ಕಿರುತೆರೆಯ ಹೆಸರಾಂತ ಕಲಾವಿದ ದಂಪತಿ ವಿಕ್ರಂ ಸೂರಿ ಮತ್ತು ನಮಿತಾ ರಾವ್ ಅವರು ಇತ್ತೀಚಿಗಷ್ಟೇ ‘ಅಕ್ಕ ಸಮೇಳನ’ ಮುಗಿಸಿ ಬಂದಿದ್ದಾರೆ. ಇದೀಗ ವಿಕ್ರಮ್ ಸೂರಿ ಹಾಗೂ ನಮಿತ ರಾವ್ ಅವರು ಅಮೇರಿಕಾದಲ್ಲಿ ನೃತ್ಯ ಕಾರ್ಯಕ್ರಮ ಪ್ರಸ್ತುತ ಪಡಿಸಲಿದ್ದಾರೆ.
ಅಮೇರಿಕಾ ಕನ್ನಡಿಗರೊಂದಿಗೆ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಆಚರಣೆ ಪ್ರಯುಕ್ತ “ಕರೋಲಿನ ಕನ್ನಡ ಬಳಗ” Charlotte , “ಸಂಪಿಗೆ ಟ್ರಯಂಗಲ್ ಕನ್ನಡ ಅಸೋಸಿಯೇಷನ್” raleigh, “ಸಂಗಮ Pittsburgh ಕನ್ನಡ ಕೂಟ” ಇವರಿಗಾಗಿ ನೃತ್ಯ ರೂಪಕ ದಶಾವತಾರ, ಮೋಹಿನಿಭಸ್ಮಾಸುರ, ಪುಣ್ಯಕೋಟಿ ಮತ್ತು ಹಾಸ್ಯ ನಾಟಕ Lockout ಅಲ್ಲ knockout ಇದರ ರಚನೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ ಎಸ್ ನರಸಿಂಹ ಮೂರ್ತಿ, ಹೀಗೆ ವಿಭಿನ್ನ ಕಾರ್ಯಕ್ರಮ ನೀಡಲಿದ್ದಾರೆ.
ಸ್ಥಳೀಯ ಪ್ರತಿಭೆಗಳಿಗೆ ನಾಟಕದ ಅಭಿನಯ ಹಾಗೂ ವಿವಿಧ ನೃತ್ಯ ಪ್ರಕಾರಗಳೊಂದಿಗೆ 8 ವರ್ಷದ ಮಕ್ಕಳಿಂದ ಹಿಡಿದು 45 ವರ್ಷದ ಕನ್ನಡಿಗರು ಒಳಗೊಂಡು ರಂಗವಿನ್ಯಾಸ ಹಾಗೂ ಬೆಳಕು ಸಂಯೋಜನೆ ಮಾಡುವಲ್ಲಿಯೂ ತರಬೇತಿ ನೀಡಲಿದ್ದಾರೆ.
ಇನ್ನು ಇದೆ ನವೆಂಬರ್ 11ರಂದು ಪ್ರಯಾಣ ಬೆಳೆಸಲಿದ್ದು ಡಿಸೆಂಬರ್ ಅಂತ್ಯದವರೆವಿಗೂ ಅಮೆರಿಕಾದ ಹಲವು ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ.
ಇದನ್ನೂ ಓದಿ : ಕೊನೆಗೂ ಎರಡನೇ ಮದುವೆ ಬಗ್ಗೆ ಮೌನ ಮುರಿದ ನಟಿ ಸೋನು ಗೌಡ.. ಹೇಳಿದ್ದೇನು ಗೊತ್ತಾ?
Post Views: 244