ಬಳ್ಳಾರಿ : ರಾಜ್ಯದ ಮೂರು ಕ್ಷೇತ್ರಗಳಲ್ಲಿ ನವೆಂಬರ್ 13ರಂದು ಉಪಚುನಾವಣೆ ನಡೆಯಲಿದ್ದು, ಈಗಾಗಲೇ ಬೈ ಎಲೆಕ್ಷನ್ ಅಖಾಡಗಳು ಅಬ್ಬರದ ಪ್ರಚಾರದ ಮೂಲಕ ರಂಗೇರುತ್ತಿದೆ. ಇದರ ನಡುವೆ ರಾಜ್ಯದಲ್ಲಿ ವಕ್ಫ್ ವಿವಾದ ಭುಗಿಲೆದಿದ್ದು, ಬೈ ಎಲೆಕ್ಷನ್ ಅಖಾಡದಲ್ಲೂ ವಕ್ಫ್ ಜಟಾಪಟಿ ಶುರುವಾಗಿದೆ. ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ.
ಬೈ ಎಲೆಕ್ಷನ್ ಗೆಲ್ಲಲು ರಣತಂತ್ರ ರೂಪಿಸಿಸುತ್ತಿರುವ ಬಿಜೆಪಿ ನಾಯಕರು, ಇಂದು ಸಂಡೂರಿನಲ್ಲಿ ಹೈವೋಲ್ಟೇಜ್ ಮೀಟಿಂಗ್ ನಡೆಸಿದ್ದಾರೆ. ಮೀಟಿಂಗ್ ಬಳಿಕ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆದಿದೆ. ಈ ಜಂಟಿ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಿ ಸೋಮಣ್ಣ, ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಮಾಜಿ ಸಚಿವ ಅಶ್ವತ್ಥ್ ನಾರಾಯಣ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.
ಈ ವೇಳೆ ಬೈಎಲೆಕ್ಷನ್ನಲ್ಲಿ ಮೂರಕ್ಕೆ ಮೂರು ಕ್ಷೇತ್ರ ಗೆಲ್ಲುತ್ತೇವೆ ಎಂದ ಜೋಶಿ, ನಮ್ಮ ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ. ಗ್ಯಾರಂಟಿಗಳಿಗೆ ಜನ ಮಣೆ ಹಾಕಲ್ಲ. ಉಪಚುನಾವಣೆಯಲ್ಲಿ ಬಿಜೆಪಿ ಮೂರು ಕ್ಷೇತ್ರ ಗೆಲ್ಲುತ್ತೆ. ಜಾರ್ಖಂಡ್, ಮಹಾರಾಷ್ಟ್ರ ವಿಜಯ ಸಾಧಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ವಿಶ್ವಾಸದ ಮಾತನಾಡಿದ್ದಾರೆ.
ಇದೇ ಸಂದಭರ್ದಲ್ಲಿ ವಕ್ಫ್ ಬೋರ್ಡ್ ವಿವಾದದ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ವಿಜಯಪುರದ ಚಾಲುಕ್ಯರು ಕಟ್ಟಿದ ದೇವಸ್ಥಾನ ಕೂಡ ಬಿಡಲಿಲ್ಲ. 1500 ವರ್ಷಗಳ ಹಿಂದಿನ ದೇವಾಲಯ ವಕ್ಪ್ ಆಸ್ತಿ ಅಂತೆ. ಕಾಗಿನೆಲೆ ಮಠವನ್ನೂ ವಕ್ಪ್ ಆಸ್ತಿ ಮಾಡಲು ಹೊರಟಿದ್ದಾರೆ. ಸಿನಿಯರ್ ಆಫೀಸರ್ ಒಬ್ರು ಕಾಲಂ ನಂಬರ್ 11 ವಿಚಾರ ಮಾಡ್ತಾರೆ ಎಂದಿದ್ದಾರೆ.
ಇನ್ನು ವಕ್ಪ್ ಅನ್ನೋದು ಇದೊಂದು ದೊಡ್ಡ ಷಡ್ಯಂತ್ರ ಎಂದ ಪ್ರಲ್ಹಾದ್ ಜೋಶಿ, ಕಾಂಗ್ರೆಸ್ನವರು ತುಷ್ಠಿಕರಣ ರಾಜಕಾರಣ ಬಿಡ್ಬೇಕು. ಹಿಂದೂಗಳನ್ನ ಟಾರ್ಗೆಟ್ ಮಾಡೋದೆ ಕಾಂಗ್ರೆಸ್ ಕೆಲಸ ಮಾಡಬೇಕು ಎಂದು ಸಂಡೂರಿನಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಇದನ್ನೂ ಓದಿ : ಚಿತ್ರದುರ್ಗದಲ್ಲಿ ದಾರುಣ ಘಟನೆ.. ಊಟ ಕೇಳಿದ ಮಗುವನ್ನೇ ಗುದ್ದಿ ಕೊಂದ ಪಾಪಿ ತಂದೆ..!