ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ಮಧ್ಯಂತರ ಜಾಮೀನು ಪಡೆದು ಜೈಲಿಂದ ಹೊರಗೆ ಬಂದಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ಇದೀಗ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ನುರಿತ ವೈದ್ಯರ ತಂಡ ನಟ ದರ್ಶನ್ಗೆ ಚಿಕಿತ್ಸೆ ನೀಡುತ್ತಿದೆ.
ಬಿಜಿಎಸ್ ಆಸ್ಪತ್ರೆ ತಲುಪಿದ ದರ್ಶನ್ ಕಾರು ಇಳಿಯೋ ವೇಳೆ ನಿಲ್ಲೋಕು ಆಗದೆ, ನಡೆಯೋಕು ಆಗದೆ ಒದ್ಡಾಡ್ತಿದ್ರು. ದರ್ಶನ್ ಮುಖದಲ್ಲಿ ನೋವು ಎದ್ದು ಕಾಣ್ತಿತ್ತು. ಇದೀಗ ದರ್ಶನ್ ಅವರನ್ನು ಬಿಜಿಎಸ್ ಆಸ್ಪತ್ರೆಯ ವಿಐಪಿ ಸೂಟ್ಗೆ ಶಿಫ್ಟ್ ಮಾಡಲಾಗಿದೆ.
ದರ್ಶನ್ ಬಿಜಿಎಸ್ ಆಸ್ಪತ್ರೆ ದಾಖಲಾಗ್ತಿದ್ದಂತೆ. ವೈದ್ಯರು ನಟನಿಗೆ ಬಿಪಿ, ಶುಗರ್, ಇಸಿಜಿ ತಪಾಸಣೆ ಮಾಡ್ತಾರೆ. ಬೆನ್ನಿನ ಎಲ್ 5 ಹಾಗೂ ಎಸ್ 1 ನಲ್ಲಿ ಊತ ಕಾಣಿಸಿಕೊಂಡ ಹಿನ್ನೆಲೆ ನಟ ದರ್ಶನ್ಗೆ ವಿಪರೀತ ನೋವು ಕಾಣಿಸಿಕೊಂಡಿದೆ. ಡ್ಯಾಮೇಜ್ ನ ಪ್ರಮಾಣ ತಿಳಿಯಲು ದರ್ಶನ್ ಮೊದಲಿಗೆ MRI ಸ್ಕ್ಯಾನಿಂಗ್ ಮಾಡಲಿದ್ದಾರೆ. MRI ಸ್ಕ್ಯಾನಿಂಗ್ ರಿಪೋರ್ಟ್ ನಂತರವಷ್ಟೇ ವೈದ್ಯರು ಮುಂದಿನ ಚಿಕಿತ್ಸೆ ವಿಧಾನ ನಿರ್ಧಾರ ಮಾಡಲಿದ್ದಾರೆ. ಮಾತ್ರೆ, ಫಿಸಿಯೋ ಥೆರಪಿ ಹಾಗೂ ರೆಸ್ಟ್ ಮೂಲಕ ಗುಣವಾಗುತ್ತಾ ಅನ್ನೊದನ್ನು ನೋಡಬೇಕಾಗುತ್ತದೆ.
ಸದ್ಯ ದರ್ಶನ್ ಪ್ರಾಥಮಿಕ ತಪಾಸಣೆ ಮುಗಿಸಿ ಆಸ್ಪತ್ರೆ ಕಟ್ಟಡದ ನಾಲ್ಕನೇ ಫ್ಲೋರ್ ಗೆ ದರ್ಶನ್ ಶಿಫ್ಟ್ ಆಗಿದ್ದಾರೆ. ಒಂದು ಲಾಬಿ, ಹಾಲ್, ಒಂದು ವಿಶಾಲವಾದ ಕೊಠಡಿ ಹಾಗೂ ಸಣ್ಣ ಕಿಚನ್ ಸೂಟ್ ರೂಂನಲ್ಲಿ ಇದೆ.
ಇದನ್ನೂ ಓದಿ : BGS ಆಸ್ಪತ್ರೆಯಲ್ಲಿ ದರ್ಶನ್ ಅಡ್ಮಿಟ್ – ಹೈಟೆಕ್ ಆಗಿರೋ ಸೂಟ್ ರೂಮ್ ಬುಕ್..!