ಎದ್ದೇಳು ಮಂಜುನಾಥ’, ‘ಮಠ’ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಅವರ ಆತ್ಮಹತ್ಯೆ ಸುದ್ದಿ ಚಿತ್ರರಂಗಕ್ಕೆ ಶಾಕ್ ಕೊಟ್ಟಿದೆ. ಗುರು ಪ್ರಸಾದ್ ಸಾವಿನ ಬೆನ್ನಲ್ಲಿಯೇ ಅವರ ಸಾವಿಗೆ ಸಾಲದ ಸಮಸ್ಯೆಯೇ ಕಾರಣ ಎಂದು ಹೇಳಲಾಗ್ತಿದೆ.
ಡೈರೆಕ್ಟರ್ ಗುರುಪ್ರಸಾದ್ ಅವರು ಮೂಲತಃ ರಾಮನಗರದವರು. ನವೆಂಬರ್ 02, 1972ರಂದು ಜನಿಸಿದ್ದರು. ಮೊದಲನೇ ಪತ್ನಿಗೆ ವಿಚ್ಛೇದನ ನೀಡಿದ್ದ ಗುರುಪ್ರಸಾದ್, ಈಚೆಗಷ್ಟೇ ಎರಡನೇ ಮದುವೆಯಾಗಿದ್ದರು. ಇತ್ತೀಚೆಗೆ ಎಲ್ಲೂ ಅಷ್ಟಾಗಿ ಕಾಣಿಸಿಕೊಂಡಿರದ ಗುರುಪ್ರಸಾದ್ ಅವರು, ದಾಸನಪುರ ಬಳಿಯ ಪ್ಲಾಟ್ ಬಾಡಿಗೆಗೆ ಪಡೆದು ಮನೆಯಲ್ಲಿ ಒಂಟಿಯಾಗಿ ವಾಸ ಮಾಡ್ತಿದ್ದರು. ಆದರೆ ಬಾಡಿಗೆಗೆ ಪಡೆದಿದ್ದ ಫ್ಲ್ಯಾಟ್ನಲ್ಲಿ ಅವರು ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಗುರು ಪ್ರಸಾದ್ ಅವರು ಸಾಲದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. 2019ರಲ್ಲಿ ನಿರ್ದೇಶಕ ಗುರುಪ್ರಸಾದ್ ಪುಸ್ತಕ ಮಳಿಗೆಗೆಯಿಂದ ಖರೀದಿ ಮಾಡಿದ್ದರು ಎನ್ನಲಾಗಿದ್ದು, 75 ಪುಸ್ತಕಗಳ ಐದು ಸೆಟ್ ಖರೀದಿಸಿದ್ದ ಗುರುಪ್ರಸಾದ್ ಅವರು ರಿಯಾಯಿತಿ ಕಳೆದು ಒಂದು ಸೆಟ್ಗೆ 13 ಸಾವಿರದಂತೆ ಐದು ಸೆಟ್ ಪುಸ್ತಕಗಳಿಗೆ 65 ಸಾವಿರ ನೀಡಬೇಕಿತ್ತು. ಆದರೆ ಪುಸ್ತಕ ಹಾಗೂ ಸಿನಿಮಾ ಸಂಬಂಧಿತ ಸಿಡಿಗಳನ್ನು ಖರೀದಿಸಿ ಹಣ ನೀಡಿರಲಿಲ್ಲ ಎನ್ನಲಾಗಿತ್ತು.
ಆದರೆ ನಟ ಯಾರಲ್ಲಿ ಎಷ್ಟು ಸಾಲ ಮಾಡಿಕೊಂಡಿದ್ದರು ಎನ್ನುವ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ ಅವರಿಗೆ ಸಾಲದ ಸಮಸ್ಯೆ ಇತ್ತು ಎನ್ನಲಾಗಿದೆ. ಒಂದು ವಾರದ ಮುಂಚೆಯೇ ಗುರು ಪ್ರಸಾದ್ ಅವರು ಮೃತಪಟ್ಟಿರುವ ಶಂಕೆ ಇದೆ ಎನ್ನಲಾಗಿದೆ.
ಇದನ್ನೂ ಓದಿ : ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿ ಕಾರು ಚಾಲನೆ – ರಸ್ತೆ ದಾಟುತ್ತಿದ್ದ ಖ್ಯಾತ ಚಿತ್ರ ಕಲಾವಿದೆ ಸಾವು..!