ನವದೆಹಲಿ : ಮಹತ್ವದ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ. ಬುಲ್ಡೋಜರ್ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಆರೋಪಿಗಳ ಮನೆಗಳನ್ನು ನೆಲಸಮ ಮಾಡುವ ಬುಲ್ಡೋಜರ್ ಕಾರ್ಯಾಚರಣೆ ಸ್ವೀಕಾರಾರ್ಹವಲ್ಲ. ಆರೋಪಿಗಳಾಗಲಿ, ತಪ್ಪಿತಸ್ಥರಾಗಿರಲಿ ಯಾರದೇ ಮನೆಯನ್ನು ನೆಲಸಮ ಮಡುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವ ಸರ್ಕಾರದ ಉತ್ತರ ಪ್ರದೇಶದಲ್ಲಿ ಆರೋಪಿಗಳ ಹಾಗೂ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿರುವವವರ ಮನೆಗಳನ್ನು ಬುಲ್ಡೋಜರ್ ಕಾರ್ಯಾಚರಣೆ ಮೂಲಕ ನೆಲಸಮ ಮಾಡಲಗುತ್ತಿತ್ತು.
ಈ ಕ್ರಮವನ್ನು ಉತ್ತರ ಪ್ರದೇಶದ ಬಳಿಕ ಬಿಜೆಪಿ ಆಡಳಿತದ ಇನ್ನೂ ಕೆಲ ರಾಜ್ಯಗಳಲ್ಲಿ ಜಾರಿಗೆ ಬಂದಿತ್ತು. ಈ ಬೆಳವಣಿಗೆ ತೀವ್ರ ಆಕ್ಷೇಪಕ್ಕೆ ಕಾರಣವಾಗಿತ್ತು. ಆ ಬಳಿಕ ಯೋಗಿ ಬುಲ್ಡೋಜರ್ ನೀತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದೀಗ ಸುದೀರ್ಘ ವಿಚಾರಣೆ ಬಳಿಕ ಸುಪ್ರೀಂ ಕೋರ್ಟ್ ಆರೋಪಿಗಳಾಗಲಿ, ತಪ್ಪಿತಸ್ಥರಾಗಲಿ ಯಾರದೇ ಮನೆಗಳನ್ನು ನೆಲಸಮ ಮಾಡುವಂತಿಲ್ಲ ಎಂದು ತೀರ್ಪು ನೀಡಿದೆ.
ಡೆಮಾಲಿಷನ್ ಪ್ರಕ್ರಿಯೆಗೆ ಗೈಡ್ಲೈನ್ಸ್ ಜಾರಿ ಮಾಡಿದ ಸುಪ್ರೀಂಕೋರ್ಟ್..!
- 15 ದಿನಗಳಿಗೂ ಮುನ್ನ ನೋಟಿಸ್ ನೀಡುವುದು ಕಡ್ಡಾಯ
- ಖುದ್ದಾಗಿ ವಿವರಣೆ ನೀಡಲು ಆರೋಪಿಗಳಿಗೆ ಅವಕಾಶ ನೀಡ್ಬೇಕು
- ಮನೆಯ ಒಡೆಯರ ಬಳಿ ವಿವರಣೆ ಪಡೆಯಬೇಕು
- ಡಿಜಿಟಲ್ ಮತ್ತು ಇ ಮೇಲ್ ಮೂಲಕ ಮಾಹಿತಿ ನೀಡ್ಬೇಕು
- ಎಲ್ಲಾ ಪ್ರಕ್ರಿಯೆಗಳನ್ನು ವಿಡಿಯೋ ರೆಕಾರ್ಡ್ ಮಾಡ್ಬೇಕು
- ಜಿಲ್ಲಾಧಿಕಾರಿಗಳಿಗೆ ಡೆಮಾಲಿಷನ್ ವರದಿ ನೀಡ್ಬೇಕು
ಇದನ್ನೂ ಓದಿ : ಟಾಲಿವುಡ್ ವೇದಿಕೆಯಲ್ಲಿ ನಟ ಧನಂಜಯ್ರನ್ನು ಹಾಡಿ ಹೊಗಳಿದ ಮೆಗಾಸ್ಟಾರ್ ಚಿರಂಜೀವಿ..!