ಬೆಂಗಳೂರು : ಬೆಸ್ಕಾಂ AE ನವೀನ್ ಕುಮಾರ್ ಎಂಬಾತ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ನಾಗವಾರದ O & M ಯೂನಿಟ್ AE ನವೀನ್ ಕುಮಾರ್ 80 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತಾ ಬಲೆಗೆ ಬಿದ್ದಿದ್ದಾನೆ.
ವಿದ್ಯುತ್ ಪೂರೈಕೆಯ ಹೊಸ ಸಂಪರ್ಕ ಪಡೆಯಲು ಎನ್. ನಾಗೇನಹಳ್ಳಿ ನಿವಾಸಿಯಿಂದ 80 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು.
ನಿನ್ನೆ ಸಂಜೆ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ಟ್ರಾಪ್ ಮಾಡಿದ್ದು, ಆರೋಪಿಯನ್ನ ಬಂಧಿಸಿ ಲೋಕಾಯುಕ್ತ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಬಿಗ್‌ಬಾಸ್ ಮನೆಯಲ್ಲಿ ರೇಡಿಯೋ ಸ್ಟೇಷನ್..!
Post Views: 328