ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಸೇರಿದ್ದಾಗ ಅವರ ಆತ್ಮೀಯ ಬಳಗದಲ್ಲಿದ್ದವರೆಲ್ಲರೂ ಕೆಲವು ದಿನ ಸೈಲೆಂಟ್ ಆಗಿದ್ದರು. ಅದು ಈಗಲೂ ಮುಂದುವರಿದಿದೆ. ಆದರೆ ದರ್ಶನ್ ಈ ಅವರ ಕಷ್ಟ ಕಾಲದಲ್ಲಿ ಅವರಿಗೆ ಹೆಗಲುಕೊಟ್ಟು ನಿಂತಿದ್ದು ಒಬ್ಬರೇ ನಟ.
ದರ್ಶನ್ಗೆ ಚಿತ್ರರಂಗದಲ್ಲಿ ತಮ್ಮದೇ ಆದ ಆಪ್ತ ಬಳಗವಿದೆ. ಅವರು ಕೊಲೆ ಕೇಸ್ನಲ್ಲಿ ಜೈಲು ಸೇರಿದಾಗ ಕೆಲವರು ಜಾರಿಕೊಂಡರೆ ಮತ್ತೆ ಕೆಲವರು ಏನೇ ಆದರೂ ನಮ್ಮ ಬಾಸ್ ತಪ್ಪು ಮಾಡಿರಲ್ಲ ಎಂದು ಮಾಧ್ಯಮಗಳ ಮುಂದೆ ಸಮರ್ಥಿಸಿಕೊಂಡೇ ಬಂದಿದ್ದರು.
ಆದ್ರೆ ದರ್ಶನ್ ಜೊತೆಗಿನ ಸ್ನೇಹ ಕೇವಲ ಭೇಟಿಗೆ ಮಾತ್ರ ಸೀಮಿತವಾಗದೇ ಅವರ ಕುಟುಂಬದ ಜೊತೆಗೇ ನಿಂತು ಕಷ್ಟಕ್ಕೆ ಹೆಗಲುಕೊಟ್ಟಿದ್ದು ನಟ ಧನ್ವೀರ್ ಗೌಡ ಮಾತ್ರ. ಮೊದಲಿನಿಂದಲೂ ದರ್ಶನ್ ಅಭಿಮಾನಿ ಎಂದೇ ಗುರುತಿಸಿಕೊಂಡಿದ್ದ ಧನ್ವೀರ್ ಚಿತ್ರರಂಗಕ್ಕೆ ಕಾಲಿಡಲು ದರ್ಶನ್ ಅವರ ಸಹಾಯ ಪಡೆದಿದ್ದರು. ಅವರ ಬೆಂಬಲದಿಂದಲೇ ಇಂದು ಧನ್ವೀರ್ ಅವರು ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ.
ಆದರೆ ಇದೀಗ ಆ ಸಹಾಯಕ್ಕೆ ಧನ್ವೀರ್ ಅವರು ಹತ್ತರಷ್ಟು ವಾಪಸ್ ಮಾಡಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ಜೊತೆಗೆ ಪರಪ್ಪನ ಅಗ್ರಹಾರ, ಬಳ್ಳಾರಿ ಜೈಲಿಗೆ ಹೋಗಿ ಬರುತ್ತಿದ್ದ ಕೆಲಸದ ಜೊತೆಗೆ ಕೊನೆಯಲ್ಲಿ ಶ್ಯೂರಿಟಿ ಕೊಡಲೂ ಅವರೇ ಬಂದಿದ್ದರು. ದರ್ಶನ್ ಬಿಡುಗಡೆಯಾಗಿ ಮನೆಗೆ ಹೋಗುವಾಗ ಡ್ರೈವರ್ ಕೆಲಸವನ್ನೂ ಧನ್ವೀರ್ ಮಾಡಿದ್ದರು. ಈಗ ದರ್ಶನ್ ಆಸ್ಪತ್ರೆಗೆ ದಾಖಲಾಗುವಾಗಲೂ ಅವರ ಜೊತೆ ಧನ್ವೀರ್ ನಿಂತಿದ್ದಾರೆ. ಈ ಮೂಲಕ ಧನ್ವೀರ್ ದರ್ಶನ್ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.
ಇನ್ನು ದರ್ಶನ್ ಅವರು ಜೈಲಿಂದ ಬಿಡುಗಡೆಯಾದ ದಿನ ಧನ್ವೀರ್ ಅವರು ದರ್ಶನ್ ಅವರ ಕಾರನ್ನು ಡ್ರೈವ್ ಮಾಡಿದ್ದರು. ಬಳ್ಳಾರಿಯಿಂದ ಬೆಂಗಳೂರಿನಲ್ಲಿರುವ ವಿಜಯಲಕ್ಷ್ಮಿ ಅವರ ನಿವಾಸಕ್ಕೆ ಕೇವಲ 6 ಗಂಟೆಯಲ್ಲಿ ದರ್ಶನ್ ಅವರನ್ನ ಸೇಫ್ ಆಗಿ ಕರೆದುಕೊಂಡು ಬಂದಿದ್ದರು. ಇನ್ನು ಅದೇ ದಿನ ದರ್ಶನ್ ಅವರನ್ನ ಬೆಂಗಳೂರಿಗೆ ಕರೆತರಲು ಒಂದು ಕಾರಣವಿದೆ. ಅದು ಏನಂದ್ರೆ, ದರ್ಶನ್ ಬಿಡುಗಡೆಯಾದ ಮಾರನೇ ದಿನ ಪುತ್ರ ವಿನೀಶ್ ಹುಟ್ಟು ಹಬ್ಬವಿತ್ತು. ಹಾಗಾಗಿ ಧನ್ವೀರ್ ಬಳಿ ವಿನೀಶ್ ಅಪ್ಪನನ್ನು ರಾತ್ರಿ 12ಗಂಟೆ ಒಳಗೆ ಕರ್ಕೊಂಡು ಬನ್ನಿ ಎಂದು ಕೇಳಿಕೊಂಡಿದ್ದರಂತೆ.
ಪ್ರತಿ ವರ್ಷ ವಿನೀಶ್ ಹುಟ್ಟುಹಬ್ಬದಂದು ತಂದೆ ದರ್ಶನ್ 12ಗಂಟೆಗೆ ಮಗನಿಗೆ ವಿಶ್ ಮಾಡುತ್ತಿದ್ದರಂತೆ. ಈ ವರ್ಷನೂ ಅಪ್ಪ ಅದೇ ರೀತಿ ವಿಶ್ ಮಾಡಬೇಕು ಅನ್ನೋ ಆಸೆಯನ್ನು ವಿನೀಶ್ ಧನ್ವೀರ್ ಬಳಿ ಹೇಳಿಕೊಂಡಿದ್ದರು. ಹಾಗಾಗಿ ಅಣ್ಣನ ಮಗನ ಆಸೆಯನ್ನು ಪೂರೈಸಬೇಕೆಂದು ಖುದ್ದು ಧನ್ವೀರ್ ಅವರೇ ಕಾರನ್ನು ಡ್ರೈವ್ ಮಾಡಿ ರಾತ್ರಿ 12ಗಂಟೆಗೆ ದರ್ಶನ್ರನ್ನು ಮನೆ ತಲುಪಿಸಿದ್ದಾರೆ. ದರ್ಶನ್ ಮನೆಗೆ ಬರುತ್ತಿದ್ದಂತೆಯೇ ಮಗನನ್ನು ಅಪ್ಪಿಕೊಂಡು ಮುದ್ದಾಡಿ, ಹುಟ್ಟುಹಬ್ಬದ ಶುಭಾಶಯ ಹೇಳಿದ್ದಾರೆ. ಅದಕ್ಕೆ ಹೇಳೋದು ಗೆದ್ದವರ ಜೊತೆ ಸ್ನೇಹಿತರು ಇರುತ್ತಾರೆ. ಆದ್ರೆ ಸೋತವನ ಜೊತೆ ನಿಜವಾದ ಸ್ನೇಹಿತ ಇರ್ತಾನೆ ಅನ್ನೋದಕ್ಕೆ ನಟ ಧ್ವನಿರ್ ಸಾಕ್ಷಿ.
ಇದನ್ನೂ ಓದಿ : ಕೆಲವರು ಕಟುಕರಿರ್ತಾರೆ ಅವರಿಗೆ ಕಣ್ಣೀರೇ ಬರಲ್ಲ – ನಿಖಿಲ್ ಕಣ್ಣೀರು ಹಾಕಿದ್ದನ್ನು ಟೀಕಿಸಿದ್ದ ಕಾಂಗ್ರೆಸ್ಗೆ ಹೆಚ್ಡಿಕೆ ತಿರುಗೇಟು..!