Download Our App

Follow us

Home » ಸಿನಿಮಾ » ಸಲ್ಮಾನ್ ಖಾನ್​ ರಕ್ಷಣೆಗೆ 70 ಜನರ ನೇಮಕ.. 4 ಲೇಯರ್​ ಭದ್ರತೆ, ಸರ್ಕಾರ ಖರ್ಚು ಮಾಡೋದೆಷ್ಟು ಗೊತ್ತಾ?

ಸಲ್ಮಾನ್ ಖಾನ್​ ರಕ್ಷಣೆಗೆ 70 ಜನರ ನೇಮಕ.. 4 ಲೇಯರ್​ ಭದ್ರತೆ, ಸರ್ಕಾರ ಖರ್ಚು ಮಾಡೋದೆಷ್ಟು ಗೊತ್ತಾ?

ಹೈದರಾಬಾದ್‌ : ಬಾಲಿವುಡ್ ಸೂಪರ್‌ಸ್ಟಾರ್, ಭಾಯಿಜಾನ್ ಸಲ್ಮಾನ್ ಖಾನ್ ಮುಂಬರುವ ಆಕ್ಷನ್ ಡ್ರಾಮಾ ಸಿನಿಮಾ ‘ಸಿಕಂದರ್‌’ನ ಸಿನಿಮಾದ ಚಿತ್ರೀಕರಣವನ್ನು ಹೆಚ್ಚಿನ ಭದ್ರತಾ ಕ್ರಮಗಳ ಮಧ್ಯೆ ಶುರು ಮಾಡಿಕೊಂಡಿದ್ದಾರೆ. ಜೈಲಿನಲ್ಲಿರುವ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಬೆದರಿಕೆಗೆ ಗುರಿಯಾಗಿರುವ ನಟ ಸಲ್ಮಾನ್ ಖಾನ್ ಅವರು, ಸದ್ಯ ಒಂದು ತಿಂಗಳ ಅವಧಿಯ ಶೂಟಿಂಗ್ ಶೆಡ್ಯೂಲ್​ಗಾಗಿ ಹೈದರಾಬಾದ್‌ನಲ್ಲಿದ್ದಾರೆ.

‘ಸಿಕಂದರ್‌’ ಚಿತ್ರದ ಶೂಟಿಂಗ್​ಗಾಗಿ 2 ಸೆಟ್​ ಹಾಕಲಾಗಿದ್ದು, ಜೀವ ಬೆದರಿಕೆ ಹಿನ್ನೆಲೆಯಲ್ಲಿ ನಟ ಸಲ್ಮಾನ್​ ಖಾನ್​ ರಕ್ಷಣೆಗೆ 70 ಮಂದಿಯನ್ನು ನೇಮಕ ಮಾಡಲಾಗಿದೆ. ನಾಲ್ಕು ಲೇಯರ್​ಗಳ ಭದ್ರತೆ ನೀಡಲಾಗಿದೆ. ಚಿತ್ರದ ಶೂಟಿಂಗ್ ಹೋಟೆಲ್ ಒಂದರಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ, ಭದ್ರತಾ ಸಿಬ್ಬಂದಿಗಳು ಹೋಟೆಲ್​​ನ್ನು ಸುಪರ್ದಿಗೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಈಗಾಗಲೇ ಸರ್ಕಾರದ ವಹಿತಿಯಿಂದ ಸಲ್ಮಾನ್ ಖಾನ್​ಗೆ ವೈ ಪ್ಲಸ್ ಭದ್ರತೆ ನೀಡಲಾಗಿದೆ. ಅಂದರೆ ಸುಮಾರು 25 ಭದ್ರತಾ ಸಿಬ್ಬಂದಿ ಇಲ್ಲಿಯವರೆಗೆ ಅವರ ರಕ್ಷಣೆಗೆ ನಿಂತಿದ್ದರು. ಇದೀಗ ಆ ಸಂಖ್ಯೆಯನ್ನು 70ಕ್ಕೆ ಏರಿಸಲಾಗಿದೆ. ಸರ್ಕಾರದ ವತಿಯಿಂದ ಕೊಟ್ಟಿರುವ ರಕ್ಷಣೆಯಲ್ಲಿ 2 ರಿಂದ 4 ಎನ್‌ಎಸ್‌ಜಿ ಕಮಾಂಡೋಗಳು ಮತ್ತು ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ. ಅವರು ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಈ ತಂಡವು ಬುಲೆಟ್ ಪ್ರೂಫ್ ಸೇರಿದಂತೆ ಎರಡರಿಂದ ಮೂರು ವಾಹನಗಳನ್ನು ಬಳಸುತ್ತದೆ. ಈ ಭದ್ರತೆಯ ವೆಚ್ಚ ಪ್ರತಿ ತಿಂಗಳು ಸುಮಾರು 12 ಲಕ್ಷ ರೂಪಾಯಿಗಳನ್ನು ಸರ್ಕಾರ ಖರ್ಚು ಮಾಡುತ್ತಿದೆ.

ಇದನ್ನೂ ಓದಿ : ಮೆಟ್ಟಿಲಿನಿಂದ ಕೆಳಕ್ಕೆ ಜಾರಿ ಬಿದ್ದ ನಟ ವಿಜಯ್ ದೇವರಕೊಂಡ.. ವಿಡಿಯೋ ವೈರಲ್..!

Leave a Comment

DG Ad

RELATED LATEST NEWS

Top Headlines

ನನ್ನ ಸರ್ಕಾರ ಕಿತ್ತಾಕ್ಬೇಕು ಅಂತಾ 50 MLAಗಳಿಗೆ ಬಿಜೆಪಿ ತಲಾ 50 ಕೋಟಿ ರೂ. ಆಫರ್ – ಸಿಎಂ ಸಿದ್ದು ಬಿಗ್​ ಬಾಂಬ್..!​​​

ಮೈಸೂರು : ಕಾಂಗ್ರೆಸ್‌ನ 50 MLAಗಳಿಗೆ ತಲಾ 50 ಕೋಟಿ ರೂ. ಆಮಿಷವೊಡ್ಡುವ ಮೂಲಕ ಪ್ರತಿಪಕ್ಷ ಬಿಜೆಪಿಯು ಹೇಗಾದ್ರೂ ಮಾಡಿ ನನ್ನ ಸರ್ಕಾರವನ್ನು ಕಿತ್ತಾಕ್ಬೇಕು ಅಂತಾ ಯತ್ನಿಸಿತ್ತು.

Live Cricket

Add Your Heading Text Here