Download Our App

Follow us

Home » ರಾಜಕೀಯ » ಬೆದರಿಕೆ ಆರೋಪ – ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ FIR ದಾಖಲು..!

ಬೆದರಿಕೆ ಆರೋಪ – ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ FIR ದಾಖಲು..!

ಬೆಂಗಳೂರು : ಉಚುನಾವಣೆಯ ಅಬ್ಬರದ ಪ್ರಚಾರದಲ್ಲಿ ತೊಡಗಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಎಡಿಜಿಪಿ ಚಂದ್ರಶೇಖರ್ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಸಂಜಯ್ ನಗರ ಠಾಣೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್​ ಮುಖಂಡ ಸುರೇಶ್ ಬಾಬು ವಿರುದ್ಧ ಎಫ್ಐಆರ್ ದಾಖಲಾಗಿದೆ.

IPS ಅಧಿಕಾರಿ ಚಂದ್ರಶೇಖರ್​ ಅವರಿಗೆ ಸುದ್ದಿಗೋಷ್ಟಿಯಲ್ಲಿ ಬೆದರಿಕೆ ಹಾಕಿರೋ ಆರೋಪ ಸಂಬಂಧ ಸಂಜಯ್​ ನಗರ ಪೊಲೀಸ್​ ಠಾಣೆಯಲ್ಲಿ FIR ದಾಖಲಿಸಿದ್ದಾರೆ. ADGP ಚಂದ್ರಶೇಖರ್​ ಕೊಟ್ಟ ದೂರಿನ ಹಿನ್ನೆಲೆ FIR ದಾಖಲಾಗಿದ್ದು, ಪ್ರಕರಣದಲ್ಲಿ ಹೆಚ್​.ಡಿ ಕುಮಾರಸ್ವಾಮಿ A-1 ಆರೋಪಿ ಹಾಗೂ ನಿಖಿಲ್​ ಕುಮಾರಸ್ವಾಮಿ A-2 ಆರೋಪಿ, ಸುರೇಶ್ ಬಾಬು A-3 ಆರೋಪಿ ಎಂದು ಉಲ್ಲೇಖಿಸಲಾಗಿದೆ. ಲಂಚ ಪಡೆದಿರೋದಾಗಿ ಆರೋಪ ಮಾಡಿದ್ದಕ್ಕೆ ಕೇಸ್​ ದಾಖಲಾಗಿದ್ದು, ಬೇರೆ ರಾಜ್ಯಕ್ಕೆ ಕಳಿಸೋದಾಗಿ ಹೆಚ್​ಡಿ ಕುಮಾರಸ್ವಾಮಿ ಮೌಖಿಕ ಬೆದರಿಕೆ ಹಾಕಿದ್ದರು.

ಆರೋಪಿಗಳು ದುರುದ್ದೇಶ ಪೂರಿತವಾಗಿ ಆರೋಪ ಮಾಡಿದ್ದಾರೆ. ಮತ್ತು ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಚಂದ್ರಶೇಖರ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದು, ಈ ಹಿನ್ನೆಲೆಯಲ್ಲಿ ಹೆಚ್​ಡಿ ಕುಮಾರಸ್ವಾಮಿ ಹಾಗೂ ನಿಖಿಲ್, ಸುರೇಶ್ ಬಾಬು ವಿರುದ್ಧ 42ನೇ ಎಸಿಎಂಎಂ ನ್ಯಾಯಾಲಯದ ಆದೇಶದಂತೆ ಎಫ್​ಐಆರ್​ ದಾಖಲಾಗಿದೆ.

ಇದನ್ನೂ ಓದಿ : ಬಿಜಿಎಸ್ ವೈದ್ಯರ ಕೈಯಲ್ಲಿದೆ ನಟ ದರ್ಶನ್ ಬೇಲ್ ಭವಿಷ್ಯ..!

Leave a Comment

DG Ad

RELATED LATEST NEWS

Top Headlines

ರೋಮ್ಯಾನ್ಸ್ ಸೀನ್​ ಶೂಟಿಂಗ್ ಮಾಡುವಾಗ ಕಂಟ್ರೋಲ್ ತಪ್ಪಿದ್ರಾ ವರುಣ್ ಧವನ್ ? – ನಟಿ ಜೊತೆಗಿನ ಹಾಟ್​ ವಿಡಿಯೋ ಲೀಕ್​!

ಮುಂಬೈ : ಬಾಲಿವುಡ್​ನಲ್ಲಿ ಯಂಗ್ ಹೀರೋ ಆಗಿ ಗುರುತಿಸಿಕೊಂಡಿರುವ ನಟ ವರುಣ್ ಧವನ್ ಸಿನಿಮಾದ ರೋಮ್ಯಾನ್ಸ್ ಸೀನ್​ ಶೂಟಿಂಗ್ ವೇಳೆ ಕಂಟ್ರೋಲ್ ತಪ್ಪಿದ್ರಾ ಎಂಬ ಚರ್ಚೆಗಳು ಶುರುವಾಗಿವೆ. ನಟ

Live Cricket

Add Your Heading Text Here