ಬೆಂಗಳೂರು : ಕೌಟುಂಬಿಕ ಕಲಹ ಹಿನ್ನೆಲೆ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 37 ವರ್ಷದ ಗೀತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಗೀತಾ ಕಾಟನ್ ಪೇಟೆ ಠಾಣಾ ವ್ಯಾಪ್ತಿಯ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಇದು ಆತ್ಮಹತ್ಯೆಯೋ, ಕೊಲೆಯೋ ಅನ್ನೊ ಶಂಕೆ ವ್ಯಕ್ತವಾಗಿದೆ. ಪತಿ ಮುರುಳಿ ಮೋಹನ್ ವಿರುದ್ದ ಪತ್ನಿ ಕುಟುಂಬದವರು ಕೊಲೆ ಆರೋಪ ಮಾಡಿದ್ದಾರೆ.
17 ವರ್ಷಗಳ ಹಿಂದೆ ಮುರುಳಿ ಮೋಹನ್ ಎಂಬಾತನ ಜೊತೆ ಗೀತಾ ಮದುವೆಯಾಗಿತ್ತು. ಕಳೆದ ಕೆಲ ತಿಂಗಳಿನಿಂದ ಪತಿ ಜೊತೆ ಕಲಹ ನಡೆದಿತ್ತು. ಹಾಗಾಗಿ ಗೀತಾ ಕುಟುಂಬದವರು ಪತಿಯೇ ಪತ್ನಿಯನ್ನ ನೇಣು ಬಿಗಿದು ಕೊಲೆ ಮಾಡಿರುವುದಾಗಿ ಆರೋಪಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗೀತಾ ಮರಣೋತ್ತರ ಪರೀಕ್ಷೆ ನಡೆದಿದೆ.
ಇದನ್ನೂ ಓದಿ : ಉಗ್ರಂ ಮಂಜು, ಮೋಕ್ಷಿತಾಗೆ ಕಿಚ್ಚ ಸುದೀಪ್ ಖಡಕ್ ಕ್ಲಾಸ್..!
Post Views: 517