Download Our App

Follow us

Home » ರಾಜ್ಯ » ಕನ್ನಡಕ್ಕೆ ಅಪಮಾನವಾದ್ರೆ ಸರ್ಕಾರ ಸುಮ್ಮನಿರಲ್ಲ – ಸೋಷಿಯಲ್​ ಮೀಡಿಯಾ ಕಿಡಿಗೇಡಿಗಳಿಗೆ ಸಿಎಂ ವಾರ್ನಿಂಗ್​​​..!

ಕನ್ನಡಕ್ಕೆ ಅಪಮಾನವಾದ್ರೆ ಸರ್ಕಾರ ಸುಮ್ಮನಿರಲ್ಲ – ಸೋಷಿಯಲ್​ ಮೀಡಿಯಾ ಕಿಡಿಗೇಡಿಗಳಿಗೆ ಸಿಎಂ ವಾರ್ನಿಂಗ್​​​..!

ಬೆಂಗಳೂರು : ಸೋಷಿಯಲ್​ ಮೀಡಿಯಾದಲ್ಲಿ ಕನ್ನಡ ಮತ್ತು ಕನ್ನಡಿಗರಿಗೆ ಹೀಯಾಳಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇದು ನಾಡದ್ರೋಹ, ಅಂತವರ ವಿರುದ್ಧ ಸರ್ಕಾರ ಮುಲಾಜಿಲ್ಲದೇ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ 69ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಮಾತನಾಡಿದ ಸಿಎಂ,  ಸೋಷಿಯಲ್​ ಮೀಡಿಯಾ ಕಿಡಿಗೇಡಿಗಳಿಗೆ ವಾರ್ನಿಂಗ್​​​ ನೀಡಿದ್ದಾರೆ. ಕನ್ನಡಕ್ಕೆ ಅಪಮಾನವಾದ್ರೆ ಸರ್ಕಾರ ಸುಮ್ಮನಿರಲ್ಲ. ನಾಡದ್ರೋಹಿಗಳನ್ನು ಸರ್ಕಾರ ಎಂದಿಗೂ ಸಹಿಸೋದಿಲ್ಲ, ಅಂತವರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಕೆಲವರು ಉದ್ದೇಶ ಪೂರ್ವಕವಾಗಿಯೇ ಕನ್ನಡಕ್ಕೆ ಅವಮಾನ ಮಾಡುತ್ತಿದ್ದಾರೆ. ಕನ್ನಡ ನಾಡು-ನುಡಿ, ಸಂಸ್ಕೃತಿ ಬಗ್ಗೆ ಕೇವಲವಾಗಿ ಪೋಸ್ಟ್ ಹಾಕ್ತಿದ್ದಾರೆ. ಕನ್ನಡಿಗರ ಸ್ವಾಭಿಮಾನವನ್ನು ಯಾರೂ ಕೆಣಕಬಾರದು. ಇಂಥಾ ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಇನ್ನು ನಾವೆಲ್ಲರೂ ಕನ್ನಡಿಗರಾಗಬೇಕು. ದುರಾಭಿಮಾನ ಇರಬಾರದು. ಅಭಿಮಾನ ಇರಬೇಕು. ಬೇರೆ ರಾಜ್ಯಗಳಲ್ಲಿ ದುರಾಭಿಮಾನ ಇರುತ್ತೆ. ಹಾಗೆ ಇರಬಾರದು. ಯಾರಿಗೆ ಕನ್ನಡ ಮಾತನಾಡುವುದಕ್ಕೆ ಬರೊಲ್ಲಾ ಅಂತ ಜನರಿಗೆ ಅವರಿಗೆ ಕನ್ನಡ ಕಲಿಸುವ ಕೆಲಸ ಮಾಡಬೇಕು. ಇಂದು ನಾವೆಲ್ಲಾ ಕನ್ನಡಿಗರಾಗಿರುತ್ತೇವೆ. ವ್ಯವಹಾರದಲ್ಲಿ ಕನ್ನಡಿಗರಾಗಿರುತ್ತೇವೆ ಎಂದು ಶಪಥ ಮಾಡೋಣಾ ಎಂದು ಕರೆ ನೀಡಿದರು.

ಇದನ್ನೂ ಓದಿ : ಕನ್ನಡ ರಾಜ್ಯೋತ್ಸವ ಭಾಷಣದಲ್ಲಿ ಕೇಂದ್ರದ ವಿರುದ್ಧ ಸಿಡಿದೆದ್ದ ಸಿಎಂ ಸಿದ್ದು..!

Leave a Comment

DG Ad

RELATED LATEST NEWS

Top Headlines

ಅರಣ್ಯ ಇಲಾಖೆಯಲ್ಲಿ ಲಂಚದ ರೇಟ್ ​ಕಾರ್ಡ್.. ಅಪ್ರೈಸಲ್ ಕಮಿಟಿಯಲ್ಲಿ ಲಕ್ಷ ಲಕ್ಷ ಲೂಟಿ..!

ಬೆಂಗಳೂರು : ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಸ್ಟೇಟ್ ಲೆವೆಲ್ ಎಕ್ಸ್​ಫರ್ಟ್​ ಅಪ್ರೈಸಲ್ ಕಮಿಟಿ ವಿರುದ್ದ ಇದೀಗ ಲಕ್ಷ ಲಕ್ಷ ಹಣ ಸುಲಿಗೆ ಮಾಡುತ್ತಿರುವ ಗಂಭೀರ ಆರೋಪ

Live Cricket

Add Your Heading Text Here