ಬೆಂಗಳೂರು : ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ಅವರು ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಂಧನದಲ್ಲಿದ್ದ ದರ್ಶನ್‌ಗೆ ಹೈಕೋರ್ಟ್ ಚಿಕಿತ್ಸೆ ಪಡೆಯಲು 6 ವಾರಗಳ ಮಧ್ಯಂತರ ಜಾಮೀನು ನೀಡಿದೆ. ದರ್ಶನ್‌ಗೆ ಎಲ್ಲಾ ರೀತಿಯ ಪ್ರಿಲಿಮಿನರಿ ಟೆಸ್ಟ್ ಮಾಡ್ತಿದ್ದೇವೆ ಅಂತಾ ದರ್ಶನ್ ಚಿಕಿತ್ಸಾ ತಂಡದ ಮುಖ್ಯಸ್ಥ ಡಾ. ನವೀನ್ ಅಪ್ಪಾಜಿಗೌಡ ಹೇಳಿದ್ದಾರೆ.
ನವೀನ್ ಅಪ್ಪಾಜಿ ಗೌಡ ಅವರು ಮೊದಲ ಪ್ರತಿಕ್ರಿಯೆ ನೀಡಿ, ದರ್ಶನ್‌ಗೆ ಎಡಗಾಲು ವೀಕ್ ಇದೆ, ತುಂಬಾ ನೋವಿದೆ. ನೋವು ಕಡಿಮೆ ಮಾಡಲು ಪೇನ್ ಕಿಲ್ಲರ್ ಕೊಟ್ಟಿದ್ದೇವೆ. ಎಲ್ಲಾ ಟೆಸ್ಟ್ ರಿಪೋರ್ಟ್ ಬರಲು 48 ಗಂಟೆ ಬೇಕು. ವೈದ್ಯಕೀಯ ಪರೀಕ್ಷೆ ಪೂರ್ಣವಾಗಲು 24 ಗಂಟೆ ಬೇಕು. ಆ ಬಳಿಕವೇ ದರ್ಶನ್‌ಗೆ ಏನು ಮಾಡಬೇಕು ಅಂತ ನಿರ್ಧರಿಸ್ತೇವೆ ಎಂದಿದ್ದಾರೆ.
ಒಂದು ವಾರದ ಹಿಂದೆ ಮಾಡಿದ ಎಂಆರ್ಐ ಫಿಲ್ಮ್ ನಮಗೆ ಲಭ್ಯವಾಗಿಲ್ಲ. ಆದ್ದರಿಂದ ಇನ್ನೊಮ್ಮೆ ಎಂಆರ್ಐ ಮಾಡಬೇಕಾಗುತ್ತದೆ. ಸದ್ಯಕ್ಕೆ ಅವರಿಗೆ ತುಂಬ ನೋವು ಇದೆ. ಶಸ್ತ್ರ ಚಿಕಿತ್ಸೆಯ ಅಗತ್ಯ ಇದೆಯೋ ಇಲ್ಲವೋ ಎಂಬುದು ಈಗಲೇ ಹೇಳೋಕೆ ಆಗಲ್ಲ. ತುಂಬ ನೋವು ಇರುವುದರಿಂದ ಔಷಧಿ ನೀಡಲು ಆರಂಭಿಸಿದ್ದೇವೆ ಎಂದಿದ್ದಾರೆ ಡಾ. ನವೀನ್ ಅಪ್ಪಾಜಿಗೌಡ.
ಇದನ್ನೂ ಓದಿ : ಬೆನ್ನು ನೋವಿನಿಂದ ಬೆಂಡಾದ ದರ್ಶನ್ – ಹೇಗೆ ನಡೀತಿದೆ ದಾಸನಿಗೆ ಚಿಕಿತ್ಸೆ?