Download Our App

Follow us

Home » ಸಿನಿಮಾ » ನಟ ದರ್ಶನ್ ಮೆಡಿಕಲ್ ರಿಪೋರ್ಟ್ ಹೈಕೋರ್ಟ್​ಗೆ ಸಲ್ಲಿಕೆ..!

ನಟ ದರ್ಶನ್ ಮೆಡಿಕಲ್ ರಿಪೋರ್ಟ್ ಹೈಕೋರ್ಟ್​ಗೆ ಸಲ್ಲಿಕೆ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ಮೆಡಿಕಲ್ ಗ್ರೌಂಡ್ಸ್​ನಲ್ಲಿ ಮಧ್ಯಂತರ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ನಟನಿಗೆ ಕೆಂಗೇರಿ ಬಿಜಿಎಸ್  ಆಸ್ಪತ್ರೆಯಲ್ಲಿ 6 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ದರ್ಶನ್ ಮೆಡಿಕಲ್ ರಿಪೋರ್ಟ್ ಹೈಕೋರ್ಟ್​ಗೆ ಸಲ್ಲಿಕೆಯಾಗಿದೆ.

ಅಕ್ಟೋಬರ್ 30ರಂದು ಮಧ್ಯಂತರ ಜಾಮೀನು ಆದೇಶ ನೀಡಿದ್ದ ನ್ಯಾಯಾಲಯ  ಒಂದು ವಾರದಲ್ಲಿ ಮೆಡಿಕಲ್ ರಿಪೋರ್ಟ್ ಸಲ್ಲಿಕೆಗೆ ಸೂಚಿಸಿತ್ತು. ದರ್ಶನ್ ಜಾಮೀನು ಪಡೆದು ಇಂದಿಗೆ ಒಂದು ವಾರವಾದ ಹಿನ್ನೆಲೆಯಲ್ಲಿ ಮೆಡಿಕಲ್ ರಿಪೋರ್ಟ್​ಗಳನ್ನು ನಟ ದರ್ಶನ್ ಪರ ವಕೀಲರು ಹೈಕೋರ್ಟ್ ಫೈಲಿಂಗ್ ಕೌಂಟರ್​ಗೆ ದಾಖಲೆ ಸಲ್ಲಿಕೆ ಮಾಡಿದ್ದಾರೆ. ಇಂದು ಅಥವಾ ನಾಳೆ ದಾಖಲೆಗಳು ನ್ಯಾಯಾಧೀಶರಿಗೆ ತಲುಪಲಿದೆ.

ಇನ್ನು ಈಗಾಗಲೇ ನಟ ದರ್ಶನ್​ಗೆ ವೈದ್ಯರು ಎಕ್ಸ್​-ರೇ, MRI ಸ್ಕ್ಯಾನಿಂಗ್​, ಸಿಟಿ ಸ್ಕ್ಯಾನ್​ ಮಾಡಿದ್ದಾರೆ. ಟೆಸ್ಟಿಂಗ್ ವೇಳೆ ನಟ ದರ್ಶನ್​ಗೆ ಬೆನ್ನು ನೋವು ಸಮಸ್ಯೆ ಪತ್ತೆಯಾಗಿದೆ. ಹೀಗಾಗಿ ಸರ್ಜರಿ ಮಾಡೋದು ಸೂಕ್ತ ಎಂದು ವೈದ್ಯರು ತಿಳಿಸಿದ್ದಾರೆ. ಒಂದೆರಡು ದಿನಗಳಲ್ಲಿ ನಟ ದರ್ಶನ್​ಗೆ ಸರ್ಜರಿ ಮಾಡುವ  ಸಾಧ್ಯತೆಯಿದೆ.

ಇದನ್ನೂ ಓದಿ : 500 ಕೋಟಿ ಅಬಕಾರಿ ಹಗರಣದಲ್ಲಿ ಸಚಿವರ ತಲೆದಂಡ ಆಗಲಿ – ಆರ್​.ಅಶೋಕ್​ ಆಗ್ರಹ..!

Leave a Comment

DG Ad

RELATED LATEST NEWS

Top Headlines

ಇಂದಿನಿಂದ ಬೆಳ್ಳಿತೆರೆ ಮೇಲೆ ‘ಭೈರತಿ ರಣಗಲ್’ ಅಬ್ಬರ.. ಶಿವಣ್ಣನ ಖಡಕ್‌ ಅವತಾರ ಕಂಡು ಹುಚ್ಚೆದ್ದು ಕುಣಿದ ಫ್ಯಾನ್ಸ್‌..!

ಹ್ಯಾಟ್ರಿಕ್​ ಹೀರೋ ಶಿವರಾಜ್‌ಕುಮಾರ್‌‌‌ ನಟನೆಯ ‘ಭೈರತಿ ರಣಗಲ್’ ಸಿನಿಮಾ ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್‌‌ ಆಗಿದೆ. ಶಿವಣ್ಣನ ಮಾಸ್‌‌ ಲುಕ್‌ ಕಂಡು ಫ್ಯಾನ್ಸ್ ಚಿತ್ರ ಮಂದಿರದಲ್ಲಿ​ ಹುಚ್ಚೆದ್ದು

Live Cricket

Add Your Heading Text Here