Download Our App

Follow us

Home » ರಾಜಕೀಯ » ವಕ್ಫ್​ ಆಸ್ತಿ ರಾಷ್ಟ್ರೀಕರಣಗೊಳಿಸಿ – ಪ್ರಧಾನಿ ಮೋದಿಗೆ ಬಿಜೆಪಿ ಶಾಸಕ ಯತ್ನಾಳ್​ ಪತ್ರ..!

ವಕ್ಫ್​ ಆಸ್ತಿ ರಾಷ್ಟ್ರೀಕರಣಗೊಳಿಸಿ – ಪ್ರಧಾನಿ ಮೋದಿಗೆ ಬಿಜೆಪಿ ಶಾಸಕ ಯತ್ನಾಳ್​ ಪತ್ರ..!

ವಿಜಯನಗರ : ವಕ್ಫ್​​​​​​​​​​​​ ಆಸ್ತಿ ದಂಗಲ್ ರಾಜ್ಯದಲ್ಲಿ ತೀವ್ರ ಸ್ವರೂಪ ಪಡೆದುಕೊಳ್ತಿದೆ. ಇದೀಗ ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣ ಮಾಡುವಂತೆ ಆಗ್ರಹಿಸಿ ಖುದ್ದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ವಕ್ಫ್ ಮಂಡಳಿಯು ದೇಶದಾದ್ಯಂತ ರೈತರು, ಭೂಮಾಲೀಕರು, ದೇವಸ್ಥಾನಗಳು, ಟ್ರಸ್ಟ್​ಗಳು ಮತ್ತು ಮಠಗಳ ಜಮೀನುಗಳ ಮೇಲೆ ಹಕ್ಕು ಸಾಧಿಸುವ ಅನಿಯಂತ್ರಿತ, ಸ್ಪಷ್ಟ ಉಲ್ಲಂಘನೆಯನ್ನು ಗಮನದಲ್ಲಿಟ್ಟುಕೊಂಡು ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಲು ಪ್ರಧಾನಿ ನರೇಂದ್ರ ಮೋದಿಜಿ ಅವರಿಗೆ ಪತ್ರ ಬರೆದಿದ್ದೇನೆ.

ದೇಶದ ಎಲ್ಲ ಪ್ರಜೆಗಳಿಗೂ ಭೂಮಿಯ ಮೇಲೆ ಸಮಾನ ಹಕ್ಕಿದೆ. ವಕ್ಫ್ ನ ಉದ್ದೇಶವು ಕಲ್ಯಾಣ ಮತ್ತು ಸಮಾಜ ಸೇವೆಯಾಗಿದ್ದರೆ. ಭಾರತವು ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಪಕ್ಷಪಾತ ಮತ್ತು ಧಾರ್ಮಿಕ ತಾರತಮ್ಯವಿಲ್ಲದೆ ಇದನ್ನು ಮಾಡಬೇಕಾಗಿದೆ.

ದೇಶದ ಸಂಪನ್ಮೂಲ ಯಾವುದೇ ಸೀಮಿತ ಕೋಮಿಗೆ ಸೇರುವುದು ಜಾತ್ಯತೀತ ತತ್ವದ ವಿರುದ್ಧವಾಗಿರುತ್ತದೆ. ಆದ್ದರಿಂದ, ಅದನ್ನು ಸದ್ಬಳಕೆ ಮಾಡುವ ಸದುದ್ದೇಶದಿಂದ ಪ್ರಧಾನಿ ಅವರಿಗೆ ಮನವಿ ಸಲ್ಲಿಸಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಬೆಳಕಿನ ಹಬ್ಬದಂದೇ ಕಲ್ಯಾಣದ ಖುಷಿ ಕೊಟ್ಟ ಡಾಲಿ ಧನಂಜಯ್ ​​​- ಇಲ್ಲಿವೆ ಮುದ್ದಾದ ಜೋಡಿಯ ಪೋಟೋಸ್..!​ 

Leave a Comment

DG Ad

RELATED LATEST NEWS

Top Headlines

ನನ್ನ ಸರ್ಕಾರ ಕಿತ್ತಾಕ್ಬೇಕು ಅಂತಾ 50 MLAಗಳಿಗೆ ಬಿಜೆಪಿ ತಲಾ 50 ಕೋಟಿ ರೂ. ಆಫರ್ – ಸಿಎಂ ಸಿದ್ದು ಬಿಗ್​ ಬಾಂಬ್..!​​​

ಮೈಸೂರು : ಕಾಂಗ್ರೆಸ್‌ನ 50 MLAಗಳಿಗೆ ತಲಾ 50 ಕೋಟಿ ರೂ. ಆಮಿಷವೊಡ್ಡುವ ಮೂಲಕ ಪ್ರತಿಪಕ್ಷ ಬಿಜೆಪಿಯು ಹೇಗಾದ್ರೂ ಮಾಡಿ ನನ್ನ ಸರ್ಕಾರವನ್ನು ಕಿತ್ತಾಕ್ಬೇಕು ಅಂತಾ ಯತ್ನಿಸಿತ್ತು.

Live Cricket

Add Your Heading Text Here