Download Our App

Follow us

Home » ಸಿನಿಮಾ » ನಟ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅರೆಸ್ಟ್​​..!

ನಟ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅರೆಸ್ಟ್​​..!

ಹಾವೇರಿ : ಬಾಲಿವುಡ್ ನಟ ಸಲ್ಮಾನ್ ಖಾನ್​ಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಸಿಕ್ಕಿಬಿದ್ದಿದ್ದಾನೆ. ರಾಜಸ್ತಾನ ಮೂಲದ ಬಿಕಾರಾಮ್‌ನನ್ನು ಹಾವೇರಿಯಲ್ಲಿ ಬಂಧಿಸಲಾಗಿದೆ. ಮುಂಬೈ ಪೊಲೀಸರ ಮಾಹಿತಿ ಮೇರೆಗೆ ಹಾವೇರಿ ಪೊಲೀಸರು ಕಾರ್ಯಚರಣೆ ನಡೆಸಿ ಬಿಕಾರಾಮ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜಸ್ತಾನ ಮೂಲದ  ಬಿಕಾರಾಮ್, ಒಂದೂವರೆ ತಿಂಗಳ ಹಿಂದೆ ಬಿಕಾರಾಮ್ ಕೂಲಿಗಾಗಿ ಹಾವೇರಿಗೆ ಬಂದಿದ್ದ. ಗ್ರಿಲ್ ಕೆಲಸ ಮಾಡಿಕೊಂಡು ಹಾವೇರಿಯ ಗೌಡರ ಓಣಿಯಲ್ಲಿ ರೂಮ್‌ವೊಂದರಲ್ಲಿ ಕೂಲಿಕಾರರೊಂದಿಗೆ ವಾಸವಾಗಿದ್ದ. ಇದು ಮುಂಬೈ ಪೊಲೀಸರಿಗೆ ಗೊತ್ತಾಗಿದ್ದು, ಕೂಡಲೇ ಅವರು ಹಾವೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರ ಆಧಾರದ ಮೇಲೆ ಜಿಲ್ಲಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ : ಸೋಮವಾರ (ನ.4) ತಡರಾತ್ರಿ ವರ್ಲಿ ಪ್ರದೇಶದಲ್ಲಿರುವ ಮುಂಬೈ ಸಂಚಾರ ಪೊಲೀಸ್ ನಿಯಂತ್ರಣ ಕೊಠಡಿಗೆ ಬೆದರಿಕೆ ಸಂದೇಶ ಬಂದಿದ್ದು, ‘ಕೃಷ್ಣಮೃಗ ಹತ್ಯೆಗೈದ ಘಟನೆಗೆ ಸಂಬಂಧಿಸಿ ಸಲ್ಮಾನ್ ಖಾನ್ ನಮ್ಮ(ಬಿಷ್ಣೋಯ್ ಸಮುದಾಯದ) ದೇವಸ್ಥಾನಕ್ಕೆ ಬಂದು ಕ್ಷಮೆಯಾಚಿಸಬೇಕು. ಅಥವಾ 5 ಕೋಟಿ ರೂ. ನೀಡಬೇಕು. ತಪ್ಪಿದರೆ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲಾಗುವುದು. ನಮ್ಮ ಗ್ಯಾಂಗ್ ಇನ್ನೂ ಸಕ್ರೀಯವಾಗಿದೆ’ ಎಂದು ಬೆದರಿಕೆ ಸಂದೇಶದಲ್ಲಿ ಉಲ್ಲೇಖವಾಗಿತ್ತು. ಅಲ್ಲದೇ ಬೆದರಿಕೆಯೊಡ್ಡಿದ ವ್ಯಕ್ತಿ ತಾನು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಸಹೋದರ ಎಂದು ಹೇಳಿಕೊಂಡಿದ್ದ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮುಂಬೈ ಪೊಲೀಸರು, ಬೆದರಿಕೆ ಒಡ್ಡಿದವರ ಪತ್ತೆಗೆ ಬಲೆ ಬೀಸಿದ್ದರು.

ಇದನ್ನೂ ಓದಿ : ವೇದಿಕೆಯಲ್ಲಿ ಸೊಳ್ಳೆಗಳನ್ನು ನುಂಗಿದ ಸೂಪರ್ ಹಿಟ್ ಗಾಯಕಿ ನೀತಿ ಮೋಹನ್..!

Leave a Comment

DG Ad

RELATED LATEST NEWS

Top Headlines

ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಇನ್ಸ್​ಪೆಕ್ಟರ್​ ಅಯ್ಯಣ್ಣ ರೆಡ್ಡಿ ಅರೆಸ್ಟ್..!

ಬೆಂಗಳೂರು : ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಇನ್ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿ ಅವರನ್ನು ಅರೆಸ್ಟ್ ಮಾಡಲಾಗಿದೆ. ಶಾಸಕ ಮುನಿರತ್ನ ಮಾಡಿರೋ ಹನಿಟ್ರ್ಯಾಪ್​​ಗೆ ಇನ್ಸ್ಪೆಕ್ಟರ್

Live Cricket

Add Your Heading Text Here