ಬೆಂಗಳೂರು : ಬೆಂಗಳೂರಿನಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಯುವಕನೋರ್ವ ಸಾವು ಬದುಕಿನ ಮಧ್ಯೆ ಒದ್ದಾಡುತ್ತಿದ್ರು ನೆರವಿಗೆ ಬಾರದೆ ಹೊಯ್ಸಳ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಯುವಕನ ಮೇಲೆ ಲಾಂಗು-ಮಚ್ಚಿನಿಂದ ಗ್ಯಾಂಗ್ ಹಲ್ಲೆ ಮಾಡಿತ್ತು. ವಿಚಾರ ತಿಳಿದು ಹೊಯ್ಸಳ ಪೊಲೀಸರು ಸ್ಥಳಕ್ಕೆ ಹೋಗಿದ್ದರು. ಆದ್ರೆ ಹಲ್ಲೆಗೊಳಗಾದ ಯುವಕನನ್ನು ತಕ್ಷಣವೇ ಹೊಯ್ಸಳ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸದೇ ಆಂಬುಲೆನ್ಸ್ಗೆ ಕರೆ ಮಾಡಿದ್ದಾರೆ. ಘಟನೆಯನ್ನು ಸ್ಥಳೀಯ ವ್ಯಕ್ತಿ ವಿಡಿಯೋ ಮಾಡಿಕೊಂಡಿದ್ದಾರೆ. ಸದ್ಯ ಪೊಲೀಸರ ಈ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಸಂಜೀವಿನಿ ನಗರದ ಅರುಣ್ ಎಂಬಾತನ ಮೇಲೆ ಹಲ್ಲೆ ಆಗಿತ್ತು. ಹೆಗ್ಗನಹಳ್ಳಿ ಕಡೆ ಹೋಗಿದ್ದ ಅರುಣ್ ಗಲಾಟೆ ಮಾಡಕೊಂಡಿದ್ದ. ಬಳಿಕ ಕೆಲವರು ಫಾಲೋ ಮಾಡ್ಕೊಂಡು ಬಂದು ಅರುಣ್ ಮೇಲೆ ಲಾಂಗು-ಮಚ್ಚಿನಿಂದ ಹಲ್ಲೆ ನಡೆಸಿ ಅಲ್ಲಿಂದ ಎಸ್ಕೇಪ್ ಆಗಿದ್ದರು. ಸದ್ಯ ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬಿಟಿವಿ ವರದಿಯ ಇಂಪ್ಯಾಕ್ಟ್ – ಬೆಂಗಳೂರು ದಕ್ಷಿಣ ಎಸಿ ರಜನಿಕಾಂತ್ ಎತ್ತಂಗಡಿ..!