ದೇವನಹಳ್ಳಿ : ಮನೆಯ ಬೀಗ ಮುರಿದು ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಖದೀಮರನ್ನು ವಿಶ್ವನಾಥಪುರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸೈಯದ್ ಅಸ್ಲಾಂ (42), ಪ್ರಸಾದ್ (41) ಬಂಧಿತ ಆರೋಪಿಗಳು.
ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಕಳ್ಳರು, ಆಗಸ್ಟ್ ತಿಂಗಳಲ್ಲಿ ದೇವನಹಳ್ಳಿ ತಾಲ್ಲೂಕಿನ ಕೋಡಗುರ್ಕಿಯ ಮಂಜುನಾಥ್ ಎಂಬುವವರ ಮನೆಯ ಬೀಗ ಮೀಟಿ ಸುಮಾರು 400 ಗ್ರಾಂ ಚಿನ್ನ ದೋಚಿ ಪರಾರಿಯಾಗಿದ್ದರು. ಸುಮಾರು 15 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನವನ್ನ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ವಿಶ್ವನಾಥಪುರ ಪೊಲೀಸರು ಖದೀಮರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಚಿನ್ನವನ್ನು ವಶಕ್ಕೆ ಪಡೆದ ಇನ್ಸ್ ಪೆಕ್ಟರ್ ಶ್ರೀನಿವಾಸ್, ದೂರು ದಾರರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ : ಸೆನ್ಸಾರ್ ಮುಂದೆ ‘ಫಾರೆಸ್ಟ್’ – ಬಹುನಿರೀಕ್ಷಿತ ಈ ಚಿತ್ರ ಸದ್ಯದಲ್ಲೇ ತೆರೆಗೆ..!
Post Views: 282