Download Our App

Follow us

Home » ಜಿಲ್ಲೆ » ಸಿಎಂ ಸಿದ್ದರಾಮಯ್ಯ ಬಟನ್​​ ಒತ್ತಿದಾಗ ಕೈಕೊಟ್ಟ ಯಂತ್ರ : ಮೈಸೂರಿನಲ್ಲಿ ಸೆಸ್ಕ್​​​ ಎಂಡಿ ಸಸ್ಪೆಂಡ್..!

ಸಿಎಂ ಸಿದ್ದರಾಮಯ್ಯ ಬಟನ್​​ ಒತ್ತಿದಾಗ ಕೈಕೊಟ್ಟ ಯಂತ್ರ : ಮೈಸೂರಿನಲ್ಲಿ ಸೆಸ್ಕ್​​​ ಎಂಡಿ ಸಸ್ಪೆಂಡ್..!

ಮೈಸೂರು : ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಗೈರಾಗಿ ಕರ್ತವ್ಯಲೋಪ ಎಸಗಿದ, ಶಿಷ್ಟಾಚಾರ ಉಲ್ಲಂಘನೆಯ ಆರೋಪದಡಿ ಸೆಸ್ಕ್​​​​​ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್​​.ಶ್ರೀಧರ್​ ಅವರನ್ನು​​​ ಸಸ್ಪೆಂಡ್​ ಮಾಡಲಾಗಿದೆ. ಶ್ರೀಧರ್​​ ಸೂಪರ್​​​ ಟೈಂ ಸ್ಕೇಲ್​​(KAS) ಅಧಿಕಾರಿಯಾಗಿದ್ದು, ಇವರನ್ನು ಇಲಾಖಾ ವಿಚಾರಣೆ ಬಾಕಿ ಇಟ್ಟು ಸೇವೆಯಿಂದ ಸಸ್ಪೆಂಡ್​ ಮಾಡಿದ್ದಾರೆ.

ಪಿರಿಯಾಪಟ್ಟಣದ ಮುತ್ತಿನಮುಳುಸೋಗೆ ಬಳಿ ನಿನ್ನೆ ಕಾವೇರಿ ನದಿಯಿಂದ ನೀರೆತ್ತಿ 79 ಗ್ರಾಮಗಳಲ್ಲಿ ಬರುವ 150 ಕೆರೆಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲು ಸಿಎಂ ಸಿದ್ದರಾಮಯ್ಯ ಬಂದಿದ್ದರು. ಈ ವೇಳೆ ಸಿಎಂ ಬಟನ್​​ ಒತ್ತಿದಾಗ ಯಂತ್ರ ಚಾಲನೆ ಆಗದೇ ಸಿಎಂ ಮುಜುಗರಕ್ಕೆ ಒಳಗಾಗಿದ್ದರು ಮತ್ತು
ಅಧಿಕಾರಿಗಳ ವಿರುದ್ಧ ಸಿದ್ದರಾಮಯ್ಯ ಅವರು ಫುಲ್​ ಗರಂ ಆಗಿದ್ದರು.

ಹಾಗಾಗಿ ಮುಜುಗರಕ್ಕೆ ನೇರ ಕಾರಣವಾಗಿದ್ದರಿಂದ ಸೆಸ್ಕ್​ ಎಂಡಿ ಶ್ರೀಧರ್​ ಅವರನ್ನು​​ ಸಸ್ಪೆಂಡ್ ಮಾಡಿದ್ದಾರೆ. ಹಾಗೆಯೇ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ : ಬಿಟ್​ ಕಾಯಿನ್​ ಕೇಸ್​ : ಇನ್ಸ್​ಪೆಕ್ಟರ್ ಪ್ರಶಾಂತ್​ ಬಾಬು​​ ಸೇರಿ ಇಬ್ಬರು ಅರೆಸ್ಟ್..!

Leave a Comment

DG Ad

RELATED LATEST NEWS

Top Headlines

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕ್ರಿಕೆಟಿಗ K.L ರಾಹುಲ್-ಅಥಿಯಾ ದಂಪತಿ..!

ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮತ್ತು ಕೆ.ಎಲ್ ರಾಹುಲ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಾಯಿಯಾಗುತ್ತಿರುವ ಗುಡ್ ನ್ಯೂಸ್ ಅನ್ನು ಖುದ್ದು ಆಥಿಯಾ ಶೆಟ್ಟಿ ತಮ್ಮ ಇನ್​​ಇಸ್ಟಾಗ್ರಾಮ್​ನಲ್ಲಿ

Live Cricket

Add Your Heading Text Here