ಬಿಗ್ ಬಾಸ್ ಸೀಸನ್ 11ರ ಮನೆಯಲ್ಲಿ ಬಹುತೇಕ ಸ್ಪರ್ಧಿಗಳಿಗೆ ಅವರವರ ಮನೆಗಳಿಂದ ಪತ್ರಗಳನ್ನು ತರಿಸಿಕೊಡಲಾಗಿದೆ. ಇದನ್ನು ಓದಿದ ಸ್ಪರ್ಧಿಗಳು ಸಂತಸಗೊಂಡಿದ್ದಾರೆ. ಆದರೆ, ಕಿರುತೆರೆ ನಟಿ ಐಶ್ವರ್ಯಾ ಸಿಂಧೋಗಿ ಅವರಿಗೆ ಪತ್ರ ಬರೆಯಲು ತಂದೆ-ತಾಯಿ ಇಲ್ಲದ ಕಾರಣ ಯಾವುದೇ ಪತ್ರಗಳು ಕೂಡ ಬಂದಿಲ್ಲ.
ಎಲ್ಲರಿಗೂ ಪತ್ರಗಳು ತಲುಪಿದ ನಂತರ ಶಿಶಿರ್ ಅವರು ಐಶ್ವರ್ಯ ಸಿಂಧೋಗಿ ಬಿಟ್ಟು ಎಲ್ಲರಿಗೂ ಪತ್ರ ಬಂದಿದ್ದು, ಅವುಗಳನ್ನು ತಲುಪಿಸಲಾಗಿದೆ ಎಂದು ಹೇಳುತ್ತಾರೆ. ಆಗ ಬಿಗ್ ಬಾಸ್ ಮನೆಯಲ್ಲಿ ಐಶ್ವರ್ಯಾ ಕಣ್ಣೀರಿಡುತ್ತಾ ಕುಟುಂಬವನ್ನು ಕಳೆದುಕೊಂಡ ನೋವಿನಲ್ಲಿರುತ್ತಾರೆ. ಎಲ್ಲರೂ ಸಮಾಧಾನ ಮಾಡುತ್ತಿರುತ್ತಾರೆ. ಆಗ ಬಿಗ್ ಬಾಸ್ ಮನೆಯಲ್ಲಿ ಬಜರ್ ಸೌಂಡ್ ಬಂದ ನಂತರ ಸ್ಟೋರ್ ರೂಮಿನಿಂದ ಒಂದು ಪತ್ರ ಬರುತ್ತದೆ. ಅದು ಐಶ್ವರ್ಯ ಅವರಿಗೆ ಬಂದ ಪತ್ರವಾಗಿರುತ್ತದೆ. ಅದನ್ನು ಸ್ವತಃ ಬಿಗ್ ಬಾಸ್ ಐಶ್ವರ್ಯ ಅವರಿಗೆ ಬರೆದಿರುತ್ತಾರೆ.
ಅಪ್ಪ-ಅಮ್ಮ ಇಬ್ಬರೂ ಇಲ್ಲವಾದ್ದರಿಂದ ಸ್ವತಃ ಬಿಗ್ಬಾಸ್ ಐಶ್ವರ್ಯಾ ಕುಟುಂಬದಂತೆ ಪತ್ರ ಬರೆದಿದ್ದಾರೆ. ಬಿಗ್ಬಾಸ್ ಬರೆದ ಪತ್ರ ಓದಿ ಐಶ್ವರ್ಯ ಭಾವುಕರಾಗಿದ್ದಾರೆ. ಈ ಪತ್ರ ಐಶ್ವರ್ಯ ಕೈಗೆ ಸೇರಿದ ನಂತರ ಧ್ವನಿಯ ಮೂಲಕ ಮಾತನಾಡುವ ಬಿಗ್ ಬಾಸ್, ಪ್ರೀತಿಯ ಐಶ್ವರ್ಯ ನನ್ನದೊಂದು ಪತ್ರ. ನೀವು ನನ್ನ ಮನೆಗೆ ಆಗಮಿಸಿದ ಕ್ಷಣದಿಂದ ನೀವು ನನ್ನ ಕುಟುಂಬದವರಾಗಿದ್ದೀರಿ. ನಾನಿರುವೆ ನಿಮ್ಮೊಂದಿಗೆ, ಈ ಮನೆಯ ಸದಸ್ಯರಿದ್ದಾರೆ ನಿಮ್ಮೊಂದಿಗೆ. ಇಂತಿ ನಿಮ್ಮ ಬಿಗ್ ಬಾಸ್… ಎಂದು ಹೇಳುತ್ತಾರೆ.
ಇದನ್ನೂ ಓದಿ : BGS ಆಸ್ಪತ್ರೆಗೇ ಸೇರಿದ್ದೇಕೆ ನಟ ದರ್ಶನ್ ? ಈ ನಿರ್ಧಾರಕ್ಕೆ ಕಾರಣ ಏನು?
Post Views: 326