Download Our App

Follow us

Home » ಮೆಟ್ರೋ » ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕುಡುಕ ಡಾಕ್ಟರ್, ವಾರ್ಡ್​ ಬಾಯ್ ಅವಾಂತರ – ಆಗಿದ್ದೇನು?

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕುಡುಕ ಡಾಕ್ಟರ್, ವಾರ್ಡ್​ ಬಾಯ್ ಅವಾಂತರ – ಆಗಿದ್ದೇನು?

ಬೆಂಗಳೂರು : ಕುಡಿದ ಅಮಲಿನಲ್ಲಿ ವೈದ್ಯರೊಬ್ಬರು ಇಂಜೆಕ್ಷನ್​ ಕೊಟ್ಟು ಯುವತಿ ಜೀವಕ್ಕೆ ಕುತ್ತು ತಂದಿದ್ದ ಘಟನೆ ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ನ.3 ರಂದು ತೀವ್ರ ಜ್ವರ ಎಂದು ಸ್ನೇಹಾ ಎಂಬ ಯುವತಿ ಆಸ್ಪತ್ರೆಗೆ ಹೋಗಿದ್ರು, ಈ ವೇಳೆ ಡಾಕ್ಟರ್ ಪ್ರದೀಪ್, ವಾರ್ಡ್ ಬಾಯ್​ ಮಹೇಂದ್ರ ಎಣ್ಣೆ ಮತ್ತಿನಲ್ಲಿದ್ದರು. ಡ್ಯೂಟಿ ಇಲ್ಲದಿದ್ರು ಡಾಕ್ಟರ್, ವಾರ್ಡ್ ಬಾಯ್​ ರೋಗಿಯನ್ನ ಅಟೆಂಡ್ ಮಾಡಿದ್ದಾರೆ.

ಮೊದಲಿಗೆ ವಾರ್ಡ್ ಬಾಯ್ ಮಹೇಂದ್ರ ಸ್ನೇಹಾ ಕೈ ಹಿಡಿದು ಸಿರಿಂಜ್ ಚುಚ್ಚಿದ್ದ, ಬಳಿಕ ಡಾಕ್ಟರ್ ಪ್ರದೀಪ್ ಕರೆದು ಟ್ರಿಟ್ಮೆಂಟ್ ಕೊಡುವಂತೆ ಕೇಳಿದ್ದ. ಡಾ.ಪ್ರದೀಪ್ ಇಂಜೆಕ್ಷನ್ ಹಿಡಿದು ಸ್ನೇಹಾ ಕೈಗೆ ಮತ್ತೆ ಚುಚ್ಚಿದ್ದಾರೆ. 4-5 ಬಾರಿ ಇಂಜೆಕ್ಷನ್ ಚುಚ್ಚಿದ್ರೂ ಸರಿಯಾಗಿ ಇಂಜೆಕ್ಷನ್​ ಹಾಕಿಲ್ಲ.

ಡ್ರಿಂಕ್ಸ್ ಮಾಡಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿರೋ ಆರೋಪ ಕೂಡ ಕೇಳಿಬಂದಿದೆ. ಸ್ನೇಹಾ ಪೋಷಕರು ಬರ್ತಿದ್ದಂತೆ ಡಾ.ಪ್ರದೀಪ್ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದಾರೆ. ನಂತರ ಸ್ನೇಹಾ ಪೋಷಕರು ವಾರ್ಡ್ ಬಾಯ್​ನ ತರಾಟೆಗೆ ತೆಗೆದುಕೊಂಡಿದ್ದು, ಘಟನೆ ಬಗ್ಗೆ ಸ್ನೇಹಾ ಕುಮಾರಸ್ವಾಮಿ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಸದ್ಯ ಪೊಲೀಸರು NCR ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ಹ್ಯಾಟ್ರಿಕ್ ಹೀರೋಗೆ ಅನಾರೋಗ್ಯ.. ದಿಢೀರ್ ಆಗಿದ್ದೇನು? ಟ್ರೀಟ್ಮೆಂಟ್​​ಗಾಗಿ 1 ತಿಂಗಳು ಅಮೆರಿಕಾಗೆ ಹೋಗ್ಬೇಕು ಎಂದ ಶಿವಣ್ಣ..!

Leave a Comment

DG Ad

RELATED LATEST NEWS

Top Headlines

ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಇನ್ಸ್​ಪೆಕ್ಟರ್​ ಅಯ್ಯಣ್ಣ ರೆಡ್ಡಿ ಅರೆಸ್ಟ್..!

ಬೆಂಗಳೂರು : ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಇನ್ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿ ಅವರನ್ನು ಅರೆಸ್ಟ್ ಮಾಡಲಾಗಿದೆ. ಶಾಸಕ ಮುನಿರತ್ನ ಮಾಡಿರೋ ಹನಿಟ್ರ್ಯಾಪ್​​ಗೆ ಇನ್ಸ್ಪೆಕ್ಟರ್

Live Cricket

Add Your Heading Text Here