಟ್ ​ಕಾರ್ಡ್.. ಅಪ್ರೈಸಲ್ ಕಮಿಟಿಯಲ್ಲಿ ಲಕ್ಷ ಲಕ್ಷ ಲೂಟಿ..!

ಬೆಂಗಳೂರು : ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಸ್ಟೇಟ್ ಲೆವೆಲ್ ಎಕ್ಸ್​ಫರ್ಟ್​ ಅಪ್ರೈಸಲ್ ಕಮಿಟಿ ವಿರುದ್ದ ಇದೀಗ ಲಕ್ಷ ಲಕ್ಷ ಹಣ ಸುಲಿಗೆ ಮಾಡುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ. ಕಮಿಟಿಯ ಅಧ್ಯಕ್ಷ ಚಿಕ್ಕಮಗಳೂರಿನ ಮಹೇಶ್ ಎ.ಎನ್ ಹಾಗೂ ಸದಸ್ಯರು ಸೇರಿ ಲಕ್ಷ ಲಕ್ಷ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. 

ಕಮಿಟಿ ಮೆಂಬರ್ಸ್ ಒಂದೊಂದು ಶಿಫಾರಸು ಫೈಲ್​ಗೂ ಎರಡು ಲಕ್ಷ ಫಿಕ್ಸ್ ಮಾಡಿಕೊಂಡಿದ್ದು, ಬಡ ರೈತ ಜಮೀನಿನಲ್ಲಿ ಕಲ್ಲು ತೆಗಿಸೋಕೂ ಎಕರೆಗೆ ಒಂದು ಲಕ್ಷ ವಸೂಲಿ ಮಾಡುತ್ತಿದ್ದಾರೆ. ಮಹೇಶ್ ಎಎನ್ ಯಾವುದೇ ಅರ್ಹತೆ ಇಲ್ಲದೆ ಇನ್ಶೂರೆನ್ಸ್ ಮೇಲೆ ಕಮಿಟಿಯ ಚೇರ್ಮನ್ ಆಗಿದ್ದು, ಚೇರ್ಮನ್ ಆಗಿ ಆರೇ ತಿಂಗಳಲ್ಲಿ ಚಿಕ್ಕಮಗಳೂರಿನಲ್ಲಿ ಎರಡುವರೆ ಕೋಟಿಯ ಮನೆಯನ್ನ ಕಟ್ಟಿಸಿದ್ದಾರೆ.

ಮಹೇಶ್ ಎಎನ್
ಮಹೇಶ್ ಎಎನ್

ಮಹೇಶ್ ಪ್ರತಿ ಫೈಲ್​ಗೆ ಮಿನಿಮಮ್ 2 ಲಕ್ಷದಿಂದ ವಸೂಲಿ ರೇಟ್ ಫಿಕ್ಸ್​ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೊಸಪೇಟೆಯ ರವಿಕುಮಾರ್ ಯಾದವ್, ಉಡುಪಿಯ ಶಿಕ್ಷಕ ಬಾಲಕೃಷ್ಣ ಮುದೋಡಿ ಹಾಗೂ ಡಾಕ್ಟರ್ ಸಂಗಮೇಶ್ ಜೊತೆ ಸೇರಿಕೊಂಡು ಮಹೇಶ್ ಡೀಲ್ ನಡೆಸುತ್ತಿದ್ದು, ಸಂಕದಕಟ್ಟೆಯ ಆಸ್ಪತ್ರೆಯನ್ನೇ ಇವರು ಡೀಲ್ ಅಡ್ಡ ಮಾಡಿಕೊಂಡಿದ್ದಾರೆ. ಇನ್ನು ನಾಗರಾಜ್ ಕೆಎಚ್, ಸಿದ್ದೀಕ್ ಅಹಮದ್, ಶಿವಪ್ಪ ನಾಯಕ್ ಎಲ್ಲರೂ ಡೀಲ್ ಮಾಸ್ಟರ್ಸ್​ಗಳಾಗಿದ್ದಾರೆ. ಅದರಂತೆ SLEIAA (ಸ್ಟೇಟ್​ ಲೆವೆಲ್​​​​​​​ ಎನ್​ವಿರಾನ್ಮೆಂಟ್​ ಇಂಪ್ಯಾಕ್ಟ್​ ಅಸೆಸ್​ಮೆಂಟ್​ ಅಥಾರಿಟಿ) ಚೇರ್ಮನ್ ಆಗಿರುವ​​ ಗುರುಪ್ರಸಾದ್ ವಿರುದ್ದವೂ ಹಣ ಸುಲಿಗೆಯ ಗಂಭೀರ ಆರೋಪ ಕೇಳಿಬಂದಿದೆ.

ಗುರುಪ್ರಸಾದ್ ಬಿ
ಗುರುಪ್ರಸಾದ್ ಬಿ

ಮೈನಿಂಗ್ ಕಾಲೇಜು ಸೇರಿ ಅರಣ್ಯದ ಕೆಲಸಗಳಿಗೆ ಇವರ ಶಿಫಾರಸ್ಸು ಬೇಕೇ ಬೇಕು. ಹಾಗಾಗಿ ಇದನ್ನೇ ಬಂಡವಾಳ ಮಾಡ್ಕೊಂಡು ಮಹೇಶ್ ಗ್ಯಾಂಗ್ ಲಕ್ಷ ಲಕ್ಷ ಹಣ ಸುಲಿಗೆ ಮಾಡುತ್ತಿದೆ. ಇನ್ನು ಯಾವುದೇ ಅರ್ಹತೆ ಇಲ್ಲದೆ ನಿಯಮಗಳನ್ನು ಗಾಳಿಗೆ ತೂರಿ ಈ ಗ್ಯಾಂಗ್ ಸ್ಟೇಟ್ ಲೆವೆಲ್ ಎಕ್ಸ್​ಫರ್ಟ್​ ಅಪ್ರೈಸಲ್ ಸಮಿತಿಯ ಸದಸ್ಯರಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಈ ಮೂಲಕ ಸುಲಿಗೆಕೋರರ ದಂಧೆಯ ಮನೆ ಆಯ್ತಾ ಅರಣ್ಯ ಇಲಾಖೆ? ರೇಟ್ ಕಾರ್ಡ್​ ಇಟ್ಟುಕೊಂಡು ಸುಲಿಗೆಗೆ ಇಳಿತಾ ಎಕ್ಸ್​ಫರ್ಟ್​ ಅಪ್ರೈಸಲ್ ಸಮಿತಿ? ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಸಾರ್ವಜನಿಕರಿಂದ ಬಾರೀ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ : ನನ್ನ ಸರ್ಕಾರ ಕಿತ್ತಾಕ್ಬೇಕು ಅಂತಾ 50 MLAಗಳಿಗೆ ಬಿಜೆಪಿ ತಲಾ 50 ಕೋಟಿ ರೂ. ಆಫರ್ – ಸಿಎಂ ಸಿದ್ದು ಬಿಗ್​ ಬಾಂಬ್..!​​​

Leave a Comment

DG Ad

RELATED LATEST NEWS

Top Headlines

ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಇನ್ಸ್​ಪೆಕ್ಟರ್​ ಅಯ್ಯಣ್ಣ ರೆಡ್ಡಿ ಅರೆಸ್ಟ್..!

ಬೆಂಗಳೂರು : ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಇನ್ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿ ಅವರನ್ನು ಅರೆಸ್ಟ್ ಮಾಡಲಾಗಿದೆ. ಶಾಸಕ ಮುನಿರತ್ನ ಮಾಡಿರೋ ಹನಿಟ್ರ್ಯಾಪ್​​ಗೆ ಇನ್ಸ್ಪೆಕ್ಟರ್

Live Cricket

Add Your Heading Text Here